ಬೆಂಗಳೂರು: ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ರಿಕ್ಕಿ, ಉಳಿದವರು ಕಂಡಂತೆ, ಸಿಂಪಲ್ ಆಗಿ ಒಂದು ಲವ್ ಸ್ಟೋರಿ, ಗೋಧಿ ಬಣ್ಣ ಸಾದಾರಣ ಮೈಕಟ್ಟು, ವಾಸ್ತು ಪ್ರಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ ಮಾಡಿರುವ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವಿದೆ.
ರಕ್ಷಿತ್ ಅವರ 777ಚಾರ್ಲಿ ಬಹು ನಿರೀಕ್ಷೆಯ ಸಿನಿಮಾ ಜೂನ್ 10ಕ್ಕೆ ಥಿಯೇಟರ್ ನತ್ತ ಭರ್ಜರಿಯಾಗಿ ಲಗ್ಗೆ ಇಡಲಿದೆ. ದೇಶದ 21 ಮಹಾನಗರಗಳ ಪೈಕಿ ದೆಹಲಿ, ಅಮೃತ್‌ಸರ, ಲಖನೌದಲ್ಲಿ ಈಗಾಗಲೇ 777 ಚಾರ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದೆ.
ಲೋಕಸಭಾ ಸದಸ್ಯೆ ಮನೇಕಾ ಗಾಂಧೀ ದೆಹಲಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿ ಭಾವುಕರಾಗಿದ್ದಾರೆ
ಕಿರಿಕ್ ಪಾರ್ಟಿ ಸಿನಿಮಾ ರಕ್ಷಿತ್ ಕೆರಿಯರ್ ಅನ್ನೇ ಬದಲಿಸಿದ ಚಿತ್ರವಾಗಿದೆ.