Site icon Vistara News

ಅನಂತ್‌ ಅಂಬಾನಿ ಮದುವೆ ಊಟದಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯ ತಿನಿಸುಗಳು; ಇಲ್ಲಿದೆ ತಿಂಡಿಗಳ ಪಟ್ಟಿ

Anant Ambani Wedding

Anant Ambani Wedding: This is what Bengaluru's Rameshwaram Cafe is serving for the guests

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ಮದುವೆಯು (Anant Ambani Wedding) ಅದ್ಧೂರಿಯಾಗಿ ನೆರವೇರಿಸಿದೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ (Radhika Merchant) ಅವರು ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೇಶ-ವಿದೇಶಗಳ ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಸಮ್ಮುಖದಲ್ಲಿ ನವ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇನ್ನು ಮದುವೆ ಆಗಮಿಸಿದ ಸಾವಿರಾರು ಗಣ್ಯರಿಗೆ ಅಂಬಾನಿ ಕುಟುಂಬಸ್ಥರು ಭರ್ಜರಿ ಭೋಜನ ಹಾಕಿಸಿದ್ದಾರೆ. ಅದರಲ್ಲೂ, ಬೆಂಗಳೂರಿನಲ್ಲಿರುವ, ಖ್ಯಾತ ರಾಮೇಶ್ವರಂ ಕೆಫೆಯ ಹಲವು ತಿನಿಸುಗಳು ಕೂಡ ಮದುವೆ ಮನೆಯ ಊಟದ ಸಾಲಿಗೆ ಸೇರಿವೆ.

ಹೌದು, ಅನಂತ್‌ ಹಾಗೂ ರಾಧಿಕಾ ಮದುವೆಯ ಭೋಜನದ ಮೆನು ಈಗ ಲಭ್ಯವಾಗಿದ್ದು, ರಾಮೇಶ್ವರಂ ಕೆಫೆಯ ಹಲವು ತಿನಿಸುಗಳು ಕೂಡ ಇದರ ಭಾಗವಾಗಿವೆ. ರಾಮೇಶ್ವರಂ ಕೆಫೆಯ ದೋಸೆ, ಬಟರ್‌ ದೋಸೆ, ತುಪ್ಪದ ದೋಸೆ, ಗಾರ್ಲಿಕ್‌ ದೋಸೆ, ಪೆಸರಟ್ಟು ದೋಸೆ, ಇಡ್ಲಿ, ತಟ್ಟೆ ಇಡ್ಲಿ (ಪ್ಲೇನ್‌ & ಪೋಡಿ), ತುಪ್ಪದ ಪಡ್ಡು, ಬೋಂಡಾ ಸೂಪ್‌ ಹಾಗೂ ಫಿಲ್ಟರ್‌ ಕಾಫಿಯನ್ನು ಮದುವೆಯ ಭೋಜನದಲ್ಲಿ ಬಡಿಸಲಾಗಿದೆ ಎಂದು ತಿಳಿದುಬಂದಿದೆ.

ರಾಮೇಶ್ವರಂ ಕೆಫೆಯ ಮೆನು

ವಿವಾಹ ಪೂರ್ವ ಸಮಾರಂಭದಲ್ಲೂ ರಾಮೇಶ್ವರಂ ಕೆಫೆ ತಿನಿಸು

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರು ಎರಡನೇ ವಿವಾಹ ಪೂರ್ವ ಸಮಾರಂಭ ಐಷಾರಾಮಿ ಹಡಗಿನಲ್ಲಿ ನಡೆದಿರುವುದು ಗೊತ್ತೆ ಇದೆ. ಈ ವಿವಾಹ ಪೂರ್ವ ಸಮಾರಂಭದಲ್ಲಿ ರಾಮೇಶ್ವರಂ ಕೆಫೆ ಕೂಡ ಭಾಗಿಯಾಗಿತ್ತು. ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಇದಾಗಿದೆ ಎಂದು ರಾಮೇಶ್ವರಂ ಕೆಫೆ ಇನ್‌ಸ್ಟಾ ಮೂಲಕ ಹೇಳಿಕೊಂಡಿದೆ. ಈವೆಂಟ್‌ಗೆ ಹಾಜರಾದ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‌ಗಳು ಕೆಫೆ ನೀಡುವ ಆಹಾರವನ್ನು ಆನಂದಿಸಿದ್ದಾರೆ ಎಂದು ರಾಮೇಶ್ವರಂ ಕೆಫೆ ಹೇಳಿಕೊಂಡಿದೆ.

ರಾಮೇಶ್ವರಂ ಕೆಫೆಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ವೈರಲ್ ಆಗಿದೆ. “ಇನ್ನೊಂದು ಮೈಲಿಗಲ್ಲು..! ಸ್ಪೇನ್‌ನಲ್ಲಿ ನಡೆಯುತ್ತಿರುವ ಪ್ರಪಂಚದ ಅತ್ಯುತ್ತಮ ವಿವಾಹ ಪೂರ್ವ ಆಚರಣೆಗಳ ಭಾಗಿಯಾಗಿದ್ದಕ್ಕೆ ನಾವು ಸಂತೋಷಪಡುತ್ತೇವೆ. ರಾಮೇಶ್ವರಂ ಕೆಫೆ ದಕ್ಷಿಣದ ಅತ್ಯುತ್ತಮ ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಆಗಿದೆ,” ಎಂದು ಶೀರ್ಷಿಕೆ ನೀಡಿದ್ದರು. ರಾಮೇಶ್ವರಂ ಕೆಫೆ ಸಹಸ್ಥಾಪಕ ರಾಘವೇಂದ್ರ ರಾವ್ ಮಾಧ್ಯಮವೊಂದಕ್ಕೆ ಈವೆಂಟ್‌ಗೆ ಹಾಜರಾಗುವ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‌ಗಳು ಕೆಫೆ ನೀಡುವ ಆಹಾರವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ʻʻಪುಡಿ ಇಡ್ಲಿ ಮತ್ತು ಪುಡಿ ದೋಸೆಯನ್ನು ಆನಂದಿಸುತ್ತಿದ್ದಾರೆ” ಎಂದು ಅವರು ಹೇಳಿದ್ದರು.

ಎರಡನೇ ಪೂರ್ವ ವಿವಾಹ ಸಮಾರಂಭವು ಮೇ 28ರಿಂದ 30ರವರೆಗೆ ನಡೆದಿದೆ. ಅಂಬಾನಿ ಕುಟುಂಬವು ಸುಮಾರು 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಿತ್ತು. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿತ್ತು. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದ್ದರು.

ನೂರಾರು ಗಣ್ಯರ ಉಪಸ್ಥಿತಿ

ಅನಂತ್‌ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಹೃತಿಕ್‌ ರೋಷನ್‌, ವರುಣ್‌ ಧವನ್‌, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Anant Ambani Wedding: ಅನಂತ್‌ ಅಂಬಾನಿ-ರಾಧಿಕಾ ಈಗ ಸತಿ-ಪತಿ; ಮದುವೆಯ ಮೊದಲ ವಿಡಿಯೊ ಇಲ್ಲಿದೆ

Exit mobile version