Site icon Vistara News

Terrorists Killed : ನಕಲಿ ಬಂಕರ್​ನಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಬೆಂಗಳೂರು: ಶನಿವಾರ ರಾತ್ರಿ ಜಮ್ಮು- ಕಾಶ್ಮೀರ ಚಿನ್ನಿಗಮ್​​ನಲ್ಲಿ ನಡೆದ ಎನ್​ಕೌಂಟರ್​​​ನಲ್ಲಿ ನಾಲ್ವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ (Terrorists Killed). ಅಂದ ಹಾಗೆ ಅವರು ಮನೆಯ ಅಲ್ಮೆರಾದಲ್ಲಿ ನಿರ್ಮಿಸಿದ್ದ ಬಂಕರ್​ನಲ್ಲಿ ಅಡಗಿಕೊಂಡು ದುಷ್ಕೃತ್ಯ ನಡೆಸಲು ಮುಂದಾಗಿದ್ದು. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಿನ್ನಿಗಮ್ ಫ್ರಿಸ್​ನಲ್ಲಿ ಎನ್​ಕೌಂಟರ್ ನಡೆದಿದೆ. ಉಗ್ರರು ಅಲ್ಮೇರಾದ ಒಳಗೆ ಬಂಕರ್ ನಿರ್ಮಿಸಿಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದೇ ರೀತಿ ಅವರಿಗೆ ಆಶ್ರಯ ನೀಡಿದ ಸ್ಥಳೀಯರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್​​ನಲ್ಲಿ ನಡೆದ ಪ್ರತ್ಯೇಕ ಮುಖಾಮುಖಿಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇದೇ ವೇಲೆ ಒಟ್ಟು ಆರು ಹಿಜ್ಬುಲ್ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮದೆರ್​ಗಾಮ್​​ನಲ್ಲಿ ನಡೆದ ಮೊದಲ ಎನ್​ಕೌಂಟರ್​ನಲ್ಲಿ ಸೈನಿಕ ಮೃತಪಟ್ಟಿದ್ದರು. ಕುಲ್ಗಾಮ್​​ನ ಚಿನಿಗಾಮದಲ್ಲಿ ನಡೆದ ಎರಡನೇ ಎನ್​ಕೌಂಟರ್​ನಲ್ಲಿ ನಾಲ್ವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಇನ್​ಸ್ಪೆಕ್ಟರ್​ ಜನರಲ್ ವಿ.ಕೆ.ಬರ್ಡಿ ತಿಳಿಸಿದ್ದಾರೆ.

ಹತ್ಯೆಗೀಡಾದ ಎಲ್ಲಾ ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು ಎಂದು ಅವರು ಹೇಳಿದ್ದಾರೆ. ಅವರಲ್ಲಿ ಒಬ್ಬರು ಹಿಜ್ಬುಲ್​ನ ಸ್ಥಳೀಯ ಕಮಾಂಡರ್ ಎಂದು ಮಾಹಿತಿ ನೀಡಿದ್ದಾರೆ.

ಚಿನಿಗಾಮ್​​ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ನಾಲ್ವರು ಭಯೋತ್ಪಾದಕರನ್ನು ಯಾವರ್ ಬಶೀರ್ ದಾರ್, ಜಾಹಿದ್ ಅಹ್ಮದ್ ದಾರ್, ತೌಹೀದ್ ಅಹ್ಮದ್ ರಾಥರ್ ಮತ್ತು ಶಕೀಲ್ ಅಹ್ ವಾನಿ ಎಂದು ಗುರುತಿಸಲಾಗಿದೆ. ಮಡೆರ್​ಗಾಮ್​ನಲ್ಲಿ ಹತ್ಯೆಗೀಡಾದ ಇಬ್ಬರನ್ನು ಫೈಸಲ್ ಮತ್ತು ಆದಿಲ್ ಎಂದು ಗುರುತಿಸಲಾಗಿದೆ.

ಪ್ಯಾರಾ ಕಮಾಂಡೋ ಮತ್ತು ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಹುತಾತ್ಮರಾಗಿದ್ದಾರೆ. ಫ್ರಿಸಲ್ ಪ್ರದೇಶದ ಚಾನಿಗಮ್ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1 ರಾಷ್ಟ್ರೀಯ ರೈಫಲ್ಸ್​ನ ಹವಾಲ್ದಾರ್ ರಾಜ್ ಕುಮಾರ್ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: Accident: ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

ಎರಡೂ ಎನ್​ಕೌಂಟರ್​​ಗಳು ಕುಲ್​ಗಾಮ್​ನ ಒಳಭಾಗದಿಂದ ವರದಿಯಾಗಿದ್ದರೂ, ಅಮರನಾಥ ಯಾತ್ರೆಯ ದೃಷ್ಟಿಯಿಂದ ಭದ್ರತಾ ಅಧಿಕಾರಿಗಳು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. “ಎನ್​ಕೌಂಟರ್​ಗಳು ರಾಷ್ಟ್ರೀಯ ಹೆದ್ದಾರಿಯಿಂದ ದೂರದಲ್ಲಿ ನಡೆದಿದೆ. ಪೊಲೀಸರು ಮತ್ತು ಇತರ ಏಜೆನ್ಸಿಗಳು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version