Site icon Vistara News

Salman Rushdie attack | ಸಲ್ಮಾನ್ ರಶ್ದಿ ದಾಳಿಕೋರನ ವಿರುದ್ಧ ಕೊಲೆ ಯತ್ನ ಕೇಸ್‌ ದಾಖಲು

hadi matar

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಲೇಖಕ ಸಲ್ಮಾನ್‌ ರಶ್ದಿ (Salman Rushdie attack ) ಅವರ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದಿದ್ದ ಹದಿ ಮಾಟರ್‌ (24) ಎಂಬಾತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಜಾಮೀನು ನಿರಾಕರಿಸಲಾಗಿದೆ.

ಈ ಪ್ರಕರಣದಲ್ಲಿ ತನ್ನ ತಪ್ಪೇನೂ ಇಲ್ಲ ಹಾಗೂ ಕೊಲೆ ಮಾಡಲು ಯತ್ನಿಸಿಲ್ಲ ಎಂದು ಕೋರ್ಟ್‌ನಲ್ಲಿ ಹದಿ ಮಾಟರ್‌ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ. ವಿಚಾರಣೆ ನಡೆಸಿದ ಕೋರ್ಟ್‌, ಜಾಮೀನು ನಿರಾಕರಿಸಿತು. ಬಳಿಕ ಚುಟಾಕುವಾ ಕೌಂಟಿ ಜೈಲಿಗೆ ಆರೋಪಿಯನ್ನು ಕಳಿಸಲಾಯಿತು. ಈ ಸಂಬಂಧ ನ್ಯೂಯಾರ್ಕ್‌ ಪೊಲೀಸರು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಉಪನ್ಯಾಸದ ವೇಳೆ ಚೂರಿ ಇರಿತ

ನ್ಯೂಯಾರ್ಕ್‌ನಲ್ಲಿ ಕಳೆದ ಶುಕ್ರವಾರ ಉಪನ್ಯಾಸ ನೀಡಲು ಆಗಮಿಸಿದ್ದ ಜನಪ್ರಿಯ ಲೇಖಕ, ಸಲ್ಮಾನ್ ರಶ್ದಿ ಅವರು ಮಾತನಾಡಲು ವೇದಿಕೆಗೆ ಆಗಮಿಸುತ್ತಿದ್ದಂತೆ ಆರೋಪಿ ಅವರ ಹೊಟ್ಟೆ ಮತ್ತು ಕುತ್ತಿಗೆಗೆ ಕನಿಷ್ಠ ಒಂದು ಬಾರಿ ಇರಿದಿದ್ದಾನೆ.

ದಾಳಿಕೋರ ಹದಿ ಮಾಟರ್‌ ಮ್ಯಾನ್‌ಹಟ್ಟನ್‌ನ ಹಡ್ಸನ್‌ ನದಿಯ ಸಮೀಪದ ಫೇರ್‌ವ್ಯೂ ಅಪಾರ್ಟ್‌ಮೆಂಟ್‌ ನಿವಾಸಿ ಎಂದು ಗುರುತಿಸಲಾಗಿದೆ. ರಶ್ದಿ ಭಾಷಣಕ್ಕೆ ಈತ ಪಾಸ್‌ ಹೊಂದಿದ್ದ. ಈತನ ದಾಳಿಯ ಉದ್ದೇಶ ಇನ್ನೂ ಅಸ್ಪಷ್ಟವಾಗಿದೆ. ಈತ ಒಬ್ಬನೇ ಕಾರ್ಯಾಚರಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮುಸ್ಲಿಂ ಮತೀಯ ಕಾರಣಗಳಿರಬಹುದು ಎಂಬುದನ್ನು ಪೊಲೀಸರು ಅಲ್ಲಗಳೆದಿಲ್ಲ. ಎಲೆಕ್ಟ್ರಾನಿಕ್‌ ಸಾಧನಗಳಿದ್ದ ಒಂದು ಬ್ಯಾಗನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ಜೊ ಬೈಡೆನ್‌ ಖಂಡನೆ:

ಲೇಖಕ ಸಲ್ಮಾನ್‌ ರಶ್ದಿ ಅವರ ಮೇಲೆ ನಡೆದ ಹಲ್ಲೆ ಮತ್ತು ಚೂರಿ ಇರಿತವನ್ನು ಅಮೆರಿಕ ಅಧ್ಯಕ್ಷ ಜೊ ಬೈಡೆನ್‌ ಖಂಡಿಸಿದ್ದಾರೆ. ಜಿಲ್‌ ( ಬೈಡೆನ್‌ ಅವರ ಪತ್ನಿ) ಮತ್ತು ನನಗೆ ಸಲ್ಮಾನ್‌ ರಶ್ದಿ ಅವರ ಮೇಲೆ ನ್ಯೂಯಾರ್ಕ್‌ನಲ್ಲಿ ನಡೆದಿರುವ ಹಲ್ಲೆಯ ಸುದ್ದಿ ಕೇಳಿ ಆಘಾತವಾಗಿದೆ. ಎಲ್ಲ ಅಮೆರಿಕನ್ನರು ಹಾಗೂ ಜಗತ್ತಿನ ಇತರ ಭಾಗದ ಎಲ್ಲ ಜನರೂ ಸಲ್ಮಾನ್‌ ರಶ್ದಿ ಅವರ ಆರೋಗ್ಯ ಮತ್ತು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದೇವೆʼʼ ಎಂದು ಬೈಡೆನ್‌ ಹೇಳಿದ್ದಾರೆ. ಈ ನಡುವೆ ಇರಾನ್‌ನ ಪತ್ರಿಕೆಯೊಂದು ಹಲ್ಲೆಕೋರನನ್ನೇ ಸಮರ್ಥಿಸಿದೆ.

Exit mobile version