Site icon Vistara News

Vistara Top 10 News : ಲೋಕಸಭೆಗೆ ನುಗ್ಗಿದವರ ಹಿಂದೆ ಯಾರಿದ್ದಾರೆ? ಶಬರಿಮಲೆಯಲ್ಲಿ ಅಯ್ಯಯ್ಯಪ್ಪ!

Vistara Top 10 News 1312

1. ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ: ಲೋಕಸಭಾ ಗ್ಯಾಲರಿಗೆ ನುಗ್ಗಿದ ದುಷ್ಕರ್ಮಿಗಳು
2001ರಲ್ಲಿ ನಡೆದ ಸಂಸತ್‌ ದಾಳಿಗೆ ಡಿಸೆಂಬರ್‌ 13ಕ್ಕೆ 22 ವರ್ಷ. ಸರಿಯಾಗಿ ಅದೇ ದಿನ ಆರು ಮಂದಿ ದುಷ್ಕರ್ಮಿಗಳು ಮತ್ತೊಮ್ಮೆ ಸಂಸತ್ತಿನ ಭದ್ರತಾ ಕೋಟೆಯನ್ನು ಬೇಧಿಸಿ ದಾಂಧಲೆ ಎಬ್ಬಿಸಿದ್ದಾರೆ. ಅವರಲ್ಲಿ ಇಬ್ಬರು ಸಂಸದರ ಮೂಲಕ ವಿಸಿಟಿಂಗ್‌ ಪಾಸ್‌ ಪಡೆದು ವೀಕ್ಷಕ ಗ್ಯಾಲರಿಗೆ ಹೋಗಿ ಅಲ್ಲಿಂದ ಕಲಾಪ ನಡೆಯುವ ಸದನಕ್ಕೆ ಜಿಗಿದು ಬಣ್ಣದ ಬಾಂಬ್‌ಗಳನ್ನು ಸಿಡಿಸಿ ಕೋಲಾಹಲವೆಬ್ಬಿಸಿದ್ದಾರೆ. ಅವರು ಮತ್ತು ಹೊರಗಿದ್ದ ನಾಲ್ವರನ್ನು ಬಂಧಿಸಲಾಗಿದೆ. ಹೊಸ ಸಂಸತ್‌ ಭವನದಲ್ಲಿ ನಡೆದ ಈ ಘಟನೆ ಅತಿ ದೊಡ್ಡ ಭದ್ರತಾ ವೈಫಲ್ಯ ಎಂದು ಪರಿಗಣಿತವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: Security Breach in Lok Sabha: ಲೋಕಸಭೆಯಲ್ಲಿ ಭದ್ರತೆ ಲೋಪ ಆಗಿದ್ದು ಹೇಗೆ?

2. ಸಂಸತ್ತಿನಲ್ಲಿ ಆತಂಕ ಸೃಷ್ಟಿಸಿದ ಆರು ಮಂದಿಯೂ ಸೆರೆ, ಎಲ್ಲರೂ ಫ್ರೆಂಡ್ಸ್; ಒಬ್ಬ ಮೈಸೂರಿನವನು
ಲೋಕಸಭೆ ಭದ್ರತೆಯನ್ನು ಭೇದಿಸಿ ಆತಂಕಕ್ಕೆ ಸೃಷ್ಟಿದ ಪ್ರಕರಣದಲ್ಲಿ ನಾಲ್ವರು ಎಂದು ಭಾವಿಸಲಾಗಿತ್ತು(Security breach in Lok Sabha). ಆದರೆ, ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಮೈಸೂರಿನ ಡಿ. ಮನೋರಂಜನ್‌, ಉತ್ತರ ಪ್ರದೇಶದ ಸಾಗರ್ ಶರ್ಮಾ, ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ ಮತ್ತು ಹರ್ಯಾಣದ ಹಿಸಾರ್‌ನ ನೀಲಮ್ ದೇವಿ, ಗುರುಗ್ರಾಮದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ (Vicky Sharma) ಅವರನ್ನು ಬಂಧಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಏನಿದು ಕಲರ್ ಗ್ಯಾಸ್ ಕ್ಯಾನಿಸ್ಟರ್‌? ಯಾವುದಕ್ಕೆ ಬಳಸುತ್ತಾರೆ?

