Site icon Vistara News

Vistara Top 10 News : ಕಾಂಗ್ರೆಸ್‌ನಲ್ಲಿ ಯತೀಂದ್ರ ಹೇಳಿಕೆ ತಲ್ಲಣ, ಮಂದಿರ ಪ್ರವೇಶಿಸಿದ ರಾಮಲಲ್ಲಾ!

Vistara Top ten

1 ಲೋಕಸಭೆ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ; ಯತೀಂದ್ರ ಸ್ಫೋಟಕ ಹೇಳಿಕೆ
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ (Parliamentary Elections 2024) ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಸಿದ್ದರಾಮಯ್ಯ (CM Siddaramaiah) ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ (siddaramaiah Full time Chief Minister) ಮುಂದುವರಿಯಲಿದ್ದಾರೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ. (Yatindra siddaramaiah) ಇದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು (Congress Politics) ಸೃಷ್ಟಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ! 10 ಲೋಕಸಭಾ ಕ್ಷೇತ್ರದಲ್ಲಿ ಡ್ಯಾಮೇಜ್‌ ಮಾಡೀತೇ ಯಂತೀಂದ್ರ ಹೇಳಿಕೆ?
ಈ ಸುದ್ದಿಯನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ಉದ್ಭವ ಆಗುತ್ತಿರುವ ನಾಯಕ; ಡಿ ಕೆ ಶಿವಕುಮಾರ್‌ ವ್ಯಂಗ್ಯ

2. ಅಯೋಧ್ಯಾ ಮಂದಿರವನ್ನು ಪ್ರವೇಶಿಸಿದ ರಾಮ ಲಲ್ಲಾ ವಿಗ್ರಹ, ಜ.22ಕ್ಕೆ ಪ್ರತಿಷ್ಠಾಪನೆ
ಜನವರಿ 22ರಂದು ನಡೆಯಲಿರುವ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ (Pran Pratishta) ಧಾರ್ಮಿಕ ವಿಧಿ ವಿಧಾನಗಳು ಜನವರಿ 16ರಿಂದಲೇ ಆರಂಭವಾಗಿದ್ದು, ಜ.17, ಬುಧವಾರ ಸಂಜೆ ರಾಮ ಲಲ್ಲಾ (Ram Lalla Statue) ವಿಗ್ರಹವನ್ನು ರಾಮ ಮಂದಿರಕ್ಕೆ ತರಲಾಯಿತು. ಭಗವಾನ್ ರಾಮನ ವಿಗ್ರಹ ಇರುವ ಟ್ರಕ್‌ ರಾಮ ಮಂದಿರ ಆವರಣಕ್ಕೆ ಬಂತು. ಈ ವೇಳೆ ಜಯ ಶ್ರೀ ರಾಮ್ ಘೋಷಣೆಗಳು ಮುಗಿಲು ಮುಟ್ಟಿದವು. ಬಳಿಕ ವಿಗ್ರಹವನ್ನು ಮಂದಿರದೊಳಗೆ ಒಯ್ಯಲಾಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಜ.22ರಂದು ಶಾಲೆಗಳಲ್ಲಿ ರಾಮ ಮಂದಿರ ಲೋಕಾರ್ಪಣೆ ಲೈವ್‌ ವ್ಯವಸ್ಥೆ
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿಯೇ ಮುಖ್ಯ “ಯಜಮಾನʼ
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಿಷೇಧ ಕೋರಿ ಅಲಹಾಬಾದ್‌ ಹೈಕೋರ್ಟ್‌ಗೆ ಪಿಐಎಲ್

