Site icon Vistara News

Aiden Markarm : ವಿಂಡೀಸ್ ವಿರುದ್ಧದ ಸರಣಿಗೆ ದ. ಆಫ್ರಿಕಾ ತಂಡದಲ್ಲಿ ಮಾರ್ಕ್ರಮ್​​ಗೆ ಇಲ್ಲ ಚಾನ್ಸ್​

Aiden Markram

ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) 15 ಸದಸ್ಯರ ತಂಡ ಪ್ರಕಟಿಸಿದೆ. ಜಮೈಕಾದಲ್ಲಿ ಮೇ 23 ರಿಂದ ಮೇ 26 ರವರೆಗೆ ನಡೆಯಲಿರುವ ಈ ಸರಣಿಯು ಮುಂದಿನ ತಿಂಗಳು ನಡೆಯಲಿರುವ 2024 ರ ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಎರಡೂ ತಂಡಗಳಿಗೆ ಅಭ್ಯಾಸವಾಗಲಿದೆ. ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಲು ಸಜ್ಜಾಗಿರುವ ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್ ಅವರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ನಿಯಮಿತ ನಾಯಕನ ಅನುಪಸ್ಥಿತಿಯಲ್ಲಿ ಸಂಕ್ಷಿಪ್ತ ಪ್ರವಾಸಕ್ಕೆ ರಾಸ್ಸಿ ವಾನ್ ಡೆರ್ ಡುಸೆನ್ ಅವರನ್ನು ದಕ್ಷಿಣ ಆಫ್ರಿಕಾ ನಾಯಕನಾಗಿ ನೇಮಿಸಲಾಗಿದೆ.

ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ಗೆ ಮುಂಚಿತವಾಗಿ, ಸಿಎಸ್ಎ ವೆಸ್ಟ್ ಇಂಡೀಸ್​ನಲ್ಲಿ ಮುಂಬರುವ ಮೂರು ಪಂದ್ಯಗಳ ಟಿ 20 ಐ ಸರಣಿಗಾಗಿ ತನ್ನ 15 ಸದಸ್ಯರ ತಂಡ ಆಯ್ಕೆ ಮಾಡಿದೆ. ಅದರಲ್ಲಿ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಯ್ಕೆ ಸಮಿತಿಯು ವಿಶ್ರಾಂತಿ ಪಡೆದ ಹಿರಿಯ ಆಟಗಾರರಲ್ಲಿ ಡೇವಿಡ್ ಮಿಲ್ಲರ್ ಮತ್ತು ಹೆನ್ರಿಕ್ ಕ್ಲಾಸೆನ್ ಮತ್ತು ನಿಯಮಿತ ಸೀಮಿತ ಓವರ್​ಗಳ ನಾಯಕ ಐಡೆನ್ ಮಾರ್ಕ್ರಮ್ ಸೇರಿದ್ದಾರೆ.

ದಕ್ಷಿಣ ಆಫ್ರಿಕಾದ ಟಿ 20 ವಿಶ್ವಕಪ್ 2024 ಗುಂಪಿನಿಂದ ಹೊರಗುಳಿದಿದ್ದ ರಾಸ್ಸಿ ವಾನ್ ಡೆರ್ ಡುಸೆನ್ ಅವರಿಗೆ ಮಾರ್ಕ್ರಮ್ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಆಫ್ರಿಕಾದ ಸಂಪೂರ್ಣ ತಂಡ ಮತ್ತು ಕೆರಿಬಿಯನ್ನಲ್ಲಿ ಮುಂಬರುವ ಮೂರು ಪಂದ್ಯಗಳ ಟಿ 20 ಐ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ: T20 World Cup : ಭಾರತ- ಪಾಕಿಸ್ತಾನ ಟಿ20 ವಿಶ್ವ ಕಪ್​ ಪಂದ್ಯದ ಟಿಕೆಟ್ ಬೆಲೆ 1.8 ಕೋಟಿ ರೂಪಾಯಿ!

ಮೂರು ಪಂದ್ಯಗಳು ಮೇ 23, ಮೇ 25 ಮತ್ತು ಮೇ 26 ರಂದು ಜಮೈಕಾದ ಸಬೀನಾ ಪಾರ್ಕ್​ನಲ್ಲಿ ನಡೆಯಲಿವೆ. ಸರಣಿ ಮುಗಿದ ಒಂದೆರಡು ದಿನಗಳ ನಂತರ, ದಕ್ಷಿಣ ಆಫ್ರಿಕಾದ ಆಟಗಾರರು 2024 ರ ಟಿ 20 ವಿಶ್ವಕಪ್ ಸಿದ್ಧತೆಗಳ ಭಾಗವಾಗಿ ಫ್ಲೋರಿಡಾದಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯ ಆಡಲಿದ್ದಾರೆ.

‘ಡಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ನೆದರ್ಲೆಂಡ್ಸ್ ತಂಡಗಳಿವೆ. ಐಡೆನ್ ಮಾರ್ಕ್ರಮ್ ನಾಯಕತ್ವದಲ್ಲಿ ಭಾರತ ತಂಡ ಜೂನ್ 3ರಂದು ನ್ಯೂಯಾರ್ಕ್ನ ನಸ್ಸಾವು ಕೌಂಟಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Exit mobile version