Site icon Vistara News

Airtel new offers : ಏರ್‌ಟೆಲ್‌ನಿಂದ 2 ನೂತನ ಪ್ರಿಪೇಯ್ಡ್‌ ಪ್ಲಾನ್‌ ಬಿಡುಗಡೆ, ವಿವರ ಇಲ್ಲಿದೆ

airtel price hike

ನವ ದೆಹಲಿ: ಖಾಸಗಿ ವಲಯದ ಭಾರ್ತಿ ಏರ್‌ಟೆಲ್‌ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ. ಅಮಿತ ಕರೆ, ಭಾರಿ ಡೇಟಾ ಸೌಲಭ್ಯವನ್ನು ನೀಡುವುದಾಗಿ ಕಂಪನಿ ತಿಳಿಸಿದೆ. ಈ ಸಲ ಏರ್‌ಟೆಲ್‌ ತನ್ನ ಪೋಸ್ಟ್‌ ಪೇಯ್ಡ್‌ ಮತ್ತು ಪ್ರಿ-ಪೇಯ್ಡ್‌ ನಡುವಣ ವ್ಯತ್ಯಾಸವನ್ನು ಕಡಿಮೆ ಮಾಡಿದೆ. (Airtel new offers) ಪ್ಲಾನ್‌ಗಳ ವಿವರ ಇಂತಿದೆ.

ಏರ್‌ಟೆಲ್‌ ರೂ. 489 ಪ್ಲಾನ್:

ಏರ್‌ಟೆಲ್‌ 489 ಪ್ಲಾನ್‌ ಸ್ಥಳೀಯ ಎಸ್‌ಟಿಡಿ ಮತ್ತು ರೋಮಿಂಗ್‌ ಕರೆಗಳ ಆಫರ್‌ ನೀಡಿದೆ. ಜತೆಗೆ 300 ಎಸ್‌ಎಂಎಸ್‌ ಅನ್ನು 30 ದಿನಗಳ ಅವಧಿಗೆ ನೀಡುತ್ತದೆ. ಈ ಪ್ಲಾನ್‌ನಲ್ಲಿ ಬಳಕೆದಾರರು 50 ಜಿಬಿ ಡೇಟಾವನ್ನು ಪಡೆದು ಇಂಟರ್‌ನೆಟ್‌ ಅನ್ನು ವ್ಯಾಪಕವಾಗಿ ಬಳಸಬಹುದು. ಜತೆಗೆ ಉಚಿತವಾಗಿ ಮ್ಯೂಸಿಕ್‌ ಸಬ್‌ಸ್ಕ್ರಿಪ್ಷನ್‌, ಫ್ರೀ ಹಲೊ ಟ್ಯೂನ್‌, ಫಾಸ್ಟ್ಯಾಗ್‌ನಲ್ಲಿ ಕ್ಯಾಶ್‌ ಬ್ಯಾಕ್‌ ಆಫರ್‌ ಅನ್ನು ಪಡೆಯಬಹುದು.

ಏರ್‌ಟೆಲ್‌ ರೂ. 509 ಪ್ಲಾನ್:

ಏರ್‌ಟೆಲ್‌ನ 509 ಪ್ಲಾನ್‌ನಲ್ಲಿ ಅಮಿತ ಸ್ಥಳೀಯ ಎಸ್‌ಟಿಡಿ ಮತ್ತು ರೋಮಿಂಗ್‌ ಕರೆಗಳು, ಮಾಸಿಕ 300 ಎಸ್‌ಎಂಎಸ್‌ ಅನ್ನು ಪಡೆಯಬಹುದು. ಬಳಕೆದಾರರು 60 ಜಿಬಿ ಡೇಟಾವನ್ನು ಪಡೆಯಬಹುದು. ಉಚಿತ ಮ್ಯೂಸಿಕ್‌, ಉಚಿತ ಹಲೋ ಟ್ಯೂನ್‌, ಫಾಸ್ಟ್ಯಾಗ್‌ನಲ್ಲಿ ಕ್ಯಾಶ್‌ ಬ್ಯಾಕ್‌ ಪಡೆಯಬಹುದು. ಏಳು ನೆಟ್‌ವರ್ಕ್ ವೃತ್ತಗಳಲ್ಲಿ ಮಾಸಿಕ ಕನಿಷ್ಠ ರಿಚಾರ್ಜ್‌ ಅನ್ನು 155 ರೂ.ಗೆ ಏರಿಸಿದೆ.‌

ಏರ್‌ಟೆಲ್‌ ರೂ. 155 ಪ್ಲಾನ್‌ ಸೌಲಭ್ಯಗಳು:

ಏರ್‌ಟೆಲ್‌ ರೂ.155 ಪ್ಲಾನ್‌ನ ಅವಧಿ 28 ದಿನಗಳಾಗಿವೆ. ಇದು 1 ಜಿಬಿ ಮೊಬೈಲ್‌ ಡೇಟಾ, ಅಮಿತ ಕರೆ ಸೌಲಭ್ಯ ಸಿಗುತ್ತದೆ. ಏರ್‌ಟೆಲ್‌ನ 155 ರೂ. ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ 300 ಎಸ್‌ಎಂಎಸ್‌ ಸೌಲಭ್ಯ ಸಿಗುತ್ತದೆ.

Exit mobile version