Site icon Vistara News

Sukhoi Fighter jet : ನಾಸಿಕ್​ನಲ್ಲಿ ವಾಯುಪಡೆ ಸುಖೋಯ್ ಯುದ್ಧ ವಿಮಾನ ಪತನ

Sukhoi Fighter jet

ಮುಂಬಯಿ: ಮಹಾರಾಷ್ಟ್ರದ ನಾಸಿಕ್​ನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 ಎಂಕೆಐ ಫೈಟರ್ ಜೆಟ್ (Sukhoi Fighter jet) ಮಂಗಳವಾರ ಪತನಗೊಂಡಿದೆ. ಆದರೆ, ಸುರಕ್ಷತಾ ವ್ಯವಸ್ಥೆ ಮೂಲಕ ಪೈಲಟ್ ಮತ್ತು ಸಹ-ಪೈಲಟ್ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಗಾಯಗಳಿಂದ ಬಳಲುತ್ತಿದ್ದಾರೆ. ವಿಮಾನವು ಶಿರಸ್ಗಾಂವ್ ಗ್ರಾಮದ ಬಳಿಯ ಹೊಲದಲ್ಲಿ ಅಪಘಾತಕ್ಕೀಡಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನವು ಮೈದಾನದಲ್ಲಿ ಅಪಘಾತಕ್ಕೀಡಾದ ನಂತರ ಹೊಗೆ ಏಳುತ್ತಿರುವು ದೃಶ್ಯಗಳು ಕಂಡುಬಂದಿವೆ. ಅವಳಿ ಎಂಜಿನ್ ಹೊಂದಿರುವ ವಿಮಾನವು ಬೆಂಕಿಗೆ ಆಹುತಿಯಾಗಿದ್ದು, ಅಪಘಾತದ ಸ್ಥಳದ ಬಳಿ ಜನಸಾಗರ ಕಂಡು ಬಂತು. ಮಹಾರಾಷ್ಟ್ರದ ನಾಸಿಕ್​ನ ಓರ್ಜಾದಿಂದ ಹೊರಟ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ (ಎಚ್ಎಎಲ್) ಪರೀಕ್ಷೆ ಮಾಡಿದ ಬಳಿಕ ಹಾರಾಟದಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Sensex Crashed : ಲೋಕ ಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ನೆಲಕಚ್ಚಿದ ಷೇರು ಮಾರುಕಟ್ಟೆ

ಈ ವಿಮಾನವು ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಇಲ್ಲ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಮತ್ತು ತುರ್ತು ಸೇವೆಗಳು ಸ್ಥಳಕ್ಕೆ ತಲುಪಿದ್ದು, ಪೈಲೆಟ್​​ಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಸು -30 ಎಂಕೆಐ ರಷ್ಯಾ ನಿರ್ಮಿತ ವಿಮಾನವಾಗಿದ್ದು. ಎನ್ಪಿಪಿ ಝ್ವೆಜ್ಡಾ ಕೆ -36 ಡಿಎಂ ಎಜೆಕ್ಷನ್ ಸೀಟ್ ಅನ್ನು ಬಳಸುತ್ತದೆ.

Exit mobile version