ಬೆಂಗಳೂರು: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ಶುಕ್ರವಾರ ಘೋಷಣೆಯಾಗಿದ್ದು (70th National Film Awards) ಮಲಯಾಳಂ ಚಿತ್ರ ‘ಆಟಂ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಅತ್ಯುತ್ತಮ ಸಿನಿಮಾಗಳು ಹಾಗೂ ನಟ, ನಟಿಯರ ಹೆಸರನ್ನು ಪ್ರಕಟಿಸಲಾಯಿತು. ‘ಕಾಂತಾರಾ’ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದು ಕನ್ನಡಿಗರ ಹಾಗೂ ಸ್ಯಾಂಡಲ್ವುಡ್ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಇದೇ ವೇಳೆ ಕೆಜಿಎಫ್ ಚಾಪ್ಟರ್-2 ಕೂಡ ಅತ್ಯುತ್ತಮ ಆ್ಯಕ್ಷನ್ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.
‘ತಿರುಚಿತ್ರಾಂಬಲಂ’ ಚಿತ್ರದ ಅಭಿನಯಕ್ಕಾಗಿ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಕಚ್ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1’, ‘ಕೆಜಿಎಫ್ 2’, ‘ಬ್ರಹ್ಮಾಸ್ತ್ರ ‘ಮತ್ತು ‘ಅಪರಾಜಿತೋ’ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದ ಇತರ ಚಿತ್ರಗಳಾಗಿವೆ.
ರಾಹುಲ್ ರಾವೈಲ್, ನೀಲಾ ಮಾಧವ್ ಪಾಂಡಾ ಹಾಗೂ ಗಂಗಾಧರ್ ಮೊದಲಿಯಾರ್ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.
#NationalFilmAwards | Union Minister @AshwiniVaishnaw was presented the list of award winners of 70th National Film Awards for the year 2022, by Rahul Rawail, Chairperson of the Feature Film Jury; Nila Madhab Panda, Chairperson of the Non-Feature Film Jury; and Gangadhar… pic.twitter.com/VWHocB1Zit
— DD News (@DDNewslive) August 16, 2024
1954 ರಲ್ಲಿ ಮೊದಲ ಬಾರಿಗೆ ನೀಡಲು ಅರಂಭಿಸಿದ ಈ ಪ್ರಶಸ್ತಿ 70ನೇ ಆವೃತ್ತಿ ಇದಾಗಿದೆ. ಆ ವರ್ಷಗಳಲ್ಲಿ, ವಿವಿಧ ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳನ್ನು ಮಾತ್ರ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. . ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಮೊದಲ ಬಾರಿಗೆ 1967 ರಲ್ಲಿ ನೀಡಲಾಯಿತು. ‘ರಾತ್ ಔರ್ ದಿನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ನರ್ಗಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೊದಲ ನಟಿಯಾಗಿದ್ದಾರೆ. ಅದೇ ವರ್ಷ ‘ಆಂಟನಿ ಫೈರಿಂಗ್’ ಮತ್ತು ‘ಚಿರಿಯಾಖಾನಾ’ ಚಿತ್ರಗಳಿಗಾಗಿ ಉತ್ತಮ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.
2023 ರಲ್ಲಿ, ಪುಷ್ಪಾ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರೆ, ‘ಗಂಗೂಬಾಯಿ ಕಾಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
2024 ರ ರಾಷ್ಟ್ರೀಯ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ
- ಅತ್ಯುತ್ತಮ ಚಲನಚಿತ್ರ: ಆಟಂ (ಮಲಯಾಳಂ)
- ಅತ್ಯುತ್ತಮ ಜನಪ್ರಿಯ ಚಿತ್ರ: ಕಾಂತಾರ (ಕನ್ನಡ)
- ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರಾ)
- ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
- ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
- ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
- ಅತ್ಯುತ್ತಮ ಪೋಷಕ ನಟ – ಪವನ್ ಮಲ್ಹೋತ್ರಾ
- ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
- ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
- ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
- ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
- ಅತ್ಯುತ್ತಮ ಒಡಿಯಾ ಚಿತ್ರ – ದಮನ್
- ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ.225/2009
- ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
- ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್: ಚಾಪ್ಟರ್ 2
- ಅತ್ಯುತ್ತಮ ಹಿಂದಿ ಚಿತ್ರ – ಗುಲ್ಮೊಹರ್
- ವಿಶೇಷ ಪ್ರಶಸ್ತಿ ಗುಲ್ಮೋಹರ್ ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್ನಲ್ಲಿ ಸಂಜೋಯ್ ಸಲಿಲ್ ಚೌಧರಿ
- ಅತ್ಯುತ್ತಮ ಆಕ್ಷನ್ ನಿರ್ದೇಶನ – ಕೆಜಿಎಫ್: ಚಾಪ್ಟರ್ 2
- ಅತ್ಯುತ್ತಮ ನೃತ್ಯ ಸಂಯೋಜನೆ – ತಿರುಚಿತ್ರಾಂಬಲಂ
- ಅತ್ಯುತ್ತಮ ಸಾಹಿತ್ಯ – ಫೌಜಾ
- ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
- ಅತ್ಯುತ್ತಮ ಮೇಕಪ್ – ಅಪರಾಜಿತೋ
- ಅತ್ಯುತ್ತಮ ಕಾಸ್ಟ್ಯೂಮ್ – ಕಛ್ ಎಕ್ಸ್ ಪ್ರೆಸ್
- ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
- ಅತ್ಯುತ್ತಮ ಸಂಕಲನ – ಆಟಂ
- ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
- ಅತ್ಯುತ್ತಮ ಚಿತ್ರಕಥೆ – ಆಟಂ
- ಅತ್ಯುತ್ತಮ ಸಂಭಾಷಣೆ – ಗುಲ್ಮೊಹರ್
- ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
- ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಸೌದಿ ವೇಲಕ್ಕ ಸಿಸಿ.225/2009
- ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಬ್ರಹ್ಮಾಸ್ತ್ರ