Site icon Vistara News

Chhatrapati Shivaji Maharaj : ಮೋದಿ ಅನಾವರಣಗೊಳಿಸಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ ಉರುಳಿ ಬಿದ್ದು ಪುಡಿಪುಡಿ

Chhatrapati Shivaji Maharaj

ಬೆಂಗಳೂರು: ಕಳೆದ ವರ್ಷ ಡಿಸೆಂಬರ್‌‌ನಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಅವರ 35 ಅಡಿ ಎತ್ತರದ ಪ್ರತಿಮೆ ಸೋಮವಾರ ಕುಸಿದಿದೆ. ವರದಿಯ ಪ್ರಕಾರ, ಮಾಲ್ವಾನ್ನ ರಾಜ್‌‌ಕೋಟ್‌‌ ಕೋಟೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಛತ್ರಪತಿ ಶಿವಾಜಿ ಪ್ರತಿಮೆ ಕುಸಿದು ಪುಡಿಪುಡಿಯಾಗಿದೆ. ಘಟನೆಯ ನಂತರ, ವಿರೋಧ ಪಕ್ಷಗಳು ಏಕನಾಥ್ ಶಿಂಧೆ ನೇತೃತ್ವದ ಭಾರತೀಯ ಜನತಾ ಪಕ್ಷ-ಶಿವಸೇನೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಳಪೆ ಗುಣಮಟ್ಟದ ಕೆಲಸ ಮಾಡಿವೆ ಎಂದು ಆರೋಪಿಸಿವೆ.

ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣದ ಟೆಂಡರ್‌‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಆರೋಪಿಸಿದ್ದಾರೆ. “ಸಿಂಧುದುರ್ಗದಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಇಂದು ಕುಸಿದಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮೋದಿ ಅವರು ಈ ಪ್ರತಿಮೆ ಉದ್ಘಾಟಿಸಿದ್ದರು. ಥಾಣೆ ಮೂಲದ ಗುತ್ತಿಗೆದಾರರಿಗೆ ಕೆಲಸವನ್ನು ನೀಡಿರುವುದು ಸರಿಯೇ? ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ನಮಗೆ ನಮ್ಮ ಭಾವನೆಗಳು ಶಿವಾಜಿ ಮಹಾರಾಜ್ ಅವರೊಂದಿಗೆ ನಂಟು ಹೊಂದಿದೆ ನಾವು ಅವನನ್ನು ದೇವರಂತೆ ಪೂಜಿಸುತ್ತೇವೆ. ಅತಿವೇಗದ ಮಾರುತದಿಂದಾಗಿ ಪ್ರತಿಮೆ ಕುಸಿದಿದೆ. ಇದು ದುರದೃಷ್ಟಕರ. ಸಚಿವರು ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ” ಎಂದು ಪ್ರತಿಮೆ ಕುಸಿದ ಘಟನೆಯ ಬಗ್ಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 4ರಂದು ನೌಕಾಪಡೆಯ ದಿನದಂದು ಪ್ರಧಾನಿ ಮೋದಿ ಪ್ರತಿಮೆ ಅನಾವರಣಗೊಳಿಸಿದ್ದರು.

ಎನ್‌ಸಿಪಿ (ಎಸ್‌‌ಪಿ ) ರಾಜ್ಯ ಅಧ್ಯಕ್ಷ ಮತ್ತು ಮಾಜಿ ಸಚಿವ ಜಯಂತ್ ಪಾಟೀಲ್ “ರಾಜ್ಯ ಸರ್ಕಾರವು ಸರಿಯಾದ ಕಾಳಜಿ ವಹಿಸದ ಕಾರಣ ಪ್ರತಿಮೆ ಕುಸಿತಕ್ಕೆ ಕಾರಣವಾಗಿದೆ. ಕೆಲಸದ ಗುಣಮಟ್ಟದ ಬಗ್ಗೆ ಸರ್ಕಾರ ಕಡಿಮೆ ಗಮನ ಹರಿಸಿತು. ಪ್ರತಿಮೆ ಅನಾವರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಕಾರ್ಯಕ್ರಮವನ್ನು ನಡೆಸುವತ್ತ ಮಾತ್ರ ಅದು ಕೇಂದ್ರೀಕರಿಸಿತ್ತು . ಈ ಮಹಾರಾಷ್ಟ್ರ ಸರ್ಕಾರವು ಹೊಸ ಟೆಂಡರ್‌‌ಗಳನ್ನು ಮಾತ್ರ ನೀಡುತ್ತದೆ. ಕಮಿಷನ್‌ ಪಡೆಯುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಒಪ್ಪಂದಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rule Change: ಸೆಪ್ಟೆಂಬರ್ 1ರಿಂದ ನಮ್ಮ ಮೇಲೆ ಪರಿಣಾಮ ಬೀರುವ 6 ಮುಖ್ಯ ಬದಲಾವಣೆಗಳಿವು

ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್ “ಘಟನೆಯ ಬಗ್ಗೆ ನನ್ನ ಬಳಿ ಎಲ್ಲಾ ವಿವರಗಳಿಲ್ಲ. ಆದಾಗ್ಯೂ, ಸಿಂಧುದುರ್ಗ್ ಜಿಲ್ಲೆಯ ಸಚಿವರೂ ಆಗಿರುವ ಪಿಡಬ್ಲ್ಯುಡಿ ಸಚಿವ ರವೀಂದ್ರ ಚವಾಣ್ ಅವರು ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಅದೇ ಸ್ಥಳದಲ್ಲಿ ಹೊಸ ಪ್ರತಿಮೆ ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ಪ್ರಧಾನಿ ಮೋದಿ ಅನಾವರಣಗೊಳಿಸಿದ ಈ ಪ್ರತಿಮೆಯು ಸಮುದ್ರ ಕೋಟೆಯನ್ನು ನಿರ್ಮಿಸುವಲ್ಲಿ ಶಿವಾಜಿ ಮಹಾರಾಜ್ ಅವರ ದೂರದೃಷ್ಟಿಯ ಪ್ರಯತ್ನಗಳಿಗೆ ಗೌರವ ಸಲ್ಲಿಸುತ್ತದೆ. ಈ ವಿಷಯವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.

Exit mobile version