Site icon Vistara News

Vistara Top10 News : ಹಿಜಾಬ್‌ ವಿಷಯದಲ್ಲಿ ಉಲ್ಟಾ ಹೊಡೆದ ಸಿಎಂ, ರೆಡಿ ಆಯ್ತು ವಿಜಯೇಂದ್ರ ಟೀಂ

Vistara top10 News 2312

1. Hijab Row: ಹಿಜಾಬ್‌ ನಿಷೇಧ ವಾಪಸ್‌ ಮಾಡಿಲ್ಲ; ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ!
ರಾಜ್ಯದ ಶಾಲೆ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ (Hijab Row) ಅವಕಾಶ ನೀಡಲಾಗುವುದು ಎಂಬ ತಮ್ಮ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಬೆನ್ನಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಉಲ್ಟಾ ಹೊಡೆದಿದ್ದಾರೆ. ನಾನು ಶಾಲಾ– ಕಾಲೇಜುಗಳಲ್ಲಿ ಇದ್ದ ಹಿಜಾಬ್ ನಿಷೇಧವನ್ನು ವಾಪಸ್ ಮಾಡಿಲ್ಲ. ಸರ್ಕಾರ ಚಿಂತನೆ ನಡೆಸುತ್ತಿದೆ ಎಂದಷ್ಟೇ ಹೇಳಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ: 1. ಹಿಜಾಬ್‌ ವರ್ಸಸ್‌ ಕೇಸರಿ ಶಾಲು! ಸಿಡಿದ ಹಿಂದುಗಳು; ಶುರುವಾಗುತ್ತಾ ಧರ್ಮ ದಂಗಲ್?‌
ಪೂರಕ ವರದಿ 2.: Hijab Row : ಸಿದ್ದರಾಮಯ್ಯ 2ನೇ ಟಿಪ್ಪು ಸುಲ್ತಾನ್‌ ಎಂದ ಬಿಜೆಪಿ ನಾಯಕ ರವಿ ಕುಮಾರ್‌

2.Veerashaiva Lingayat: ಮರು ಜಾತಿಗಣತಿ ಮಾಡಿ; ಸರ್ಕಾರಕ್ಕೆ ವೀರಶೈವ ಮಹಾಸಭಾ ಒಕ್ಕೊರಲ ಆಗ್ರಹ
ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ವೇಳೆ ಕಾಂತರಾಜ್‌ ಆಯೋಗದ ಜಾತಿ ಗಣತಿ ವರದಿ (Caste Census Report) ಪ್ರಸ್ತಾಪವಾಗಿದೆ. ವೀರಶೈವ ಲಿಂಗಾಯತ ಸಮಾಜದ ಸಚಿವರು, ಶಾಸಕರು, ಸ್ವಾಮೀಜಿಗಳು ಹಾಗೂ ಮುಖಂಡರು ಜಾತಿ ಗಣತಿಯ ವೈಜ್ಞಾನಿಕತೆ ಬಗ್ಗೆ ಧ್ವನಿ ಎತ್ತಿದ್ದಾರೆ. ನಾವ್ಯಾರೂ ಜಾತಿ ಗಣತಿಯ ವಿರೋಧಿಗಳಲ್ಲ. ವಾಸ್ತವಾಂಶದ ಆಧಾರದಲ್ಲಿ ಜಾತಿಯ ಗಣತಿ ಆಗಬೇಕು. ಈ ನಿಟ್ಟಿನಲ್ಲಿ ಮರು ಜಾತಿ ಗಣತಿಯನ್ನು (Re caste census) ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. Congress Manifesto : ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ರಚನೆ; ಸಿದ್ದರಾಮಯ್ಯ ಸಹಿತ 16 ಮಂದಿಗೆ ಹೊಣೆ
ಮುಂಬರುವ ಲೋಕಸಭಾ ಚುನಾವಣೆಯನ್ನು (Parliament Elections 2024) ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಪಕ್ಷ (Congress Party) ಅದಕ್ಕೆ ಪೂರ್ವಭಾವಿಯಾಗಿ ಜನರನ್ನು ಸೆಳೆಸಲು ಘೋಷಿಸಬೇಕಾದ ಪ್ರಣಾಳಿಕೆಗಳ ರಚನೆಗೆ (Congress Manifesto) ಮುಂದಾಗಿದೆ. 16 ಸದಸ್ಯರ ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ’ (Congress Manifesto Committee) ಯನ್ನು ರಚಿಸಲಾಗಿದ್ದು, ಅದರಲ್ಲಿ ‌ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಅವಕಾಶ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : Congress Party : ಉತ್ತರ ಪ್ರದೇಶ ಉಸ್ತುವಾರಿಯಿಂದ ಪ್ರಿಯಾಂಕಾ ಗಾಂಧಿ ಔಟ್!