ರಾಮ ಮಂದಿರ ಉದ್ಘಾಟನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

3.. ಇರಾನ್‌ ಕ್ಷಿಪಣಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ; ಬೆಂಬಲಿಸುವುದೇ ಚೀನಾ?
ಉಗ್ರರನ್ನು ಒಡಲೊಳಗಿಟ್ಟುಕೊಂಡು ಕಾಪಾಡುವ, ಉಗ್ರರನ್ನು ಸಾಕಿ ಸಲಹುವ, ಹಣಕಾಸು ನೆರವು ನೀಡುವ ಪಾಕಿಸ್ತಾನಕ್ಕೆ ಉಗ್ರರೇ ಈಗ ಮುಳುವಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಲ್ಲಿರುವ ಜೈಶ್‌ ಅಲ್‌ ಅದ್ಲ್‌ (Jaish al Adl) ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ (Iran Attack) ನಡೆಸಿದೆ. ಆರ್ಥಿಕವಾಗಿ ಕಂಗೆಟ್ಟಿರುವ, ಉಗ್ರ ಪೋಷಣೆಗಾಗಿ ಜಾಗತಿಕವಾಗಿ ವಿರೋಧ ಎದುರಿಸುತ್ತಿರುವ ಪಾಕಿಸ್ತಾನವು (Pakistan) ಇರಾನ್‌ ದಾಳಿಗೆ ತತ್ತರಿಸಿಹೋಗಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಪಾಕ್‌ ಮೇಲೆ ಇರಾನ್‌ ದಾಳಿ ಮಾಡಿದ್ದೇಕೆ? ದಾಳಿಯ ಪರಿಣಾಮ ಏನು?
ಈ ಸುದ್ದಿಯನ್ನೂ ಓದಿ: ಇರಾನ್‌ನಿಂದ ತನ್ನ ರಾಯಭಾರಿ ವಾಪಸ್‌ ಕರೆಯಿಸಿಕೊಂಡ ಪಾಕಿಸ್ತಾನ

4.ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (SSLC, II PUC Exam Time Table) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. ಮಾರ್ಚ್‌ 25ರಿಂದ ಏಪ್ರಿಲ್‌ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಮಾರ್ಚ್‌ 1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸೆನ್ಸೆಕ್ಸ್‌ 1628 ಅಂಕ ಕುಸಿತ! ನಿಫ್ಟಿಯದ್ದೂ ಅದೇ ಕತೆ; 4 ಲಕ್ಷ ಕೋಟಿ ರೂ. ನಷ್ಟ
ಭಾರತೀಯ ಷೇರು ಪೇಟೆ (Indian Stock Market) ಬುಧವಾರ ಭಾರೀ ನಷ್ಟವನ್ನು ದಾಖಲಿಸಿದೆ. ಸೆನ್ಸೆಕ್ಸ್ 1,628 ಕುಸಿತ ಕಂಡು 71,501 ಅಂಕಗಳಲ್ಲಿ ಅಂತ್ಯವಾಯಿತು. ಇದೇ ವೇಳೆ, 50 ನಿಫ್ಟಿ ಕೂಡ 460 ಅಂಕಗಳನ್ನು ಇಳಿಕೆ ಕಂಡು ದಿನದಾಂತ್ಯಕ್ಕೆ 21,572 ಅಂಕ ದಾಖಲಿಸಿತು. ಪರಿಣಾಮ ಹೂಡಿಕೆದಾರರಿಗೆ ಅಂದಾಜು 4 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ(Investors Faces Loss). ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಎಸ್‌ಬಿಐಯನ್ನೂ ಹಿಂದಿಕ್ಕಿದ ಎಲ್‌ಐಸಿ ಷೇರು ನೆಗೆತ, ದೇಶದಲ್ಲೇ ಮೌಲ್ಯಯುತ ಸಂಸ್ಥೆಯ ಗುರಿ
ಈ ಸುದ್ದಿಯನ್ನೂ ಓದಿ: ವಿಶ್ವದ ಪ್ರಬಲ ಕರೆನ್ಸಿ ಪಟ್ಟಿಯಲ್ಲಿ ಅಮೆರಿಕದ ಡಾಲರ್‌ ಅಗ್ರ ಅಲ್ಲ; ಭಾರತದ್ದು?

