Site icon Vistara News

Vistara Top 10 News : ತಾರಕಕ್ಕೇರಿದ ನೈತಿಕ ಪೊಲೀಸ್‌ಗಿರಿ ಫೈಟ್‌, ಇಂಡಿಯಾ ಕೂಟಕ್ಕೆ ಖರ್ಗೆ ಮಾಸ್ಟರ್‌, ಮತ್ತಿತರ ಸುದ್ದಿಗಳು

vistara top 10 news 1301

1.ನೈತಿಕ ಪೊಲೀಸ್‌ಗಿರಿ: ಕಾಂಗ್ರೆಸ್‌-ಬಿಜೆಪಿ ನಡುವೆ ಬಿಗ್‌ ಫೈಟ್‌
ರಾಜ್ಯದ ಕೆಲವು ಭಾಗಗಳಲ್ಲಿ ಬೆನ್ನು ಬೆನ್ನಿಗೆ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ಗುದ್ದಾಟ ಆರಂಭಿಸಿವೆ. ಸರ್ಕಾರ ನಿದ್ದೆ ಮಾಡುತ್ತಿದೆ, ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಬಿಜೆಪಿ ಹೇಳಿದರೆ ನಮ್ಮ ಸರ್ಕಾರದಲ್ಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.
ವರದಿ 1. ಸ್ತ್ರೀ ಎಂದರೆ ಅಷ್ಟೇ ಸಾಕೆ?; ನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಕಾಂಗ್ರೆಸ್‌-ಬಿಜೆಪಿ ವಾರ್‌
ವರದಿ 2.: Basavaraja Bommai : ಗ್ಯಾಂಗ್‌ ರೇಪ್ ತನಿಖೆಗೆ ಎಸ್‌ಐಟಿ ರಚಿಸಿ; ಬಸವರಾಜ ಬೊಮ್ಮಾಯಿ ಆಗ್ರಹ
ವರದಿ 3. ಹಿಂದು-ಮುಸ್ಲಿಂ ಯಾರೇ ಆಗಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ; ಸಿಎಂ, ಡಿಕೆಶಿ ವಾರ್ನಿಂಗ್

2. Mallikarjun Kharge: ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಇಂಡಿಯಾ ಒಕ್ಕೂಟದ (India Bloc) ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವರ್ಚ್ಯುವಲ್‌ ಮೂಲಕ ಶನಿವಾರ ಮಧ್ಯಾಹ್ನ (ಜನವರಿ 13) ಇಂಡಿಯಾ ಒಕ್ಕೂಟದ ಸಭೆ ನಡೆದಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. Ayodhya Ram Mandir: ಅಯೋಧ್ಯೆಯಲ್ಲಿ ಸರ್ಪಗಾವಲು; 10,000 ಸಿಸಿ ಟಿವಿ ಕ್ಯಾಮರಾ ಅಳವಡಿಕೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ನಾಮ ಜಪ ಆರಂಭವಾಗಿದೆ. ಜನವರಿ 22ರಂದು ಭವ್ಯ ರಾಮ ಮಂದಿರದ ಉದ್ಘಾಟನೆಯಾಗಲಿದೆ. ಜನವರಿ 16ರಿಂದಲೇ ಧಾರ್ಮಿಕ ವಿಧಿ ವಿಧಾನ ಆರಂಭವಾಗಲಿದ್ದು, ಭದ್ರತೆಗಾಗಿ 10 ಸಾವಿರ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4.NIA Chargesheet : ರಾಜ್ಯದಲ್ಲಿ ಮಾರಣಹೋಮಕ್ಕೆ ಸ್ಕೆಚ್;‌ ಎಂಟು LET‌ ಉಗ್ರರ ಮೇಲೆ ಚಾರ್ಜ್‌ಶೀಟ್‌
ಬೆಂಗಳೂರಿನಲ್ಲಿ ಕಳೆದ ವರ್ಷ ಸ್ಫೋಟ ನಡೆಸಲು ಸಂಚು ನಡೆಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಐವರು ಉಗ್ರರು ಮತ್ತು ಅವರಿಗೆ ಜೈಲಿನಿಂದಲೇ ಗೈಡ್‌ ಮಾಡುತ್ತಿದ್ದ ಕೇರಳ ಮೂಲದ ಉಗ್ರ ನಸೀರ್‌ ಸಹಿತ ಎಂಟು ಮಂದಿಯ ಮೇಲೆ NIA ಚಾರ್ಜ್‌ ಶೀಟ್‌ ಹಾಕಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.HD Devegowda : ಕಾವೇರಿ ಸಂಕಷ್ಟ ಪರಿಹಾರ ಮೋದಿಯಿಂದ ಮಾತ್ರ ಸಾಧ್ಯ ಎಂದ ದೇವೇಗೌಡರು
ಕರ್ನಾಟಕ ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟವನ್ನು (Cauvery Water Dispute) ಪರಿಹಾರ ಮಾಡುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ. ಈ ಚುನಾವಣೆ ಮುಗಿದ ನಂತರ ಮತ್ತೆ ಪ್ರಧಾನಿ ಆಗಲಿರುವ ಅವರು, ಈ ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.ವಿಸ್ತಾರ ಅಂಕಣ: ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತು ಸತ್ಯವಾಗಬೇಕೆ?
ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಸುಮ್ಮನೆ ಖಾಲಿ ಹೆಮ್ಮೆ ಪಡುವುದಕ್ಕಿಂತಲೂ, ಅದರಲ್ಲಿರುವ ಸಮಸ್ಯೆಗಳ ಕಹಿ ಸತ್ಯವನ್ನೂ ನಾವು ಅರಗಿಸಿಕೊಳ್ಳಬೇಕು. ಈ ಕಾರ್ಯಕ್ಕೆ ಶ್ರೀರಾಮನನ್ನೇ ಪ್ರೇರಣೆಯಾಗಿ ತೆಗೆದುಕೊಳ್ಳದೆ ಹೋದರೆ, ವಿನ್ಸ್ಟನ್ ಚರ್ಚಿಲ್ ಹೇಳಿದ ಮಾತನ್ನು ನಾವು ಸಾಬೀತುಪಡಿಸಿದಂತಾಗುತ್ತದೆ ಅಷ್ಟೆ. ಅದಕ್ಕೆ ಅವಕಾಶ ಕೊಡುವುದು ಬೇಡ ಎನ್ನುವುದು ವಿಸ್ತಾರ ನ್ಯೂಸ್‌ನ ನಿರ್ದೇಶಕರಾಗಿರುವ ಹರಿಪ್ರಕಾಶ್‌ ಕೋಣೆಮನೆ ಅವರ ಅಭಿಮತ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

