Site icon Vistara News

Vistara Top 10 News : ರಾಮ ಮಂದಿರ ಕನಸು ನನಸಿಗೆ ಕ್ಷಣಗಣನೆ, ದೇಶದಾದ್ಯಂತ ಪೂಜೆ, ಭಜನೆ ಮತ್ತು ಇತರ ಸುದ್ದಿ

Vistara-Top-10-News-2101

1.Ram Mandir: ನಾಳೆ ಭಾರತೀಯರಿಗೆ ಸುದಿನ; ಈಡೇರಲಿದೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕ್ಷಣ! ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆ ಜ.22ರ ಸೋಮವಾರ ಮಧ್ಯಾಹ್ನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಪ್ರತಿಷ್ಠಾಪನೆಯ ಮುಖ್ಯ ಯಜಮಾನರಾಗಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯಯನ್ನೂ ಓದಿ: ನಾಡಿನ ಜನರಲ್ಲೀಗ ಮೈಯಲ್ಲೂ ರಾಮ, ಮನಸ್ಸಲ್ಲೂ ರಾಮ! ಭಕ್ತರ ರಾಮೋತ್ಸವ ಕುತೂಹಲಕಾರಿ
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದೀಪ ಬೆಳಗಿಸಲು ವಾಸ್ತು ಸಲಹೆ ಇಲ್ಲಿದೆ

ರಾಮ ಮಂದಿರ ಉದ್ಘಾಟನೆ ಕುರಿತ ವಿಸ್ತೃತ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ:

2. ಸೋಮವಾರ ರಾಮ ಮಂದಿರದಲ್ಲಿ 5 ಗಂಟೆ ಕಳೆಯಲಿರುವ ಮೋದಿ; ಕಂಪ್ಲೀಟ್‌ ಮಾಹಿತಿ ಇಲ್ಲಿದೆ
ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರ (ಜನವರಿ 22) ಪ್ರಧಾನಿ ನರೇಂದ್ರ ಮೋದಿ (Narendra ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ. ಅವರ ಕಾರ್ಯಕ್ರಮದ ವಿವರ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಬಾಲ ರಾಮನ ಪ್ರಾಣ ಪ್ರತಿಷ್ಠೆ ನಡೆಯುವ ಅಭಿಜಿತ್‌ ಮುಹೂರ್ತದ ಮಹತ್ವವೇನು?

3.ಹೀಗಿತ್ತು, ರಾಮ ಜನ್ಮಭೂಮಿಗಾಗಿ ನಡೆದ 496 ವರ್ಷಗಳ ಹೋರಾಟದ ಹಾದಿ
ಮೊಘಲ್‌ ಸುಲ್ತಾನ ಬಾಬರ್‌ನ ದಂಡನಾಯಕ ಮೀರ್‌ ಬಾಕಿ 1528ರಲ್ಲಿ ರಾಮ ಮಂದಿರವನ್ನು ಕೆಡವಿ ಆ ಜಾಗದಲ್ಲಿ ಮಸೀದಿ ಕಟ್ಟಿದ. ಅದನ್ನು ಮುಂದೆ ಬಾಬರಿ ಮಸೀದಿ ಎಂದು ಕರೆಯಲಾಯಿತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕವೂ ಹಿಂದೂಗಳಿಗೆ ನ್ಯಾಯ ಲಭಿಸಲಿಲ್ಲ. ಇದಕ್ಕಾಗಿ ಬೃಹತ್‌ ಜನಾಂದೋಲನವೇ ರೂಪುಗೊಂಡಿತು. ಇದರ ಪರಿಣಾಮ ಏನೇನಾಯಿತು? ಇಲ್ಲಿದೆ ವಿವರ.ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಭವ್ಯ ರಾಮ ಮಂದಿರ; ನಿಮಗೆ ಗೊತ್ತಿರದ ಕುತೂಹಲಕಾರಿ ವಿಷಯಗಳಿವು

4. ರಾಮ ಮಂಗಳಂ ಭಕ್ತಿಗೀತೆ ರಿಲೀಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌!
ದೇಶದ ಸೂಪರ್ ಹಿಟ್ಸ್ ಸಿನಿಮಾಗಳ ಮೇಕರ್ ವಿಜಯ್ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ ಅಯೋಧ್ಯೆ ರಾಮನಿಗಾಗಿ “ರಾಮ ಮಂಗಳಂ” (Ram Mandir) ಗಾಯನ ಗುಚ್ಚ ಅರ್ಪಣೆ ಮಾಡಿದೆ. 17ನೇ ಶತಮಾನದ ರಾಮಭಕ್ತ, ಪುರಾಣ ಪ್ರಸಿದ್ಧ ಗಾಯಕ ಶ್ರೀ ಭದ್ರಾಚಲ ರಾಮದಾಸು ರಚಿಸಿದ್ದ `ರಾಮಮಂಗಳಂ’ ಗೀತೆಗೆ ಗಾಯನ ಸ್ವರೂಪ ಕೊಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ರಾಮನ ಕುರಿತ 12 ಅತ್ಯುತ್ತಮ ಹಾಡು, ಭಜನೆಗಳ ವಿಡಿಯೊ ಇಲ್ಲಿದೆ

