ತಿರುಮಲ: ಆಂಧ್ರಪ್ರದೇಶ (Andhra Pradesh) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ (ನವೆಂಬರ್ 27) ಬೆಳಗ್ಗೆ ವಿಶ್ವಪ್ರಸಿದ್ಧ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದರು. ತಿರುಮಲ ದೇವಸ್ಥಾನಕ್ಕೆ (Tirumala Temple) ತೆರಳಿದ ಮೋದಿ ಅವರು ವೆಂಕಟೇಶ್ವರನಿ ಸ್ವಾಮಿ (Lord Venkateswara) ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
“ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದೆ. ದೇಶದ 140 ಕೋಟಿ ಜನರಿಗೆ ಆರೋಗ್ಯ, ಸಮೃದ್ಧಿ ಕರುಣಿಸಿ ಎಂದು ದೇವರಲ್ಲಿ ಪ್ರಾರ್ಥಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಬಳಿಕ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಭಾನುವಾರ ರಾತ್ರಿಯೇ ಆಂಧ್ರಪ್ರದೇಶಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ, ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಸೇರಿ ಹಲವರು ಸ್ವಾಗತಿಸಿದರು.
ಇದನ್ನೂ ಓದಿ: Narendra Modi: ಹಿಮದ ರಾಶಿ ಮಧ್ಯೆ ತಪಸ್ಸಿಗೆ ಕುಳಿತ ನರೇಂದ್ರ ಮೋದಿ; ಧ್ಯಾನ, ಮೌನ, ನಮನ!
ಆಂಧ್ರಪ್ರದೇಶಕ್ಕೆ ತೆರಳುವ ಮುನ್ನ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದರು. ಇದೇ ವೇಳೆ ಅವರು ಆಡಳಿತಾರೂಢ ಬಿಆರ್ಎಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ವಿರುದ್ಧವೂ ಅವರು ಹರಿಹಾಯ್ದರು.
ಮೋದಿ ಭೇಟಿಯ ವಿಡಿಯೊ
#WATCH | Prime Minister Narendra Modi offers prayers at the Sri Venkateswara Swamy Temple in Tirumala, Andhra Pradesh pic.twitter.com/eLnOTqStbo
— ANI (@ANI) November 27, 2023
ತೆಲಂಗಾಣದಲ್ಲಿ ನವೆಂಬರ್ 30ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಕಾರಣ ರಾಜ್ಯದಲ್ಲಿ ಬಿಆರ್ಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸುತ್ತಿವೆ.
ఓం నమో వేంకటాశాయ!
— Narendra Modi (@narendramodi) November 27, 2023
తిరుమల నుండి మరికొన్ని దృశ్యాలు. pic.twitter.com/B8yPfPOF2t
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