Site icon Vistara News

Aman Sehrawat : ಸೆಮಿ ಫೈನಲ್​ನಲ್ಲಿ ಸೋತ ಅಮನ್​; ನಾಳೆ ಕಂಚಿನ ಪದಕಕ್ಕಾಗಿ ಹೋರಾಟ

Aman Sehrawat

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) ಸ್ಪರ್ಧೆಯಲ್ಲಿ ಉಳಿದಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟು ಅಮನ್ ಸೆಹ್ರಾವತ್ (Aman Sehrawat) ಗುರುವಾರ ನಡೆದ ಪುರುಷರ 57 ಕೆ.ಜಿ ವಿಭಾಗದ ಸೆಮಿಫೈನಲ್​​ನಲ್ಲಿ ಜಪಾನ್ನ ರೇ ಹಿಗುಚಿ ವಿರುದ್ಧ ಸೋತರು. ಹೀಗಾಗಿ ಶುಕ್ರವಾರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಹೋರಾಡಲಿದ್ದಾರೆ. ಮೂರು ನಿಮಿಷಗಳ ಮೊದಲ ಅವಧಿಯನ್ನು ಮೀರದ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ತಾಂತ್ರಿಕ ಹಿನ್ನಡೆಯೊಂದಿಗೆ ಸೋತರು.

ಗುರುವಾರ ಸತತ ಎರಡು ತಾಂತ್ರಿಕ ಶ್ರೇಷ್ಠತೆ ಗೆಲುವುಗಳನ್ನು ಗಳಿಸಿದ ನಂತರ ಅಮನ್ ಸೆಹ್ರಾವತ್​​ ಆತ್ಮವಿಶ್ವಾಸದಲ್ಲಿದ್ದರು. ಆದಾಗ್ಯೂ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಮತ್ತು 2022 ರ ವಿಶ್ವ ಚಾಂಪಿಯನ್ ರೀ ಹಿಗುಚಿ 21 ವರ್ಷದ ಭಾರತೀಯನಿಗೆ ಸ್ವಲ್ಪವೂ ಅವಕಾಶ ಕೊಡಲಿಲ್ಲ.

ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಅವರು ಪ್ಯಾನ್ ಅಮೆರಿಕನ್ ಗೇಮ್ಸ್ ಕಂಚಿನ ಪದಕ ವಿಜೇತ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಎದುರಿಸಲಿದ್ದಾರೆ. 57 ಕೆಜಿ ವಿಭಾಗದ ಆ ಕುಸ್ತಿಪಟು ರಿಪೆಚೇಜ್ ಮೂಲಕ ಕ್ವಾರ್ಟರ್​ ಫೈನಲ್​ಗೇರಿದ್ದಾರೆ.

ಉತ್ತರ ಮ್ಯಾಸಿಡೋನಿಯಾದ ವ್ಲಾದಿಮಿರ್ ಎಗೊರೊವ್ ವಿರುದ್ಧ 10-0 ಅಂತರದಲ್ಲಿ ಜಯ ಸಾಧಿಸುವ ಮೂಲಕ 21ರ ಹರೆಯದ ಅಮನ್ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಿದ್ದರು. ಕ್ವಾರ್ಟರ್ ಫೈನಲ್​ನಲ್ಲಿ ಅಮನ್ ಅಲ್ಬೇನಿಯಾದ ಅಬರಕೊವ್ ಜೆಲಿಮ್ಖಾನ್ ಅವರನ್ನು 12-0 ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: Paris Olympics 2024 : ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

2004 ರಲ್ಲಿ ಜನಿಸಿದ ಸೆಹ್ರಾವತ್ ದೆಹಲಿಯ ಪ್ರತಿಷ್ಠಿತ ಛತ್ರಾಸಲ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಈಗಾಗಲೇ ಅಂಡರ್ 23 ವಿಶ್ವ ಚಾಂಪಿಯನ್ಶಿಪ್ ಮತ್ತು ಹಿರಿಯ ಏಷ್ಯನ್ ಚಾಂಪಿಯನ್ಶಿಪ್ ಸೇರಿದಂತೆ ಪ್ರಭಾವಶಾಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಅನ್ಶು ಮಲಿಕ್ (57 ಕೆ.ಜಿ) ಗುರುವಾರ ಆರಂಭಿಕ ಸುತ್ತಿನಲ್ಲಿ ಸೋತರೆ, ಅತಿಂಮ್ ಪಂಗಲ್ (53 ಕೆಜಿ) ಆರಂಭಿಕ ಸುತ್ತಿನಲ್ಲಿ ಸೋತರು. ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ನಿಶಾ ದಹಿಯಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೃದಯ ವಿದ್ರಾವಕ ಗಾಯದಿಂದಾಗಿ ಸೋತಿದ್ದಾರೆ. ಮಹಿಳಾ 50 ಕೆ.ಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.

Exit mobile version