    5.ರಾಮ ಮಂದಿರ ಸ್ಫೋಟದ ಬೆದರಿಕೆ! ದಾವೂದ್‌ ಇಬ್ರಾಹಿಂ ಸಹಚರನೆಂದು ಹೇಳಿಕೊಂಡಿದ್ದ ಯುವಕ ಅರೆಸ್ಟ್‌
    ರಾಮ ಮಂದಿರ (Ayodhya Ram Mandir) ಉದ್ಘಾಟನೆ ದಿನದಂದೇ ಮಂದಿರವನ್ನು ಸ್ಫೋಟಿಸುವುದಾಗಿ ದಾವೂದ್‌ ಇಬ್ರಾಹಿಂ ಸಹಚರನೆಂದು ಹೇಳಿ 21 ವರ್ಷದ ಯುವಕನೊಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾನೆ. ಯುವಕನನ್ನು ಅರಾರಿಯಾ ಜಿಲ್ಲೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

    6.ಅಯೋಧ್ಯೆಗೆ ತೆರಳಿದ ಸೂಪರ್‌ ಸ್ಟಾರ್‌ ರಜನಿಕಾಂತ್‌, ಧನುಷ್‌, ಪವನ್‌ ಕಲ್ಯಾಣ್‌
    ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವಾರು ಸೆಲೆಬ್ರಿಟಿಗಳು ಸಜ್ಜಾಗಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಿಂದ ರಜನಿಕಾಂತ್ ಮತ್ತು ಧನುಷ್ ಅಯೋಧ್ಯೆಗೆ ತೆರಳುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
    ಈ ಸುದ್ದಿಯನ್ನೂ ಓದಿ: ಫ್ಯಾಮಿಲಿ ಜತೆ ಅಯೋಧ್ಯೆಯತ್ತ ಎಚ್‌ ಡಿ ದೇವೇಗೌಡ; ಐತಿಹಾಸಿಕ ಕಾರ್ಯಕ್ರಮವೆಂದ ಮಾಜಿ ಪ್ರಧಾನಿ

    7.ಮಂಡ್ಯ ಲೋಕಸಭೆಯಿಂದ ಎಚ್‌ ಡಿ ಕುಮಾರಸ್ವಾಮಿ ಸ್ಪರ್ಧೆ ಖಚಿತ; ಕೇಂದ್ರ ಮಂತ್ರಿ ಆಗುತ್ತಾರಾ?
    ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಈಗ ಮಂಡ್ಯ ಸಂಸದರಾಗಿರುವ ಸುಮಲತಾಗೆ ಎಲ್ಲಿ ಟಿಕೆಟ್‌ ಮತ್ತು ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗೋದು ನಿಜವಾ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
    ಈ ಸುದ್ದಿಯನ್ನೂ ಓದಿ: ಜೆಡಿಎಸ್‌ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಬಿಟ್ಟುಕೊಟ್ಟ ಬಿಜೆಪಿ! ಹೈಕಮಾಂಡ್‌ ಸಮ್ಮತಿಯಷ್ಟೇ ಬಾಕಿ

    8. ರಾಮನ ಪೂಜೆ, ನೇರ ಪ್ರಸಾರ ಬ್ಯಾನ್‌ ಮಾಡಿತೇ ತಮಿಳುನಾಡಿನ ಸ್ಟಾಲಿನ್‌ ಸರ್ಕಾರ?
    ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾ (Ram Mandir) ಸಮಾರಂಭದ ನೇರ ಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆಯೇ? ಹಾಗೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
    ಈ ಸುದ್ದಿಯಯನ್ನೂ ಓದಿ: ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರಿ ರಜೆ ಇಲ್ಲ: ಸಿದ್ದರಾಮಯ್ಯ

    9.ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ; ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್‌ ವಾಗ್ದಾಳಿ
    ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಅಧಿಕಾರಕ್ಕಾಗಿ ಬೇರೆ-ಬೇರೆ ಪಕ್ಷಗಳನ್ನು ಬದಲಾವಣೆ ಮಾಡುವವನೂ ಅಲ್ಲ ಎಂದು ಕಾಂಗ್ರೆಸ್‌ ಹಿರಿಯ ರಾಜಕಾರಣಿ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

    10. 500 ಟೆಸ್ಟ್‌ ವಿಕೆಟ್‌ ಸಾಧನೆಗೆ ಅಶ್ವಿನ್‌ಗೆ ಬೇಕಿದೆ ಬೆರಳೆಣಿಕೆಯ ವಿಕೆಟ್
    ಟೀಮ್​ ಇಂಡಿಯಾದ ಹಿರಿಯ ಸ್ಪಿನ್​ ಬೌಲರ್​ ರವಿಚಂದ್ರನ್(R Ashwin) ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆಯುವ ತವರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್​ 10 ವಿಕೆಟ್​ ಉರುಳಿಸಿದರೆ ನೂತನ ಮೈಲುಗಲ್ಲೊಂದನ್ನು ತಲುಪಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

    Exit mobile version