7.ಸಿಎಂ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿದ ಅನಂತ್‌ಕುಮಾರ್‌ ಹೆಗಡೆ; ಅದೇ ಅವರ ಸಂಸ್ಕೃತಿ ಎಂದ ಕಾಂಗ್ರೆಸ್‌
ಲೋಕಸಭಾ ಚುನಾವಣೆ (Parliament Elections 2024) ಸನ್ನಿಹಿತವಾಗುತ್ತಿದ್ದಂತೆಯೇ ಮತ್ತೆ ಪ್ರಚೋದನಾತ್ಮಕ ಹೇಳಿಕೆಗಳನ್ನು (Provocative Statements) ನೀಡಲು ಆರಂಭಿಸಿರುವ ಕಾರವಾರ ಸಂಸದ ಅನಂತ್‌ ಕುಮಾರ್‌ ಹೆಗಡೆ (MP Anantkumar Hegade) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.Ayodhya Ram Mandir : ಮಮತಾ ಬ್ಯಾನರ್ಜಿಯನ್ನು ಮುಮ್ತಾಜ್ ಖಾನ್ ಎಂದ ರಾಮ ಮಂದಿರದ ಅರ್ಚಕ
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಸಾಧುಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಅವರನ್ನು ಮುಮ್ತಾಜ್‌ ಖಾನ್‌ ಎಂದು ಕರೆದಿದ್ದಾರೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ರಾಮ ಮಂದಿರ ಉದ್ಘಾಟನೆ ದಿನ ಹಿಂದೂ ಸರ್ಕಾರಿ ನೌಕರರಿಗೆ ರಜೆ ನೀಡಿದ ಮಾರಿಷಸ್!‌
ಭಾರತದ ಬಹುಸಂಖ್ಯಾತರ ಭಾವನೆಗೆ ಸ್ಪಂದಿಸಿರುವ ಮಾರಿಷಸ್‌ ಸರ್ಕಾರ (Mauritius govt) ವಿಶಿಷ್ಟ ನಿರ್ಧಾರ ತೆಗೆದುಕೊಂಡಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯ ರಾಮಮಂದಿರ (Ayodhya Ram Mandir) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹಿಂದೂ ಸರ್ಕಾರಿ ನೌಕರರಿಗೆ 2 ಗಂಟೆಗಳ ವಿಶೇಷ ರಜೆಯನ್ನು ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.Murder Case : ಪ್ರಿಯಕರನ ಜತೆ ಸರಸದಲ್ಲಿದ್ದಾಗ ಗಂಡನ ಎಂಟ್ರಿ; ಕೆಲವೇ ಸೆಕೆಂಡಲ್ಲಿ ಫಿನಿಷ್‌!
ಗಂಡ ತನ್ನ ಕೆಲಸದ ಮೇಲೆ ಹೊರಗೆ ಹೋಗಿದ್ದ! ಇನ್ನು ಬರೋದು ಏನಿದ್ದರೂ ನಾಳೆ ಬೆಳಗ್ಗೆ ಎಂದುಕೊಂಡ ಆಕೆ ಆತುರದಲ್ಲಿ ಪ್ರಿಯಕರನನ್ನು ಕರೆಸಿಕೊಂಡಿದ್ದಳು (Lovers game). ಅವನೋ ಸಿಕ್ಕಿದ್ದೇ ಚಾನ್ಸ್‌ ಎಂಬಂತೆ ಓಡಿಬಂದಿದ್ದ. ಇಬ್ಬರೂ ಖುಷಿಯಿಂದ ಕುಣಿದಾಡಿ ಸರಸಕ್ಕೆ ಶುರುವಿಟ್ಟುಕೊಂಡಿದ್ದರು. ಆಗ ಬಾಗಿಲು ಬಡಿದ ಶಬ್ದ! ಗಂಡ ಬಾಗಿಲಲ್ಲಿದ್ದ. ಮುಂದೆ ನಡೆದಿದ್ದೇ ಮರ್ಡರ್‌. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version