Site icon Vistara News

Fact Check | ಹಿಂದೂ-ಮುಸ್ಲಿಂ ಭಾಯ್‌ ಭಾಯ್‌, ರಾಹುಲ್ ಗಾಂಧಿ‌ ಯಾತ್ರೆಗೆ ಹಾಡು ಹಾಡಿದರೇ ಸಲ್ಮಾನ್‌ ಖಾನ್?

Salman

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆ (Bharat Jodo Yatra)ಯು ಕೇರಳದಲ್ಲಿ ಭರದಿಂದ ಸಾಗುತ್ತಿದೆ. ಸಾವಿರಾರು ಜನ ಪಾದಯಾತ್ರೆ ಮೂಲಕ ರಾಹುಲ್‌ ಗಾಂಧಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಭಾರತ್‌ ಜೋಡೊ ಯಾತ್ರೆಗಾಗಿ ಹಾಡು ಹಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಸಲ್ಮಾನ್‌ ನಟಿಸಿರುವ ವಿಡಿಯೊ ವೈರಲ್‌ ಆಗಿದೆ.

ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ಸಲ್ಮಾನ್‌ ಖಾನ್‌ “ಹಿಂದೂ ಮುಸ್ಲಿಂ ಭಾಯ್‌ ಭಾಯ್”‌ ಎಂಬುದಾಗಿ ಹಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ, ಸಲ್ಮಾನ್‌ ಖಾನ್‌ ಅವರು ಕಾಂಗ್ರೆಸ್‌ ಯಾತ್ರೆಗಾಗಿಯೇ ಹಾಡು ಹಾಡಿ, ಅದನ್ನು ಯಾತ್ರೆಗೆ ಅರ್ಪಿಸಿದ್ದಾರೆ ಎಂದು ಜಾಲತಾಣಲದಲ್ಲಿ ಹೇಳಲಾಗುತ್ತಿದೆ.

ವಾಸ್ತವ ಏನು?

ಎಎಫ್‌ಡಬ್ಲ್ಯೂಎ ಎಂಬ ಸಂಸ್ಥೆಯು ವಿಡಿಯೊದ ನಿಜಾಂಶದ ಕುರಿತು ಪರಿಶೀಲನೆ ನಡೆಸಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್‌ ಜೋಡೊ ಯಾತ್ರೆ ಆರಂಭವಾಗುವ ಎರಡು ವರ್ಷ ಮೊದಲೇ ಅಂದರೆ, ೨೦೨೦ರ ಮೇ ೨೫ರಂದು ಸಲ್ಮಾನ್‌ ಖಾನ್‌ ಅವರೇ ಯುಟ್ಯೂಬ್‌ನಲ್ಲಿ ಶೇರ್‌ ಮಾಡಿದ ವಿಡಿಯೊ ಎಂಬುದು ದೃಢಪಟ್ಟಿದೆ. ಈದ್‌ ಹಿನ್ನೆಲೆಯಲ್ಲಿ ಸಲ್ಮಾನ್‌ ಖಾನ್‌ ಅವರು ಹಂಚಿಕೊಂಡ ವಿಡಿಯೊ ಇದಾಗಿದೆ.

2020ರಲ್ಲಿ ಸಲ್ಮಾನ್‌ ಖಾನ್‌ ಅವರು ತಮ್ಮ ಯುಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೊ.

ಇದನ್ನೂ ಓದಿ | Fact Check | ಪಾಕಿಸ್ತಾನ ಜಿಂದಾಬಾದ್‌ ಎಂದ ಅಮೂಲ್ಯ ಜತೆ ಫೋಟೊಗೆ ಪೋಸ್‌ ಕೊಟ್ಟರೇ ರಾಹುಲ್‌ ಗಾಂಧಿ?

Exit mobile version