ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೀಡಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರ ವಿಚಾರಣೆ ಇಂದು ಬೆಳಗ್ಗೆ ನಡೆಯಲಿದೆ.
ಬೆಳಗ್ಗೆ ೧೦.೩೦ರ ಬಳಿಕ ಎಡಿಜಿಪಿ ಅಮೃತ್ ಪಾಲ್ ಅವರ ವಿಚಾರಣೆ ಮುಂದುವರಿಯಲಿದೆ. ನಿನ್ನೆ (ಸೋಮವಾರ) ಸಂಜೆ ಸಿಐಡಿ ಬಂಧಿಸಿದ ಬಳಿಕ ಯಾವುದೇ ವಿಚಾರಣೆ ನಡೆದಿರಲಿಲ್ಲ. ಅಮೃತ್ ಪಾಲ್ ವಿರುದ್ಧ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.
ಸಿಐಡಿ ಎಸ್‌ಪಿ ರಾಘವೇಂದ್ರ ಮತ್ತು ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಯಲಿದೆ.
ಇದನ್ನೂ ಓದಿರಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ; ಎಡಿಜಿಪಿ ಅಮೃತ್ ಪಾಲ್ ಬಂಧನ