Site icon Vistara News

VISTARA TOP 10 NEWS : 400 ಸೀಟ್‌ ಟಾರ್ಗೆಟ್‌ ಕೊಟ್ಟ ಮೋದಿ, ಚುನಾವಣೆ ಕಹಳೆ ಮೊಳಗಿಸಿದ ಕಾಂಗ್ರೆಸ್‌

Vistara News top 10 News 17-2

1.BJP Meeting: ಬಿಜೆಪಿ ರಾಷ್ಟ್ರೀಯ ಸಭೆಗೆ ಚಾಲನೆ; 400 ಕ್ಷೇತ್ರಗಳ ಟಾರ್ಗೆಟ್ ಕೊಟ್ಟ ಮೋದಿ
2024ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿಯು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿಯೇ, ದೆಹಲಿಯಲ್ಲಿ ಶನಿವಾರ (ಫೆಬ್ರವರಿ 17) ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಸಮಾವೇಶ (BJP National Council Meeting) ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಸೇರಿ ಹಲವರು ಚಾಲನೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2 ಕರಾವಳಿಯಲ್ಲಿ ಕಾಂಗ್ರೆಸ್‌ ಕಹಳೆ; ನಮ್ಮನ್ನು ಬೈಬೇಡಿ, ಗ್ಯಾರಂಟಿ ಮರೀಬೇಡಿ ಎಂದ ಖರ್ಗೆ
ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಉತ್ತಮ ಸಾಧನೆ ಮಾಡುವ ತಂತ್ರಗಾರಿಕೆ ಹೆಣೆಯುತ್ತಿರುವ ಕಾಂಗ್ರೆಸ್‌ ಕರಾವಳಿಯಲ್ಲಿ ಮೊದಲ ಬೃಹತ್‌ ಸಮಾವೇಶ (Congress Samavesha) ನಡೆಸುವ ಮೂಲಕ ಹೆಚ್ಚು ಕಡಿಮೆ ಪ್ರಚಾರದ ಕಣಕ್ಕೆ ಧುಮುಕಿದೆ. ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶವನ್ನು ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ಹಿರಿಯ ನಾಯಕರೆಲ್ಲ ಭಾಗವಹಿಸಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇದನ್ನೂ ಓದಿ : ಮೈಸೂರು ಕ್ಷೇತ್ರಕ್ಕೆ ಬಡವರ ಮಗ; ಕಾಂಗ್ರೆಸ್‌ನಿಂದ ಕಣಕ್ಕಿಳೀತಾರಾ ಡಾಲಿ ಧನಂಜಯ?