3. ಆರೋಪಿ ಸಾಗರ್‌ ಶರ್ಮನಿಗೆ ವಿಸಿಟಿಂಗ್‌ ಪಾಸ್‌ ನೀಡಿದ್ದು ಸಂಸದ ಪ್ರತಾಪ್‌ ಸಿಂಹ; ಎಲ್ಲಿಯ ಕನೆಕ್ಷನ್?
ಎಲ್ಲಿಯ ಉತ್ತರ ಪ್ರದೇಶದ ಸಾಗರ್‌ ಶರ್ಮಾ? (Sagar Sharma) ಎಲ್ಲಿಯ ಮೈಸೂರಿನ ಸಂಸದ ಪ್ರತಾಪ್‌ಸಿಂಹ? (MP Pratap simha) ಬುಧವಾರ ನೂತನ ಸಂಸತ್‌ ಭವನದ ಒಳಗೆ ನಡೆಯುತ್ತಿದ್ದ ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೇಜುಗಳ ಮೂಲಕವೇ (Security breach in Loksabha) ಸ್ಪೀಕರ್‌ ಅವರತ್ತ ಧಾವಿಸಿದ ಸಾಗರ್‌ ಶರ್ಮನಿಗೆ ಪ್ರತಾಪ್‌ ಸಿಂಹ ವಿಸಿಟರ್ಸ್‌ ಪಾಸ್‌ (Visitors Pass) ಕೊಟ್ಟಿದ್ದು ಹೇಗೆ? ಮತ್ತು ಯಾಕೆ ಎಂಬ ಪ್ರಶ್ನೆ ಈಗ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಸಂಸತ್ ಪ್ರವೇಶಿಸಲು ವಿಸಿಟರ್ ಪಾಸ್ ಪಡೆಯುವುದು ಹೇಗೆ?

