Site icon Vistara News

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

Afghanistan cricket

ಬೆಂಗಳೂರು: ಅಫ್ಘಾನಿಸ್ತಾನದ 17 ಮಹಿಳಾ ಆಟಗಾರರು ಆಸ್ಟ್ರೇಲಿಯಾ ಮೂಲದ ನಿರಾಶ್ರಿತರ ತಂಡವೊಂದನ್ನು (Afghanistan cricket) ರಚಿಸಲು ಸಹಾಯ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ (ICC) ಮನವಿ ಮಾಡಿಎ. 2020ರಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಆಟಗಾರ್ತಿಯರಿಗೆ ಗುತ್ತಿಗೆ ನೀಡಿತ್ತು. 2010 ರಲ್ಲಿ ರಚಿಸಲಾದ ಮಹಿಳಾ ತಂಡವನ್ನು ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 2021 ರಲ್ಲಿ ವಿಸರ್ಜಿಸಿಗ್ತು. ತಾಲಿಬಾನ್ ಆಡಳಿತವು ಮಹಿಳೆಯರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ಅಫ್ಘಾನಿಸ್ತಾನವು ರಾಷ್ಟ್ರೀಯ ಮಹಿಳಾ ತಂಡವನ್ನು ಹೊಂದಿಲ್ಲ.

ಆಟಗಾರರು ಈಗ ತಮ್ಮ ವೃತ್ತಿಜೀವನವನ್ನು ಪುನರ್​ಸ್ಥಾಪಿಸಲು ಐಸಿಸಿಯನ್ನು ಸಂಪರ್ಕಿಸಿದ್ದಾರೆ. ಕಳೆದ ವಾರ, ಅವರು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರಿಗೆ ಪತ್ರ ಬರೆದು ತಮಗೆ ಮಂಡಳಿಯಿಂದ “ಬೆಂಬಲ ಮತ್ತು ಮಾರ್ಗದರ್ಶನ” ನೀಡುವಂತೆ ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ಸರ್ಕಾರದ ನೀತಿಗಳಿಂದಾಗಿ ತಮ್ಮನ್ನು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡ ಎಂದು ಕರೆಯಲು ಅಥವಾ ಎಸಿಬಿ ಬ್ಯಾನರ್ ಅಡಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಆಟಗಾರರು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಅವರು ಆಡಲು ಬಯಸಿದ್ದು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮೂಲದ ಈಸ್ಟ್ ಏಷ್ಯನ್ ಕ್ರಿಕೆಟ್ ಕಚೇರಿಯಿಂದ ನಿರಾಶ್ರಿತರ ತಂಡವಾಗಿ ಆಡಳಿತ ನಡೆಸುವಂತೆ ಕೇಳಿಕೊಂಡಿದ್ದಾರೆ.

“ಕ್ರಿಕೆಟ್ ಆಡುವ ಕನಸು ಕಾಣುವ ಆದರೆ ಅಫ್ಘಾನಿಸ್ತಾನದಲ್ಲಿ ಆಡಲು ಸಾಧ್ಯವಾಗದ ಎಲ್ಲಾ ಅಫ್ಘಾನ್ ಮಹಿಳೆಯರನ್ನು ಪ್ರತಿನಿಧಿಸಲು” ಐಸಿಸಿ ಸಹಾಯ ಮಾಡಬೇಕು ಎಂದು ಆಟಗಾರರು ಮನವಿ ಮಾಡಿದ್ದಾರೆ.

ಐಸಿಸಿಗೆ ಅಫ್ಘಾನಿಸ್ತಾನ ಮಹಿಳಾ ಆಟಗಾರ್ತಿಯರು ಬರೆದ ಪತ್ರದಲ್ಲಿ ಏನಿದೆ?

ಅಫ್ಘಾನಿಸ್ತಾನ ಮಹಿಳಾ ತಂಡದಲ್ಲಿ ಈ ಹಿಂದೆ ಗುತ್ತಿಗೆ ಪಡೆದ ಆಟಗಾರ್ತಿಯರಾದ ನಾವು, ಐಸಿಸಿ ಪುರುಷರ ಟಿ 20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನದ ಸಾಧನೆಗಳಿಂದ ಹೆಮ್ಮೆಪಡುತ್ತೇವೆ/ ಸೆಮಿಫೈನಲ್ ತಲುಪಿದ ರಶೀದ್ ಖಾನ್ ಮತ್ತು ಅವರ ತಂಡವನ್ನು ಅಭಿನಂದಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಹಿಳೆಯರಾಗಿರುವ ನಮಗೆ ಪುರುಷ ಕ್ರಿಕೆಟಿಗರಂತೆ ನಮ್ಮ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂಬುದು ತೀವ್ರ ದುಃಖದ ವಿಷಯ. ಅಫ್ಘಾನ್ ಮಹಿಳೆಯರ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಮತ್ತು ಐಸಿಸಿಯ ನಾಯಕತ್ವ ಮತ್ತು ಆರ್ಥಿಕ ಬೆಂಬಲದ ಮೂಲಕ ಅವಕಾಶ ನೀಡಬೇಕು. ಹಾಗಾದರೆ ಸಾಧಿಸಬಹುದಾದ ಉತ್ತಮ ವಿಜಯಗಳನ್ನು ಸಾಧಿಸಬಹುದ. ಕ್ರಿಕೆಟ್ ಅನ್ನು ಪ್ರೀತಿಸುವ ಹುಡುಗಿಯರು ಮತ್ತು ಮಹಿಳೆಯರನ್ನು ನೇಮಕ ಮಾಡಲು ಮತ್ತು ತರಬೇತಿ ನೀಡುವಂತೆ ನಾವು ಕೋರುತ್ತೇವೆ.

ಇದನ್ನೂ ಓದಿ: IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

ನಿರಾಶ್ರಿತರ ತಂಡವನ್ನು ಹೊಂದುವಲ್ಲಿ ನಮ್ಮ ಗುರಿಗಳು ನಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದು. ಅಫ್ಘಾನಿಸ್ತಾನದಲ್ಲಿ ಉಳಿದಿರುವ ಮಹಿಳೆಯರಿಗೆ ಭರವಸೆ ನೀಡುವುದು ಮತ್ತು ಅಫ್ಘಾನಿಸ್ತಾನದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುವುದು ಇದರ ಉದ್ದೇಶ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಅಫ್ಘಾನಿಸ್ತಾನ ಪುರುಷರ ತಂಡದ ಅದ್ಭುತ ಪ್ರದರ್ಶನದ ಕೆಲವೇ ದಿನಗಳ ನಂತರ ಈ ಪತ್ರ ಬಂದಿದೆ. ರಶೀದ್ ಖಾನ್ ಅಂಡ್ ಕೋ ಈ ಸ್ಪರ್ಧೆಯಲ್ಲಿ ಐತಿಹಾಸಿಕ ಅಭಿಯಾನವನ್ನು ಆನಂದಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತು. ಅವರು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದರು.

Exit mobile version