Site icon Vistara News

IPL 2024 : ಮಿಂಚಿನ ವೇಗದಲ್ಲಿ ಹಾರಿ ಭರ್ಜರಿ ಕ್ಯಾಚ್ ಹಿಡಿದ ಧೋನಿ; ವಿಡಿಯೊ ಇದೆ

MS Dhoni

ಚೆನ್ನೈ: ಎಂಎಸ್ ಧೋನಿಗೆ (MS Dhoni) 42 ವರ್ಷ. ಅವರಿಗೆ ಇನ್ನು ಆಡಲು ಸಾಧ್ಯವಿಲ್ಲ. ನಿವೃತ್ತಿ ಪಡೆಯುತ್ತಾರೆ ಎಂಬುದೇ ದೊಡ್ಡ ಚರ್ಚೆಯ ವಿಷಯ. ಆದರೆ, ವಾಸ್ತವ ಹಾಗಿಲ್ಲ. ಅವರಿನ್ನೂ ಫಿಟ್ ಅಗಿದ್ದಾರೆ. ಅತಿ ಚುರುಕಿನಿಂದ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಗುಜರಾತ್ ವಿರುದ್ಧದ ಐಪಿಎಲ್​ (IPL 2024 ) ಪಂದ್ಯದಲ್ಲಿ ಸಾಬೀತಾಗಿದೆ. ಈ ಪಂದ್ಯದಲ್ಲಿ ಧೋನಿ ವಿಕೆಟ್​ ಕೀಪರ್ ಆಗಿ ಅದ್ಭುತ ಕ್ಯಾಚ್ ಪಡೆದಿದ್ದಾರೆ. 42 ವರ್ಷದ ಧೋನಿ ವಿಜಯ್ ಶಂಕರ್ ಅವರ ಬ್ಯಾಟ್​ನಿಂದ ಪುಟಿದ ಚೆಂಡನ್ನು ಬಲ ಬದಿಗೆ ಹಾರಿ ಹಿಡಿದು ಔಟ್ ಮಾಡಿದ್ದಾರೆ. ಇದು ಆ ಪಂದ್ಯದ ಹೈಲೈಟ್ ಎನಿಸಿತು.

ದೊಡ್ಡ ಗುರಿಯನ್ನು ಬೆನ್ನಟ್ಟಿದ ಜಿಟಿ ತಂಡ ಎಂ.ಎಸ್.ಧೋನಿ ಅವರ ಆಕರ್ಷಕ ಕ್ಯಾಚ್ ನಿಂದಾಗಿ 3 ವಿಕೆಟ್ ಕಳೆದುಕೊಂಡಿತು. ಅವರ ಸುಂದರ ಕ್ಯಾಚ್ ನೋಡಿದ ಚೆಪಾಕ್ ಸ್ಟೇಡಿಯಮ್​ನ ಕ್ರಿಕೆಟ್ ಅಭಿಮಾನಿಗಳು ಹರ್ಷೋದ್ಘಾರಗಳನ್ನು ಮೊಳಗಿಸಿದರು.

ಇದನ್ನೂ ಓದಿ : Asia Cup 2024 : ಜುಲೈ 21ರಂದು ಭಾರತ- ಪಾಕಿಸ್ತಾನ ಹೈವೋಲ್ಟೇಜ್​ ಮ್ಯಾಚ್​

ಪಂದ್ಯದಲ್ಲಿ ಎಂಎಸ್ ಧೋನಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ ಅವರು ಪಂದ್ಯಕ್ಕೆ ತಮ್ಮ ಕೊಡುಗೆ ನೀಡುವುದನ್ನು ಮರೆಯಲಿಲ್ಲ. ಹಿಂದಿನ ಪಂದ್ಯದಲ್ಲೂ ಅವರು ಅದ್ಭುತ ಅಂಡರ್ ಆರ್ಮ್ ಮೂಲಕ ಚೆಂಡನ್ನು ಎಸೆದು ಆರ್​ಸಿಬಿ ಆಟಗಾರನನ್ನು ರನ್ ಔಟ್ ಮಾಡಿದ್ದರು.