6. ಗಲ್ವಾನ್‌ನಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ಮತ್ತೆ ಸಂಘರ್ಷ; ಗೆದ್ದಿದ್ಯಾರು?
2020ರಲ್ಲಿ ಗಲ್ವಾನ್‌ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಭಾರಿ ಸಂಘರ್ಷ (Galwan Clash) ಉಂಟಾದ ಬಳಿಕವೂ ಎರಡು ಬಾರಿ ಉಭಯ ಸೈನಿಕರ ಮಧ್ಯೆ ಭಾರಿ ಗಲಾಟೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಎಐ ಏಟು; ಗೂಗಲ್‌ ಅಮೆಜಾನ್‌ ಮುಂತಾದ ಟೆಕ್‌ ಕಂಪನಿಗಳಲ್ಲಿ 7,500 ಉದ್ಯೋಗ ಕಡಿತ
ಗೂಗಲ್‌ (Google), ಅಮೆಜಾನ್‌ (Amazon) ಸೇರಿದಂತೆ ದೈತ್ಯ ಟೆಕ್‌ ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ (Artificial Intelligence) ಹೆಚ್ಚಿನ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಗಳನ್ನು ಕಡಿತ (Job Cuts, Lay off) ಮಾಡುತ್ತಿರುವುದಾಗಿ ಸೂಚಿಸಿವೆ. ಸುಮಾರು 7,500 ಉದ್ಯೋಗಗಳು ಹೀಗೆ ಕಡಿತಗೊಳ್ಳುತ್ತಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. 14 ವರ್ಷದ ಮಗ ನೇಣಿಗೆ ಶರಣಾದ 13ನೇ ದಿನಕ್ಕೆ ತಂದೆ ಕೂಡ ಆತ್ಮಹತ್ಯೆ
ಈ ಮನೆಯ ಕಣ್ಣೀರಿಗೆ ಎಣೆಯೇ ಇಲ್ಲವೇನೋ. ಮನೆಯ ಪುಟ್ಟ ಬಾಲಕ ಸಣ್ಣ ಕಾರಣಕ್ಕೆ ಬೇಸರ ಮಾಡಿಕೊಂಡು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ (Self Harming). ಇದರ ಹೊಡೆತವನ್ನು ಸಹಿಸಿಕೊಳ್ಳುವುದೇ ಕುಟುಂಬಕ್ಕೆ ಅಸಾಧ್ಯವಾಗಿದೆ. ಅಂಥ ಹೊತ್ತಿನಲ್ಲಿ ಈಗ ಆ ಹುಡುಗನ ತಂದೆಯೂ ಮಗನ ರೀತಿಯಲ್ಲೇ (Man ends life after sons suicide) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅದೂ ಮಗ ಆತ್ಮಹತ್ಯೆ ಮಾಡಿಕೊಂಡ ಹದಿಮೂರನೇ ದಿನಕ್ಕೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಗಂಡ-ಹೆಂಡ್ತಿ ಜಗಳ ತಾರಕಕ್ಕೆ: ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವು!

9. ವಿಶ್ವ ಚಾಂಪಿಯನ್‌ ಮಣಿಸಿ ನಂ.1 ಸ್ಥಾನಕ್ಕೇರಿದ ಭಾರತದ ಪ್ರಜ್ಞಾನಂದ
: ಭಾರತದ ಉದಯೋನ್ಮುಖ ಚೆಸ್ ತಾರೆ ಆರ್ ಪ್ರಗ್ನಾನಂದ(R Praggnanandhaa) ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್​ನಲ್ಲಿ(Tata Steel Masters tournament) ವಿಶ್ವ ಚಾಂಪಿಯನ್ ಡಿಂಗ್ ಲಿರೆನ್(World Champion Ding Liren) ಅವರನ್ನು ಮಣಿಸುವ ಮೂಲಕ ನಂ. 1 ಸ್ಥಾನಕ್ಕೇರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕೈಯಿಂದ ಕ್ರೀಸ್‌ ಮುಟ್ಟಿ ರನ್‌ ಗಳಿಸಲೆತ್ನಿಸಿ ಟ್ರೋಲ್‌ ಆದ ಮೊಹಮ್ಮದ್‌ ರಿಜ್ವಾನ್‌
 ಪಾಕಿಸ್ತಾನ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್​(Mohammad Rizwan) ಟ್ರೋಲ್​ಗೆ ಒಳಗಾಗಿದ್ದಾರೆ. ಬ್ಯಾಟ್​ನಿಂದ ಕ್ರೀಸ್​ ಮುಟ್ಟುವ ಬದಲು ಕೈಗಳಿಂದಲೇ ಕ್ರೀಸ್​ ಮುಟ್ಟಲು ಪ್ರಯತ್ನಿಸಿ ನಗೆಪಾಟಲಿಗೀಡಾಗಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version