4. BJP Karnataka :‌ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ; ವಿಜಯೇಂದ್ರ‌ ಟೀಮಲ್ಲಿ ಯಾರೆಲ್ಲ?
ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ (BY Vijayendra) ಅವರು ರಾಜ್ಯ ಬಿಜೆಪಿಯ (BJP Karnataka) ನೂತನ ಪದಾಧಿಕಾರಿಗಳನ್ನು (BJP State Office bearers) ನೇಮಿಸಿ ಆದೇಶ ಹೊರಡಿಸಿದ್ದಾರೆ. 10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋ ಟೆಕ್ಕಿಗಳಿಗೆ ಶಾಕ್‌ ಟ್ರೀಟ್ಮೆಂಟ್‌; ಅವರ ಆಫೀಸ್‌ಗೇ ಇ-ಮೇಲ್!
ಸಿಲಿಕಾನ್ ಸಿಟಿ ಟೆಕ್ಕಿಗಳ ಮೇಲೆ ಇಮೇಲ್ ಅಸ್ತ್ರವನ್ನು ಟ್ರಾಫಿಕ್‌ ಪೊಲೀಸರು ಪ್ರಯೋಗ ಮಾಡಿದ್ದಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಟೆಕ್ಕಿಗಳದ್ದೇ ಮೇಲುಗೈ ಎಂಬ ಅಂಶ ಪ್ರಕರಣಗಳಿಂದ ತಿಳಿದುಬಂದಿದೆ. ಹೀಗಾಗಿ ಅಂತಹ ಟೆಕ್ಕಿಗಳಿಗೆ ಶಾಕ್ ನೀಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಕೇಸು, ದಂಡದ ಜತೆಗೆ ಅವರ ಕಚೇರಿಗೆ ಇ-ಮೇಲ್ ಕಳಿಸಲು ಮುಂದಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.ವಿಸ್ತಾರ ಅಂಕಣ: ಸದನದಲ್ಲಿ ಐದಿಂಚು ಗೋಡೆಯನ್ನೇ ದಾಟುವಂತಿಲ್ಲ; ಅಂಥದ್ದರಲ್ಲಿ ಸಂಸತ್ ಮೇಲಿನ ದಾಳಿ ಕ್ಷಮಿಸಬೇಕೆ?