ರೋಹಿತ್ ರೀತಿಯಲ್ಲೇ ಟಾಸ್​ ವೇಳೆ ತಪ್ಪು ಮಾಡಿದ ಶುಬ್ಮನ್​ ಗಿಲ್​

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ಶುಬ್ಮನ್ ಗಿಲ್ (Shubman Gill) ತಮ್ಮ ನಾಯಕತ್ವದ ಅಭಿಯಾನವನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಐಪಿಎಲ್ 2024 ರ ಐದನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ರೋಚಕ ಗೆಲುವು ಸಾಧಿಸಿದ ಖುಷಿಯಲ್ಲಿದ್ದಾರೆ. ಆದರೆ, ಎರಡನೇ ಪಂದ್ಯದಲ್ಲಿ ಅವರು ರೋಹಿತ್ ಶರ್ಮಾ ಅವರಂತೆಯೇ ಮರೆಗುಳಿ ಸ್ವಭಾವ ಪ್ರದರ್ಶಿಸುವ ಮೂಲಕ ಸುದ್ದಿಯಾಗಿದ್ದಾರೆ.

ಐಪಿಎಲ್ ಐದು ಬಾರಿಯ ಚಾಂಪಿಯನ್ ಮುಂಬಯಿ ವಿರುದ್ಧ ಕಠಿಣ ಹೋರಾಟದ ಆರು ರನ್​ಗಳ ಗೆಲುವಿನ ಬಳಿಕ ಗಿಲ್ ವಿಶ್ವಾಸ ಹೆಚ್ಚಾಗಿದೆ. 169 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಆದಾಗ್ಯೂ, ಶುಬ್ಮನ್ ಗಿಲ್ ನೇತೃತ್ವದ ಟೈಟಾನ್ಸ್ ಡೆತ್ ಓವರ್​ಗಳ ಅದ್ಭುತ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ಅನ್ನು 9 ವಿಕೆಟ್​ಗೆ 162 ರನ್​ಗಳಿಗೆ ನಿಯಂತ್ರಿಸಿತು.

ನಿರ್ಧಾರ ಬದಲಿಸಿದ ಗಿಲ್​

ಟಾಸ್ ಗೆದ್ದ ನಂತರ, ಶುಬ್ಮನ್ ಗಿಲ್ ತಮ್ಮ ನಿರ್ಧಾರ ಬದಲಾಯಿಸಿದರು. ಟಾಸ್​ ಗೆದ್ದ ತಕ್ಷಣ ತಮ್ಮ ತಂಡವು ಮೊದಲು ಬ್ಯಾಟ್​ ಮಾಡುತ್ತದೆ ಎಂದು ಹೇಳಿದರು. ಬಳಿಕ “ಕ್ಷಮಿಸಿ, ಬೌಲಿಂಗ್ ಮಾಡುತ್ತೇವೆ, ಮೊದಲು ಬೌಲಿಂಗ್” ಎಂದು ಹೇಳಿದರು. ಸಿಎಸ್​ಕೆ ನಾಯಕ ಋತುರಾಜ್ ಗಾಯಕ್ವಾಡ್ ಕೂಡ ತಮ್ಮ ಭಾರತ ತಂಡದ ಸಹ ಆಟಗಾರನ ತಪ್ಪನ್ನು ನೋಡಿ ನಗಾಡಿದರು.

ವಿಶೇಷವೆಂದರೆ, ಶುಬ್ಮನ್ ಗಿಲ್ ಅವರ ಏಕದಿನ ತಂಡದ ಆರಂಭಿಕ ಪಾಲುದಾದ ರೋಹಿತ್ ಶರ್ಮಾ ಕೂಡ ಟಾಸ್ ವೇಳೆ ಮರೆಗುಳಿತನ ಪ್ರದರ್ಶನ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಸಮಯದಲ್ಲಿ ಅವರು ಇದೇ ರೀತಿ ಮಾಡಿದ್ದರು. ಅಲ್ಲಿ ಅವರು ತಮ್ಮ ತಂಡದ ನಿರ್ಧಾರವನ್ನು ಮರೆತು ನೆನಪಿಸಿಕೊಳ್ಳುವ 10 ಸೆಕೆಂಡುಗಳ ಸಮಯ ತೆಗೆದುಕೊಂಡಿದ್ದರು.

ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟೈಟಾನ್ಸ್ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾವುದೇ ಬದಲಾವಣೆಗ ಮಾಡಿಲ್ಲ. ಆದರೆ ಸಿಎಸ್ಕೆ ಒಂದು ಬದಲಾವಣೆ ಮಾಡಿದೆ – ಮಹೇಶ್ ತೀಕ್ಷಣಾ ಬದಲಿಗೆ ಮಥೀಶಾ ಪತಿರಾನಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ.

Exit mobile version