Site icon Vistara News

Durga Mandir : ದುರ್ಗಾ ಪೂಜೆ ವೇಳೆ ಮಂಟಪ ಕುಸಿದು ಮಹಿಳೆ ಸಾವು; 17 ಮಂದಿಗೆ ಗಾಯ

Duraga pooje pendal

ನವದೆಹಲಿ: ದೆಹಲಿಯ ಪ್ರಸಿದ್ಧ ಕಲ್ಕಾಜಿ ಮಂದಿರದ (Durga Mandir) ಮಾತಾ ಜಾಗರಣ್ (ದೇವಿ ಜಾಗರಣೆ)​ ಕಾರ್ಯಕ್ರಮದ ವೇಳೆ ಶನಿವಾರ ಮಧ್ಯರಾತ್ರಿ ಮರ ಮತ್ತು ಕಬ್ಬಿಣದಿಂದ ಮಾಡಿದ ವೇದಿಕೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದು 17 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಮತ್ತು ಸುದ್ದಿ ಸಂಸ್ಥೆ ಹಂಚಿಕೊಂಡ ದೃಶ್ಯಗಳ ಪ್ರಕಾರ, ಸಂಘಟಕರು ಮತ್ತು ವಿಐಪಿಗಳ ಕುಟುಂಬಗಳು ಕುಳಿತುಕೊಳ್ಳಲು ನಿರ್ಮಿಸಿದ್ದ ಮುಖ್ಯ ವೇದಿಕೆ ಕುಸಿದಿದೆ.

ಮಧ್ಯರಾತ್ರಿ 12.30ರ ಸುಮಾರಿಗೆ ಸ್ತೋತ್ರಗಳನ್ನು ಹಾಡುತ್ತಿದ್ದಾಗ ಭಾವೋದ್ರಿಕ್ತರಾಗಿ ಭಕ್ತರು ವೇದಿಕೆಯ ಮೇಲೆ ಹತ್ತಿದರು. ಇದರ ಪರಿಣಾಮವಾಗಿ, ಜನರ ಭಾರ ಹೆಚ್ಚಾದ ಕಾರಣ ವೇದಿಕೆ ಕುಸಿದಿದೆ. ಈ ವೇಳೆ ವೇದಿಕೆ ಕೆಳಗೆ ಕುಳಿತಿದ್ದ ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮತಿ ಇಲ್ಲದ ಕಾರ್ಯಕ್ರಮ

ಪೊಲೀಸರ ಪ್ರಕಾರ, ಈ ಕಾರ್ಯಕ್ರಮವನ್ನು ನಡೆಸಲು ಯಾವುದೇ ಅನುಮತಿ ನೀಡಲಾಗಿಲ್ಲ. ದೇವಾಲಯದ ಮಹಂತ್ ಪರಿಷತ್​ನಲ್ಲಿ ರಾತ್ರಿಯಿಡೀ ಜಾಗರಣೆ ಹಾಡುಗಳು, ನೃತ್ಯಗಳು ಮತ್ತು ದೇವರ ಆರಾಧನೆಗಾಗಿ ಪೂಜೆಯನ್ನು ನಡೆಸಲಾಗಿತ್ತು. ದುರ್ಗಾ ದೇವಿಯ ಜಾಗೃತಿ (ರಾತ್ರಿ ಜಾಗರಣೆ) ಯಲ್ಲಿ ಭಾಗವಹಿಸಲು ಸುಮಾರು 1500-1600 ಜನರು ಸೇರಿದ್ದರು.

ಇದನ್ನೂ ಓದಿ : Hanuman Flag : ಪ್ರಾಣ ಬಿಟ್ಟೆವು, ಹನುಮಧ್ವಜ ಬಿಡೆವು; ಗ್ರಾಮಸ್ಥರ ಪ್ರತಿಭಟನೆ

ಕಲ್ಕಾಜಿ ದೇವಸ್ಥಾನದಲ್ಲಿ ಜಾಗರಣ್ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದ್ದ ವೇದಿಕೆ ಕುಸಿದಿದೆ ಎಂದು ನಮಗೆ ಮಧ್ಯರಾತ್ರಿ 12.30 ರ ಸುಮಾರಿಗೆ ಕರೆ ಬಂತು. ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಮಹಿಳೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಬಂದಿದ್ದ ಗಾಯಕ ಬಿ.ಪ್ರಾಕ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ.

“ನನ್ನ ಕಣ್ಣ ಮುಂದೆ ಈ ರೀತಿಯ ಘಟನೆ ನಡೆಯುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಅದರಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಾನು ಕಲ್ಕಾಜಿ ಮಂದಿರದಲ್ಲಿ ಹಾಡುತ್ತಿದ್ದಾಗ ನಡೆದ ಘಟನೆ ಅತ್ಯಂತ ದುರದೃಷ್ಟಕರ” ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಅಪಘಾತದ ನಂತರ ನಗರ ಪೊಲೀಸರ ಅಪರಾಧ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಗಾಯಗೊಂಡವರನ್ನು ಏಮ್ಸ್ ಟ್ರಾಮಾ ಸೆಂಟರ್, ಸಫ್ದರ್​ಜಂಗ್ ಆಸ್ಪತ್ರೆ ಸೇರಿದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಘಟಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 337/304 ಎ/188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version