ನವದೆಹಲಿ: ಟಿ 20 ವಿಶ್ವಕಪ್ 2024 (T20 World Cup 2024) ಸೂಪರ್ 8 ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಸಿದ್ದತೆ ನಡೆಸುತ್ತಿದೆ. ಈ ನಡುವೆ ತಂಡದ ಕುರಿತು ಮಾತನಾಡಿದ ಮಾಜಿ ಬ್ಯಾಟರ್ ಅಂಬಾಟಿ ರಾಯುಡು ಸೂರ್ಯಕುಮಾರ್ ಯಾದವ್ (Suryakumar Yadav ) ವಿಶ್ವದ ಅತ್ಯುತ್ತಮ ಟಿ 20 ಬ್ಯಾಟರ್ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ನಂತರ ಅಂಬಾಟಿ ರಾಯುಡು ಈ ಹೇಳಿಕೆ ನೀಡಿದ್ದಾರೆ. ಭಾರತ ತಂಡದ ಕೊನೆಯ ಲೀಗ್ ಪಂದ್ಯದಲ್ಲಿ ಸೂರ್ಯಕುಮಾರ್ 49 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಶಿವಂ ದುಬೆ ಅವರೊಂದಿಗೆ 72 ರನ್ಗಳ ಜೊತೆಯಾಟವಾಡಿದ ಅವರು ಸಹ-ಆತಿಥೇಯ ಯುಎಸ್ಎ ವಿರುದ್ಧ 111 ರನ್ಗಳ ಚೇಸ್ಗೆ ನೆರವಾಗಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಟಿ 20 ವಿಶ್ವಕಪ್ನಲ್ಲಿ ಸತತ ಎರಡನೇ ಅರ್ಧಶತಕದೊಂದಿಗೆ ಮಿಂಚಿದರು. ಸೂರ್ಯ ಸರಿಯಾದ ಸಮಯದಲ್ಲಿ ಮತ್ತು ಈ ಆವೃತ್ತಿಯ ಕೆಲವು ಪ್ರಮುಖ ಪಂದ್ಯಗಳಿಗೆ ಮುಂಚಿತವಾಗಿ ಫಾರ್ಮ್ ಕಂಡುಕೊಂಡರು. ಭಾರತ ಫೈನಲ್ ತಲುಪಿದರೆ ಅವರು ಆಸ್ಟ್ರೇಲಿಯಾ ವಿರುದ್ಧ, ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಅವರು ಇದೇ ರೀತಿಯ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಅಂಬಾಟಿ ರಾಯುಡು ಶ್ಲಾಘನೆ
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅಂಬಾಟಿ ರಾಯುಡು, ಅಫ್ಘಾನಿಸ್ತಾನ ವಿರುದ್ಧ ಸೂರ್ಯಕುಮಾರ್ ಯಾದವ್ ತೋರಿದ ಪ್ರದರ್ಶನವನ್ನು ಶ್ಲಾಘಿಸಿದರು. ಹಲವಾರು ಕಾರಣಗಳಿಗಾಗಿ ಸೂರ್ಯಕುಮಾರ್ ಅಫ್ಘಾನಿಸ್ತಾನದ ವಿರುದ್ಧ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದರು ಎಂದು ಹೇಳಿದ್ದಾರೆ. ಅವರು ಸ್ಪಿನ್ ಬೌಲರ್ಗಳ ವಿರುದ್ಧ ಉತ್ತಮ ಪಾದದ ಚಲನೆ ತೋರಿಸಿದ್ದರು. ಕ್ರೀಸ್ ಅನ್ನು ಬುದ್ಧಿವಂತಿಕೆಯಿಂದ ಬಳಸಿದ್ದರು. ಅಂಬಾಟಿ ರಾಯುಡು ಅವರು ಸೂರ್ಯಕುಮಾರ್ ಯಾದವ್ ಅವರ ಕ್ರೀಸ್ ಬಳಕೆಯನ್ನು ಬೊಟ್ಟು ಮಾಡಿದರು. ಏಕೆಂದರೆ ಅವರು ಆಗಾಗ್ಗೆ 2 ಮೀಟರ್ ಮುಂದೆ ಹೋಗಿ ಆಡಿದ್ದರು.
ಸ್ಪಿನ್ನರ್ಗಳ ವಿರುದ್ಧ ಸೂರ್ಯ ರಚಿಸಿದ ಯೋಜನೆಗಳು ತುಂಬಾ ಉತ್ತಮವಾಗಿವೆ. ರಾಯುಡು ಪ್ರಕಾರ ಅಂತಹ ಪರಿಸ್ಥಿತಿಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಕಲಿಯಲು ಯುವಕರಿಗೆ ಸೂರ್ಯಕುಮಾರ್ ಉತ್ತಮ ಉದಾಹರಣೆಯಾಗಿದ್ದಾರೆ. ಹೀಗಾಗಿ ಬಲಗೈ ಬ್ಯಾಟರ್ ವಿಶ್ವದ ಅತ್ಯುತ್ತಮ ಟಿ 20 ಬ್ಯಾಟ್ಸ್ಮನ್ ಆಗಿದ್ಆರೆ ಎಂದು ಸುರ್ಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Gautam Gambhir : ಕೋಚ್ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್!
28 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ ಸುಮಾರು 190 ಸ್ಟ್ರೈಕ್ ರೇಟ್ನಲ್ಲಿ 53 ರನ್ ಗಳಿಸುವ ಮೂಲಕ ಭಾರತಕ್ಕೆ 181 ರನ್ ಗಳಿಸಲು ಸೂರ್ಯ ನೆರವಾಗಿದ್ದರು.
ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ದೇವರು ನೀಡಿದ ಉಡುಗೊರೆ
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 7 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಎಲ್ಲಾ ರೀತಿಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಬುಮ್ರಾ ಅವರ ವಿಶೇಷ ಸಾಮರ್ಥ್ಯವನ್ನು ರಾಯುಡು ಎತ್ತಿ ತೋರಿಸಿದರು. ಅವರನ್ನು ನೋಡುವ ಅವಕಾಶವನ್ನು ಹೊಂದಿರುವ ಎಲ್ಲಾ ಭಾರತೀಯರು ಅದೃಷ್ಟವಂತರು ಎಂದು ಹೇಳಿದರು.
ಜಸ್ಪ್ರೀತ್ ಬುಮ್ರಾ ಅವರಿಗೆ ನೀಡಲಾದ ಪ್ರತಿಯೊಂದು ಪರಿಸ್ಥಿತಿಗೆ ಅವರು ಹೊಂದಿಕೊಳ್ಳುವ ಸಾಮರ್ಥ್ಯವಿದೆ. ಅವರು ಅದ್ಭುತ ಬೌಲರ್ ಮತ್ತು ಅವರು ಈ ಭಾರತೀಯ ತಂಡಕ್ಕೆ ದೇವರು ನೀಡಿದ ಉಡುಗೊರೆ” ಎಂದು ಅಂಬಾಟಿ ರಾಯುಡು ಹೇಳಿದರು.