Site icon Vistara News

Abhishek Sharma : ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ

Abhishek Sharma

ಬೆಂಗಳೂರು: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ಸಿಕ್ಸರ್ ಬಾರಿಸಿದ ಅಪರೂಪದ ದಾಖಲೆಯ ಪಟ್ಟಿಗೆ ಅಭಿಷೇಕ್ ಶರ್ಮಾ (Abhishek Sharma) ಸೇರ್ಪಡೆಯಾಗಿದ್ದಾರೆ. ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ತಮ್ಮ ಪವರ್ ಹಿಟ್ಟಿಂಗ್ ಮತ್ತು ನಿರ್ಭೀತ ಆಟದ ಮೂಲಕ ಕಾಣಿಸಿಕೊಂಡ ಅಭಿಷೇಕ್ ಜುಲೈ 6 ರಂದು ಜಿಂಬಾಬ್ವೆ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಆದರೆ ಬ್ಯಾಟರ್​​ ಡಕ್ ಔಟ್ ಆಗಿ ಬೇಸರ ಮೂಡಿಸಿದರು. ಆದರೆ ಜುಲೈ 7 ರಂದು ನಡೆದ ಎರಡನೇ ಟಿ 20 ಅವರು ಅತ್ಯುತ್ತಮ ಪ್ರದರ್ಶನ ನೀಡಿ ಶತಕ ಬಾರಿಸಿದರು.

ಬ್ರಿಯಾನ್ ಬೆನೆಟ್ ಅವರ ಓವರ್​​ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಅವರು ಸಿಕ್ಸರ್ ಬಾರಿಸಿದರು. ಸ್ಕ್ವೇರ್​ ಲೆಗ್ ಕಡೆಗೆ ಗರಿಷ್ಠ ಮಟ್ಟಕ್ಕೆ ಸಿಕ್ಸರ್ ಬಾರಿಸಿದರು. ಅಂದ ಹಾಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ನಂತರ ಟಿ 20 ಪಂದ್ಯಗಳಲ್ಲಿ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೂರ್ಯಕುಮಾರ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದರೆ, ತಿಲಕ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಮೊದಲ ಎಸೆತಕ್ಕೆ ಸಿಕ್ಸರ್ ಹೊಡೆದಿದ್ದರು.

ಇದನ್ನೂ ಓದಿ: Sanath Jayasuriya : ಬ್ಯಾಟಿಂಗ್​ ದಿಗ್ಗಜ ಸನತ್​ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್​ ತಂಡದ ನೂತನ ಕೋಚ್​

ನಾಯಕ ಶುಬ್ಮನ್ ಗಿಲ್ ಎರಡನೇ ಓವರ್ನಲ್ಲಿ ನಿರ್ಗಮಿಸಿದ ನಂತರ ಅಭಿಷೇಕ್ ತಮ್ಮ ಬ್ಯಾಟಿಂಗ್​ ದಾಳಿಯನ್ನು ಮುಂದುವರಿಸಿದರು. ಋತುರಾಜ್ ಗಾಯಕ್ವಾಡ್ ಉತ್ತಮ ಬೆಂಬಲ ನೀಡಿ ಭಾರತವನ್ನು 11 ಓವರ್ ಗಳಲ್ಲಿ ಮೂರಂಕಿಯ ಸ್ಕೋರ್​ ಕಡೆ ಮುನ್ನಡೆಸಿದರು. ಆರಂಭಿಕ ಆಟಗಾರ ತನ್ನ ಮೊದಲ ಅರ್ಧಶತಕವನ್ನು ಕೇವಲ 33 ಎಸೆತಗಳಲ್ಲಿ ಮುಗಿಸಿದರು. ಮುಂದಿನ 13 ಎಸೆತಗಳಲ್ಲಿ ಅವರ ಶತಕ ಬಾರಿಸಿದರು.

ಪಂಜಾಬ್ ಬ್ಯಾಟರ್​ ಅಭಿಷೇಕ್ ಅವರನ್ನು ಟಿ 20 ಕ್ರಿಕೆಟ್​ನ ದೈತ್ಯ ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನು ತೋರಿಸಿದರು. ಬಳಿಕ ಬ್ಯಾಟಿಂಗ್​ ವೇಗವನ್ನು ಹೆಚ್ಚಿಸಿದರು. ಕೇವಲ 47 ಎಸೆತಗಳಲ್ಲಿ ತಮ್ಮ ಮೊದಲ ಶತಕ ಗಳಿಸಿದರು. ಅವರು 47 ಎಸೆತಗಳಲ್ಲಿ 100 ರನ್​ ಬಾರಿಸಿ ನಿರ್ಗಮಿಸಿದರು. ಅಂತಾರಾಷ್ಟ್ರಿಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬಾರಿಸಿ ನಿರ್ಗಮಿಸಿದರು. ಕೇವಲ 13 ಎಸೆತಗಳನ್ನು ತೆಗೆದುಕೊಂಡರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 23ರ ವರ್ಷದ ಆಟಗಾರ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿದ್ದರು.

Exit mobile version