4. Sabarimala: ಅಯ್ಯಯ್ಯಪ್ಪಾ ಅವ್ಯವಸ್ಥೆ! ಶಬರಿಮಲೆಯಲ್ಲಿ 10 ಕಿಮೀ ಕ್ಯೂ, ನೂಕುನುಗ್ಗಲು, ಪ್ರತಿಭಟನೆ
ಹರಿಹರಪುತ್ರ ಅಯ್ಯಪ್ಪ ದೇವರ ನೆಲೆಯಾದ ಶಬರಿಮಲೆಯಲ್ಲಿ (Sabarimala) ಮೂಲಸೌಕರ್ಯಗಳು ಅವ್ಯವಸ್ಥೆಯಾಗಿದ್ದು, ಭಕ್ತರು ಈ ಬಾರಿ ತೀವ್ರ ಸಮಸ್ಯೆ, ಕಿರಿಕಿರಿ ಅನುಭವಿಸಿದ್ದಾರೆ. ಹಿಂದೆಂದೂ ಇಲ್ಲದಷ್ಟು ಜನಸಂದಣಿ ಈ ವರ್ಷ ಕಂಡುಬಂದಿದ್ದು, ನೂಕುನುಗ್ಗಲಿನಲ್ಲಿ ದರ್ಶನವೇ ಸಾಧ್ಯವಾಗಲಿಲ್ಲ ಎಂದು ಸಾವಿರಾರು ಭಕ್ತರು ದೂರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಕಹಳೆ- ಬೆಳಗಾವಿ ಪ್ರತಿಭಟನೆಯಲ್ಲಿ ಶಕ್ತಿ ಪ್ರದರ್ಶನ
ಬರ ನಿರ್ವಹಣೆ ವೈಫಲ್ಯ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ನಗರದ ಮಾಲಿನಿ ಸಿಟಿಯಲ್ಲಿ ಬುಧವಾರ ಸಂಜೆ ಬೃಹತ್‌ ಪ್ರತಿಭಟನೆ (BJP Protest) ನಡೆಸಲಾಯಿತು. ರಾಜ್ಯದಲ್ಲಿ ತೀವ್ರ ಬರಗಾಲದಿಂದ (Drought Situation) ಸಂಕಷ್ಟದಲ್ಲಿರುವ ರೈತರ ಮೇಲೆ ಈ ಸರ್ಕಾರ ಬರೆ ಎಳೆಯುತ್ತಿದೆ, ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. 5ನೇ ಗ್ಯಾರಂಟಿ ಯುವನಿಧಿ ನೋಂದಣಿ ಡಿ. 21ಕ್ಕೆ ಇಲ್ಲ! ರಾಜ್ಯ ಸರ್ಕಾರದ ಶಾಕಿಂಗ್‌ ನ್ಯೂಸ್‌
ರಾಜ್ಯ ಕಾಂಗ್ರೆಸ್‌ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (Yuva Nidhi Scheme) ಚಾಲನೆ ನೀಡಲು ಮುಹೂರ್ತ ಫಿಕ್ಸ್‌ ಆಗಿದ್ದು, ಡಿ. 21ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭ ಎಂದು ಹೇಳಿದ್ದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ಸಚಿವ ಶರಣ ಪ್ರಕಾಶ್‌ ಪಾಟೀಲ್‌ (Sharana prakash Pateel) ಈಗ ಉಲ್ಟಾ ಹೊಡೆದಿದ್ದಾರೆ. ಡಿಸೆಂಬರ್ 21ಕ್ಕೆ ಯುವ ನಿಧಿ ನೋಂದಣಿಯಿಲ್ಲ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಸದನದಲ್ಲಿ ಕದನ; ಬಿಜೆಪಿ ನಾಯಕರ ಸಿಟ್ಟು, ಜಮೀರ್‌ ರಾಜೀನಾಮೆಗೆ ಪಟ್ಟು!
ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ಕ್ಷಮೆ ಕೇಳುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಬಿಜೆಪಿ ಪಟ್ಟುಹಿಡಿದಿದೆ. ‌ಜಮೀರ್‌ ಕ್ಷಮೆ ಕೇಳದೆ ಸ್ಪಷ್ಟೀಕರಣ ನೀಡಲು ಮುಂದಾಗುತ್ತಿದ್ದಂತೆ ಬಿಜೆಪಿ ಗದ್ದಲ ನಡೆಸಿದೆ. ಜಮೀರ್‌, ನಾನು ಸಲಾಂ ಮಾಡ್ತಾರೆ ಎಂಬ ಪದ ಬಳಸಿಲ್ಲ. ಹಾಗೆ ಪದ ಬಳಸಿದ್ದರೆ ರಾಜಕೀಯ ನಿವೃತ್ತಿ (Political retirement) ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.NIA Raid: ಬೆಂಗಳೂರಿನಲ್ಲಿ 6 ಕಡೆ ಎನ್‌ಐಎ ದಾಳಿ, ಮುಂದುವರಿದ ಉಗ್ರರ ತನಿಖೆ
ರಾಜಧಾನಿಯ ಒಟ್ಟು 6 ಕಡೆಗಳಲ್ಲಿ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (National investigation Agency – ಎನ್‌ಐಎ) ಅಧಿಕಾರಿಗಳು ದಾಳಿ (NAI Raid) ನಡೆಸಿದ್ದಾರೆ. ಬುಧವಾರ ಬೆಳಗಿನ ಜಾವ ದಾಳಿಗಳು ನಡೆದಿದ್ದು, ಶಂಕಿತ ಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. IND vs SA: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರೆ ಸರಣಿ ಸಮಬಲ
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ(IND vs SA) 1-0 ಹಿನ್ನಡೆ ಅನುಭವಿಸಿರುವ ಭಾರತ ತಂಡ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಗುರುವಾರ ನಡೆಯುವ ಪಂದ್ಯ ಸೂರ್ಯಕುಮಾರ್​ ಯಾದವ್​ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸರಣಿ ಸೋಲನ್ನು ತಪ್ಪಿಸಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. Kichcha Sudeep: ನಿಮ್ಗೆ ದರ್ಶನ್‌, ಯಶ್‌ ಮಾತ್ರ ಕಾಣೋದಾ? ಧ್ರುವ ಪರ ನಿಂತ ಸುದೀಪ್‌!
ನಟ ದರ್ಶನ್ ಹಾಗೂ ಸುದೀಪ್ ಇಬ್ಬರ ನಡುವೆ ಮನಸ್ತಾಪ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇಬ್ಬರು ಸ್ಟಾರ್‌ ನಟರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಬಹಿರಂಗವಾಗಿದ್ದು, ಇದಕ್ಕೆ ಕಾರಣ ಕಿಚ್ಚ ಸುದೀಪ್‌ ನೀಡಿರುವ ಹೇಳಿಕೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version