ಬೆಂಗಳೂರು: ಕರ್ನಾಟಕ ಮೂಲದ ಬಹುಭಾಷಾ ಮೈಕ್ರೊ- ಬ್ಲಾಗಿಂಗ್ ಫ್ಲಾಟ್‌ಫಾರ್ಮ್ ʻಕೂ’ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಹ್ಯಾಷ್ ಟ್ಯಾಗ್ ಆಂದೋಲನ ನಡೆಸುತ್ತಿದೆ.
ಸ್ವಾತಂತ್ರ್ಯದಅಮೃತಮಹೋತ್ಸವ ಹ್ಯಾಷ್ ಟ್ಯಾಗ್‌ನಡಿ ಆಗಸ್ಟ್ 8ರಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಕ್ಯಾಂಪೇನ್ ಅನ್ನು ಆರಂಭಿಸಲಾಗಿದೆ. ಆಗಸ್ಟ್ 9ರಂದು #ದೇಶಭಕ್ತಿಸಾರುವಸಿನಿಮಾ, ಆ.10ರಂದು #ಸ್ವಾತಂತ್ರ್ಯಸಂಭ್ರಮ, ಆ. 11ರಂದು #ನಮ್ಮೂರಸ್ವಾತಂತ್ರ್ಯಹೋರಾಟ, ಆ.12ರಂದು #ನನ್ನಪ್ರೀತಿಯಭಾರತ, ಆ.13ರಂದು #ಸ್ವಾತಂತ್ರ್ಯವೀರರು, ಆ.14ರಂದು #ರಾಷ್ಟ್ರಗೀತೆ ಹಾಗೂ ಸ್ವಾತಂತ್ರ್ಯೋತ್ಸವದಂದು (ಆ.15) #ನನ್ನತ್ರಿವರ್ಣಧ್ವಜ ಮತ್ತು #ಸ್ವಾತಂತ್ರ್ಯದಿನಾಚರಣೆ ಹ್ಯಾಷ್ ಟ್ಯಾಗ್‌ನಡಿ ಬಳಕೆದಾರರು ಪೋಸ್ಟ್ ಮಾಡಬಹುದಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸಲು ಮತ್ತು ಅರ್ಥಪೂರ್ಣ ಆಚರಣೆಯನ್ನು ಪ್ರೊತ್ಸಾಹಿಸಲು ಕೂ ಆ್ಯಪ್ ಈ ಆಂದೋಲನ ನಡೆಸುತ್ತಿದೆ. ಬಳಕೆದಾರರೆಲ್ಲರೂ ಆಯಾ ದಿನದಂದು ನಿಗದಿಪಡಿಸಿದ ಹ್ಯಾಷ್ ಟ್ಯಾಗ್‌ಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ- ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಈ ಆಂದೋಲನವನ್ನು ಬೆಂಬಲಿಸಬೇಕೆಂದು ಕೂ ಆ್ಯಪ್ ಕೋರಿದೆ.
ಇದನ್ನೂ ಓದಿ: Amrit Mahotsav | ಸ್ವಾತಂತ್ರ್ಯ ಅಮೃತ ಮಹೋತ್ಸವ: ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