3.Jnanpith Award: ಗುಲ್ಜಾರ್‌, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ
ಚಲನಚಿತ್ರ ಸಾಹಿತಿ, ಉರ್ದು ಕವಿ ಗುಲ್ಜಾರ್‌ (Gulzar) ಹಾಗೂ ಖ್ಯಾತ ಸಂಸ್ಕೃತ ವಿದ್ವಾಂಸ, ಜಗದ್ಗುರು ರಾಮಭದ್ರಾಚಾರ್ಯ (Rambhadracharya) ಅವರಿಗೆ 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ (Jnanpith Award) ಘೋಷಿಸಲಾಗಿದೆ. 58ನೇ ಜ್ಞಾನಪೀಠ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ ಎಂದು ಜ್ಞಾನಪೀಠ ಸಮಿತಿಯು ಮಾಹಿತಿ ನೀಡಿದೆ. ಜ್ಞಾನಪೀಠ ಪ್ರಶಸ್ತಿಯು ದೇಶದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತ್ಯುಚ್ಚ ಪ್ರಶಸ್ತಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4.Kamal Nath: ದೆಹಲಿಗೆ ಆಗಮಿಸಿದ ಕಮಲ್‌ನಾಥ್;‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ?
ಲೋಕಸಭೆ ಚುನಾವಣೆಗೆ (Lok Sabha Election 2024) ಮೊದಲೇ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ (Kamal Nath) ಅವರು ದೆಹಲಿಗೆ ಆಗಮಿಸಿದ್ದು, ಶೀಘ್ರದಲ್ಲೇ ಅವರು ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕಮಲ್‌ನಾಥ್‌ ಅವರ ಪುತ್ರ ನಕುಲ್‌ನಾಥ್‌ ಅವರು ಕೂಡ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದಕ್ಕಾಗಿ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.HSRP Number Plate ಅಪ್ಲೈ ಮಾಡುವಾಗ ಹುಷಾರ್‌; ನಕಲಿ ಲಿಂಕ್‌ಗಳಿಂದ ಮೋಸ ಹೋಗದಿರಿ!
ಈಗ ರಾಜ್ಯದೆಲ್ಲೆಡೆ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌ – High Security Registration Number Plate- HSRP Number plate) ಹಾಕುವ ಧಾವಂತ ಕಂಡುಬರುತ್ತಿದೆ. ‌ ಈ ತುರ್ತನ್ನು ಮನಗಂಡಿರುವ ಖದೀಮರು ಈಗ ಇಲ್ಲೂ ವಂಚನೆಗೆ ಮುಂದಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.Arvind Kejriwal: ವಿಶ್ವಾಸಮತ ಗೆದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್; 54 ಎಎಪಿ ಶಾಸಕರ ಬೆಂಬಲ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷ ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸ ಮತ ಗೆದ್ದಿದೆ. ಒಟ್ಟು 62 ಎಎಪಿ ಶಾಸಕರ ಪೈಕಿ 54 ಮಂದಿ ಸರ್ಕಾರದ ಪರ ಮತ ಚಲಾಯಿಸಿದ್ದಾರೆ. ಧ್ವನಿ ಮತದ ಮೂಲಕ ವಿಶ್ವಾಸಮತ ಯಾಚನೆ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7.Democracy Index: ಪಾಕಿಸ್ತಾನದ ಪ್ರಜಾಪ್ರಭುತ್ವ ವಿಶ್ವದಲ್ಲೇ ಕಳಪೆ; ಭಾರತದ ಸ್ಥಿತಿ ಏನು?
ಪಾಕಿಸ್ತಾನದಲ್ಲಿ ಅರಾಜಕತೆ ತಲೆದೋರಿದೆ. ಅಸಮರ್ಥ ನಾಯಕತ್ವ, ಸೇನೆಯ ಕೈಗೊಂಬೆಯಾಗಿ ಸರ್ಕಾರಗಳ ಆಡಳಿತ, ಉಗ್ರವಾದದ ಪೋಷಣೆ, ಉಗ್ರರಿಗೆ ರಕ್ಷಣೆ ನೀಡಿದ ಕಾರಣ ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಪಾಕ್‌ ದಿವಾಳಿಯಾಗಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಜಾಪ್ರಭುತ್ವವು (Pakistan Democracy) ವಿಶ್ವದಲ್ಲೇ ಮೂರನೇ ಕಳಪೆ ಪ್ರಜಾಪ್ರಭುತ್ವ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.Rambhapuri Shri : ಮಠಾಧಿಪತಿ ವಿವಾದ ; ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ತೂರಿದ ಮಹಿಳೆ
ಶ್ರೀಶೈಲ ಪೀಠದ ಜಗದ್ಗುರು ರಂಭಾಪುರಿ ಶ್ರೀಗಳ (Rambhapuri Shri) ಕಾರನ್ನು ಅಡ್ಡಗಟ್ಟಲು ಯತ್ನಿಸಿದ ಮತ್ತು ಮಹಿಳೆಯೊಬ್ಬರು ಕಾರಿಗೆ ಚಪ್ಪಲಿ (woman throws Sandals) ತೂರಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ (Bagalakote News) ಕಲಾದಗಿಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿ ಶನಿವಾರ ಈ ಘಟನೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.Rishab Shetty: ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶಿಸಿದರೆ ಉಗ್ರ ಹೋರಾಟ: ರಿಷಬ್‌ಗೆ ವಾರ್ನಿಂಗ್‌!
ಕಾಂತಾರ’ ಸಿನಿಮಾ ರಿಲೀಸ್‌ ಆಗಿ ಹಿಟ್‌ ಕಂಡ ಬಳಿಕ ಹಲವು ಧಾರಾವಾಹಿಗಳಲ್ಲಿ, ಇನ್ನಿತರ ಕಾರ್ಯಕ್ರಮಗಳಲ್ಲಿ, ನಾಟಕ ಹೀಗೆ ದೈವದ ಅಣಕು ವೇಷ ಧರಿಸುತ್ತಿರುವುದು ಕಾಮನ್‌ ಆಗಿ ಬಿಟ್ಟಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ದೈವಾರಾಧಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅದರ ಜತೆಗೆ ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶನ ಇರಬಾರದು ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಮಗ- ಸೊಸೆಗೆ ತಿಳಿಯದಂತೆ ಮನೆಗೆ ಬಂದ ಮೊಮ್ಮಗಳಿಗೆ ಗುಟ್ಟಾಗಿ ಮದುವೆ ಮಾಡಿಸಿದ ಅಜ್ಜಿ!
8ನೇ ಕ್ಲಾಸ್‌ ಹುಡುಗಿಗೆ ಆಕೆಯ ಅಜ್ಜಿಯೇ ಮದುವೆ ಮಾಡಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ (Child Marriage) ನಡೆದಿದೆ. ತಂದೆ-ತಾಯಿಗೆ ತಿಳಿಯದಂತೆ ಬಾಲಕಿಗೆ ಮದುವೆ ಮಾಡಿಸಿ ಕರೆತಂದಿದ್ದಾರೆ. ಸೊಸೆ ಎಲ್ಲಿ ತನ್ನ ಸಂಬಂಧಿಕರ ಕಡೆಯವರಿಗೆ ಕೊಟ್ಟು ಮೊಮ್ಮಗಳನ್ನು ಮದುವೆ ಮಾಡಿಸಿಬಿಡುತ್ತಾಳೋ ಎಂದುಕೊಂಡ ಅತ್ತೆ, ಆತುರದಲ್ಲಿ ಬಾಲಕಿಗೆ ಬಾಲ್ಯ ವಿವಾಹವನ್ನು ಮಾಡಿದ್ದಾರೆ. ಮೊಮ್ಮಗಳನ್ನು ತಮ್ಮ ಸಂಬಂಧಿ ಹುಡುಗನೊಂದಿಗೆ ಮೊಮ್ಮಗಳ ಮದುವೆ ಮಾಡಿಸಿ ಅಜ್ಜಿ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version