Site icon Vistara News

Daali Dhananjay : ಯಾರೂ ಗುರುತಿಸದಂತೆ ಮಾಸ್ಕ್​ ಧರಿಸಿ ಮೆಟ್ರೊದಲ್ಲಿ ಪ್ರಯಾಣಿಸಿದ ನಟ ಡಾಲಿ ಧನಂಜಯ್​

Dali Dhananjay

ಬೆಂಗಳೂರು: ‘ಕೋಟಿ’ ಸಿನಿಮಾದ ಯಶಸ್ಸಿನಲ್ಲಿರುವ ಪ್ರತಿಭಾವಂತ ನಟ ಡಾಲಿ ಧನಂಜಯ್ (Daali Dhananjay)​ ಶನಿವಾರ ಸಂಜೆ ತಮ್ಮ ಕಾರನ್ನು ಬಿಟ್ಟು ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಹಾಗೂ ಯಶಸ್ಸಿನ ಮೂಲಕ ಮಿಂಚುತ್ತಿರುವ ಅವರು ಯಾವುದೇ ಹಮ್ಮು ಇಲ್ಲದೆ ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಡಾಲಿ ಧನಂಜಯ್ ಅವರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮಾಸ್ಕ್​ ಹಾಗೂ ಕನ್ನಡಕ ಧರಿಸಿಕೊಂಡಿದ್ದರು. ಹೀಗಾಗಿ ಬಹುತೇಕರಿಗೆ ಅವರು ಪರಿಚಯ ತಕ್ಷಣಕ್ಕೆ ಸಿಗಲಿಲ್ಲ.

ಡಾಲಿ ಧನಂಜಯರ್ ಅವರು ಕೆಂಗೇರಿಯಿಂದ ಕುಂದಲಹಳ್ಳಿಯ ತನಕ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ. ಮೆಟ್ರೊ ರೈಲಿನಲ್ಲಿ ಕುಳಿತಿದ್ದ ವೇಳೆ ಅವರು ಬಾಕ್ಸ್​ ಒಂದನ್ನು ಹಿಡಿದುಕೊಂಡಿದ್ದರು. ಕೆಂಗೇರಿಯಿಂದ ಕುಂದಲಹಳ್ಳಿಯವರೆಗೆ ಅವರು 36 ಕಿಲೋ ಮೀಟರ್ ಮೆಟ್ರೊ ಹಾದಿಯಲ್ಲಿ ಪ್ರಯಾಣಿಸಿದ್ದಾರೆ. ಸುಮಾರು ಒಂದೂವರೆ ಗಂಟೆ ಅವಧಿಯ ಪ್ರಯಾಣದ ವೇಳೆ ಅವರು ಮೊಬೈಲ್​ ವೀಕ್ಷಿಸುತ್ತಿದ್ದರು.

ಡಾಲಿ ಧನಂಜಯ್​ ಅವರು ಪರಮ್​ ನಿರ್ದೇಶನದ ಕೋಟಿ ಸಿನಿಮಾದ ಯಶಸ್ವಿನಲ್ಲಿದ್ದಾರೆ. ಮಧ್ಯಮ ವರ್ಗದ ಕುಟುಬದ ಕತೆಯನ್ನು ಹೊಂದಿರುವ ಈ ಸಿನಿಮಾವು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಇದೇ ವೇಳೆ ಕೆಲವು ಸೆಲೆಬ್ರಿಟಿಗಳು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾಲಿ ಧನಂಜರ್ ಅವರು ಪಾತ್ರಾಭಿನಯಕ್ಕೆ ಹೆಚ್ಚಿನ ಮಾರ್ಕ್​ಗಳನ್ನು ಕೊಟ್ಟಿದ್ದಾರೆ. ಜಿಯೋ ಸ್ಟುಡಿಯೋನಿರ್ಮಿಸಿರುವ ಸಿನಿಮಾದಲ್ಲಿ ಧನಂಜಯ್ ಅವರಲ್ಲದೆ, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ಪೃಥ್ವಿ ಶಾಮನೂರು, ದುನಿಯಾ ವಿಜಯ್ ಮೊದಲಾದವರು ಇದ್ದಾರೆ.

ಇದನ್ನೂ ಓದಿ: Actor Darshan: ಜೈಲು ಸೇರಿದ ನಟ ದರ್ಶನ್ ಮುಂದೆ ಇರೋ ಆಯ್ಕೆಗಳೇನು?

`ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಡಾಲಿ ಧನಂಜಯ್‌

ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ʻನಾಡಪ್ರಭು ಕೆಂಪೇಗೌಡʼರ (nadaprabhu kempegowda) ಜೀವನವನ್ನು (Kannada New Movie) ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ʻಬೆಂದಕಾಳೂರುʼ ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ. ನಾಡಪ್ರಭು ಕೆಂಪೇಗೌಡರಾಗಿ ಡಾಲಿ ಧನಂಜಯ್ ಅಬ್ಬರಿಸಲಿದ್ದಾರೆ.

ಆ ಸಿನಿಮಾದಲ್ಲಿ ದರ್ಶನ್ ಅಥವಾ ಸುದೀಪ್ ನಟಿಸುತ್ತಾರಾ ಎಂಬ ಚರ್ಚೆಗಳು ಸಹ ನಡೆದಿದ್ದವು, ಆದರೆ ಈಗ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದೆ. ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಎಂಎನ್ ಶಿವರುದ್ರಪ್ಪ, ಶುಭಂ ಗುಂಡಾಲ ನಿರ್ಮಾಣ ಮಾಡುತ್ತಿದ್ದಾರೆ. ‘ಸಂತ ಶಿಷುನಾಳ ಶರೀಫ, ‘ನೀಲ’, ‘ಕಲ್ಲರಳಿ ಹೂವಾಗಿ’ ಇನ್ನೂ ಕೆಲವು ಪೀರಿಯಡ್ ಸಿನಿಮಾಗಳನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಈಗ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡಲಿದ್ದಾರೆ.

.ಈ ಹಿಂದೆ ಅಲ್ಲಮನ ಕುರಿತಾದ ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. ಧನಂಜಯ್ ಈ ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ದಿನೇಶ್ ಬಾಬು ಅವರು ನಾಡಪ್ರಭು ಕೆಂಪೇಗೌಡರ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ‘ನಾಗಾಭರಣ ನ್ಯಾಯಾಲಯದ ಮೂಲಕ ತಡೆ ತಂದರು.

ಇದೀಗ ಈ ‘ನಾಡಪ್ರಭು ಕೆಂಪೇಗೌಡ’ ಸಿನಿಮಾಕ್ಕೆ ನಾಗಾಭರಣ ಅವರೇ ಚಿತ್ರಕತೆ ಬರೆದಿದ್ದು, ಸಾಹಿತಿ ಪ್ರತಿಭಾ ನಂದಕುಮಾರ್ ಅವರು ಬರವಣಿಗೆಯಲ್ಲಿ ಸಹಾಯ ಮಾಡಲಿದ್ದಾರೆ. ನಾಗಾಭರಣ ಅವರ ಪುತ್ರ ನಿರ್ದೇಶಕ ಪನ್ನಗಾಭರಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ಶಶಿಧರ ಅಡಪ ಅವರು ಸಿನಿಮಾದ ಸೆಟ್ ನೋಡಿಕೊಳ್ಳುತ್ತಿದ್ದಾರೆ.

Exit mobile version