ಬೆಂಗಳೂರು: ಎಬಿ ಡಿವಿಲಿಯರ್ಸ್ (AB de Villiers) ಮತ್ತು ವಿರಾಟ್ ಕೊಹ್ಲಿ (Virat kohli) ನಿಕಟ ಸಂಬಂಧ ಹೊಂದಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರವಾಗಿ ಆಡುತ್ತಿದ್ದ ವೇಳೆ ಅವರಿಬ್ಬರ ಬಾಂಧವ್ಯ ಜೋರಾಗಿತ್ತು. ಅದು ವಿಲಿಯರ್ಸ್ ನಿವೃತ್ತಿಯ ಬಳಿಕವೂ ಮುಂದುವರಿದಿತ್ತು. ಇವೆಲ್ಲದರ ನಡುವೆ ಎಬಿಡಿ ವಿಲಿಯರ್ಸ್ ಒಂದು ತಪ್ಪು ಮಾಡಿದ್ದರು. ಕಳೆದ ವಾರ ಎಬಿ ಡಿವಿಲಿಯರ್ಸ್ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಮತ್ತು ಅನುಷ್ಕಾ ಶರ್ಮಾ (Anushka Sharma) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ದರು. ಅವರ ಹೇಳಿಕೆಯು ಕಾಡ್ಗಿಚ್ಚಿನಂತೆ ಹರಡಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳಿಂದ ಹರಿದಾಡಿದ್ದವು. ಇಷ್ಟೆಲ್ಲ ಆದ ಬಳಿಕ ವಿಲಿಯರ್ಸ್ಗೆ ತಮ್ಮ ತಪ್ಪಿನ ಅರಿವಾಗಿದೆ. ಹೇಳಿಕೆ ನೀಡಬಾರದಿತ್ತು ಎಂದು ಅನಿಸಿದೆ.
ಹೇಳಿಕೆ ನೀಡಿದ ಒಂದು ದಿನದ ನಂತರ, ಎಬಿ ಡಿವಿಲಿಯರ್ಸ್ ಯೂ -ಟರ್ನ್ ತೆಗೆದುಕೊಂಡರು. “ಕುಟುಂಬವು ಮೊದಲು ಬರುತ್ತದೆ ಮತ್ತು ನಂತರ ಕ್ರಿಕೆಟ್. ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಆ ಮಾಹಿತಿಯು ತಪ್ಪಾಗಿತ್ತು ಮತ್ತು ನಿಜವಲ್ಲ. ವಿರಾಟ್ ಕುಟುಂಬಕ್ಕೆ ಯಾವುದು ಉತ್ತಮವೋ ಅದು ಮೊದಲು ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ, ನಾನು ಕೊಹ್ಲಿಗೆ ಒಳ್ಳೆಯದನ್ನು ಮಾತ್ರ ಹಾರೈಸುವೆ ಅವರ ವಿರಾಮಕ್ಕೆ ಕಾರಣ ಏನೇ ಇರಲಿ ಎಂದು ಹೇಳಿಕೆ ನೀಡಿದ್ದರು.
ಇದೀಗ ಮತ್ತೊಂದು ಬಾರಿ ಸಾರ್ವಜನಿಕವಾಗಿ ಕೊಹ್ಲಿ ಕುಟುಂಬದ ಕ್ಷಮೆ ಕೋರಿದ್ದಾರೆ. ಯೂಟ್ಯೂಬ್ ಲೈವ್ನಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರ. ಕೊಹ್ಲಿ ಕುಟುಂಬದ ಕ್ಷಮೆಯಾಚಿಸಿದ್ದಾರೆ. ನನ್ನ ಸ್ನೇಹಿತ ವಿರಾಟ್ ಕೊಹ್ಲಿ ಇನ್ನೂ ಲಭ್ಯವಿಲ್ಲ. ಅವರಿಗೆ ಅರ್ಹವಾಗಿರುವ ಖಾಸಗಿತನ ನೀಡುವಂತೆ ನಾನು ಎಲ್ಲರಲ್ಲೂ ಬೇಡುತ್ತೇನೆ. ಕುಟುಂಬ ಮೊದಲ ಸ್ಥಾನದಲ್ಲಿದೆ. ನಿಖರವಾಗಿ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಅದನ್ನು ಗೌರವಿಸುವಂತೆ ನಾನು ನಮ್ಮೆಲ್ಲರನ್ನೂ ಕೇಳುತ್ತಿದ್ದೇನೆ. ನನ್ನ ಹಿಂದಿನ ಕಾರ್ಯಕ್ರಮದಲ್ಲಿ ನಾನು ಸ್ವಲ್ಪ ತಪ್ಪು ಮಾಡಿದ್ದೇನೆ. ಅದಕ್ಕಾಗಿ ನಾನು ಕೊಹ್ಲಿ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ” ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಇದನ್ನೂ ಓದಿ : Virat Kohli : 12 ವರ್ಷದ ಬಳಿಕ ಕೊಹ್ಲಿಯೇ ಇಲ್ಲದೆ ಟೆಸ್ಟ್ ಸರಣಿ ಆಡುತ್ತಿರುವ ಭಾರತ!
ವಿರಾಟ್ ಕೊಹ್ಲಿ ಶೀಘ್ರದಲ್ಲೇ ಕ್ರಿಕೆಟ್ ಮೈದಾನಕ್ಕೆ ಮರಳುತ್ತಾರೆ ಮತ್ತು ರನ್ ಗಳಿಸುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಆಶಿಸಿದ್ದಾರೆ. “ನಾನು ದೃಢೀಕರಿಸದ ಮಾಹಿತಿಯನ್ನು ಹಂಚಿಕೊಂಡಿದ್ದೆ. ಅವರನ್ನು ಮತ್ತು ಅವರ ಕುಟುಂಬ ಮತ್ತು ಅವರ ಖಾಸಗಿ ಸಮಯವನ್ನು ಗೌರವಿಸುವಂತೆ ನಾನು ಪ್ರತಿಯೊಬ್ಬರನ್ನು ಬೇಡಿಕೊಳ್ಳುತ್ತಿದ್ದೇನೆ. ವಿರಾಟ್ ಸಂತೋಷದಿಂದ ಮತ್ತು ರನ್ ಗಳಿಸುವುದನ್ನು ನೋಡುತ್ತೇವೆ ಎಂದು ಆಶಿಸುತ್ತೇವೆ, “ಎಂದು ಅವರು