ಲೋಕಸಭೆಯ ಕಲಾಪದ ವೇಳೆ ನಡೆದ ಘಟನೆಗೆ ಕಾರಣ ಯಾವುದೇ ಇರಲಿ, ಈಗ ದಾಳಿ ಮಾಡಿದವರಿಂದ ಯಾರಿಗೂ ಹಾನಿ ಆಗದೇ ಇರಲಿ, ಇದು ದೇಶದ ಮೇಲೆ ನಡೆಸಿದ ದಾಳಿ ಎಂದೇ ಪರಿಗಣಿಸಬೇಕು. ಮೆಟ್ರೋ ರೈಲಿನಲ್ಲಿ ಇದ್ದಕ್ಕಿದ್ದಂತೆ ನೃತ್ಯ ಮಾಡುವ, ಜಗಳ ಆಡುವಂತೆ ಪ್ರಾಂಕ್ ವಿಡಿಯೋ ಮಾಡುವುದಕ್ಕೂ, ಸಂಸತ್ ಭದ್ರತೆಯನ್ನು ಮುರಿದು ಒಳಗೆ ನುಗ್ಗುವುದಕ್ಕೂ ವ್ಯತ್ಯಾಸವಿದೆ ಎನ್ನುವುದು ಈ ದೇಶದ ಜನರಿಗೆ ಅರಿವಿಗೆ ಬರುವಂತೆ ಶಿಕ್ಷೆಯೂ ಆಗಬೇಕು ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. Raja Marga Column : ಗೀತೆ ಶಾಂತಿ ಮಂತ್ರವಲ್ಲ, ಕ್ಷಾತ್ರ ಮಂತ್ರ; ಜಗತ್ತಿನ ಬೆಸ್ಟ್‌ ಕೌನ್ಸೆಲಿಂಗ್!
ಭಗವಂತನಾದ ಶ್ರೀ ಕೃಷ್ಣನು ಯುದ್ಧ ಭೂಮಿಯಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯಲ್ಲಿ ಹೇಳಿದ್ದು ಶಾಂತಿ ಮಂತ್ರವಲ್ಲ, ಕ್ಷಾತ್ರಮಂತ್ರ. ಆ ಪ್ರೇರಣಾದಾಯಿ ನುಡಿಗಳು ಇಂದಿಗೂ ಜಗತ್ತಿನ ಬೆಸ್ಟ್‌ ಕೌನ್ಸೆಲಿಂಗ್‌! ರಾಜ ಮಾರ್ಗ ಕಾಲಂನಲ್ಲಿ ವಿಶಿಷ್ಟ ಚಿಂತನೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. Heart Failure: ಕೋವಿಡ್ ನಂತರ 30 ವರ್ಷದೊಳಗಿನವರ ಹಾರ್ಟ್‌ಫೇಲ್‌ ಶೇ.40 ಏರಿಕೆ!
 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಹೃದಯಾಘಾತದ (Heart Attack) ಸಾವುಗಳು 2018 ಮತ್ತು 2022ರ ನಡುವೆ 40%ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ಹೃದಯಾಘಾತದ ಸಾವುಗಳಲ್ಲಿ 26%ರಷ್ಟು ಹೆಚ್ಚಳ ಕಂಡುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. Salaar Box Office: ಮೊದಲ ದಿನವೇ 178 ಕೋಟಿ ರೂ. ಗಳಿಸಿ ದಾಖಲೆ ಬರೆದ ಸಲಾರ್​ ಪ್ರಭಾಸ್ ಅಭಿನಯದ `ಸಲಾರ್’ ಸಿನಿಮಾ (Salaar Box Office) ಈ ವರ್ಷದ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದೆ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನ ನೀಡಿರುವ ಮಾಹಿತಿ ಪ್ರಕಾರ ಮೊದಲ ದಿನ 178.7 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಗಮನಾರ್ಹ ದಾಖಲೆಯನ್ನು ನಿರ್ಮಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಬೇಗ ಬನ್ನಿ.. ಬೇಗ ಬನ್ನಿ.. ಮೋದಿ 5000 ರೂ. ಕೊಡ್ತಾರಂತೆ! : ಎದ್ದು ಬಿದ್ದು ಓಡಿದ ಮಹಿಳೆಯರು
ಕಲಘಟಗಿಯ ಅಡುಗೆ ಅನಿಲ ವಿತರಣಾ ಕಚೇರಿಯೊಂದರ (Gas distribution office) ಕಡೆಗೆ ಶನಿವಾರ ಬೆಳಗ್ಗೆ ಮಹಿಳೆಯರು ದೌಡಾಯಿಸುತ್ತಿರುವುದು ಕಂಡಿತು. ಬೇರೆ ಬೇರೆ ವಾಹನಗಳಲ್ಲಿ, ನಡೆದುಕೊಂಡು ಬಂದವರು ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಇದಕ್ಕೆ ಕಾರಣ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗ್ಯಾಸ್‌ ಕನೆಕ್ಷನ್‌ ಇದ್ದವರಿಗೆ ಐದು ಸಾವಿರ ಕೋಡ್ತಾರಂತೆ ಎಂಬ ಸುದ್ದಿ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version