Site icon Vistara News

Alia Bhatt | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಆಲಿಯಾ ಭಟ್‌

Alia Bhatt

ಬೆಂಗಳೂರು: ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt ) ಹೆಣ್ಣು ಮಗುವಿಗೆ ನೆವೆಂಬರ್‌ 6 ಭಾನುವಾರ ಜನ್ಮ ನೀಡಿದ್ದಾರೆ. ಏಪ್ರಿಲ್ 14 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮೂಲಗಳ ಪ್ರಕಾರ, ನವೆಂಬರ್ 28 ರಂದು ಆಲಿಯಾ ಅವರ ಸಹೋದರಿ ಶಾಹೀನ್ ಅವರ ಹುಟ್ಟುಹಬ್ಬವಿದೆ. ಆ ಡೆಲಿವರಿ ದಿನಾಂಕದ ಹತ್ತಿರದ ಯಾವುದಾದರೂ ದಿನದಲ್ಲಿ ಆಲಿಯಾ ಅವರು ತಮ್ಮ ಮಗುವಿಗೆ ಜನ್ಮ ನೀಡಬಹುದು ಎಂದು ಹೇಳಲಾಗುತ್ತಿತ್ತು.

ಇದನ್ನೂ ಓದಿ | ರಣಬೀರ್​-ಅಲಿಯಾಗೆ ಉಜ್ಜಯನಿ ದೇಗುಲಕ್ಕೆ ಸಿಗಲಿಲ್ಲ ಪ್ರವೇಶ; 2011ರಲ್ಲಿ ರಣಬೀರ್​ ಆಡಿದ ಮಾತು ಕಾರಣ

ಪ್ರೆಗ್ನೆನ್ಸಿ ಫ್ಯಾಷನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ಬಾಲಿವುಡ್‌ ನಟಿ ಆಲಿಯಾ ಭಟ್ ಅವರು ಮತ್ತೊಮ್ಮೆ ತಮ್ಮ ಬೇಬಿ ಬಂಪ್‌ ಫೋಟೊವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದರು. ಬ್ರಹ್ಮಾಸ್ತ್ರ ಸಿನಿಮಾ ಪ್ರಮೋಷನ್‌ ವೇಳೆ ಅವರ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ಪ್ರಚಾರವನ್ನೂ ಮಾಡಿದ್ದರು.

ಇದನ್ನೂ ಓದಿ | Alia Bhatt | ಅಲಿಯಾ ಭಟ್‌ ಬೇಬಿ ಬಂಪ್‌ ಹೊಸ ಫೋಟೋಗಳು ವೈರಲ್‌!

Exit mobile version