ಬೆಂಗಳೂರು: ಭಾರತ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumrah) ಟಿ20 ವಿಶ್ವಕಪ್ನಲ್ಲಿ 15 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅವರು ಭಾರತ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಫೈನಲ್ನಲ್ಲಿ ಅವರು ರೀಜಾ ಹೆಂಡ್ರಿಕ್ಸ್ ಮತ್ತು ಮಾರ್ಕೊ ಜೆನ್ಸರ್ ವಿಕೆಟ್ಗಳನ್ನು ಉರುಳಿಸಿದ್ದಾರೆ. ಭಾರತದ ಪಾಲಿಗೆ ಎರಡೂ ಪ್ರಮುಖ ವಿಕೆಟ್ಗಳಾಗಿವೆ. ಬುಮ್ರಾ ವಿಶ್ವಕಪ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಟೂರ್ನಿಯುದ್ದಕ್ಕೂ ರೋಹಿತ್ ಶರ್ಮಾ ಅವರ ಪ್ರಮುಖ ಬೌಲರ್ ಆಗಿದ್ದರು.
ಫೈನಲ್ನಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ, ವಿಶ್ವಕಪ್ನಾದ್ಯಂತ ಬೌಲಿಂಗ್ ಸ್ಥಿರತೆಗಾಗಿ ಬುಮ್ರಾ ಅವರನ್ನು ಪಂದ್ಯಾವಳಿಯ ಉತ್ತಮ ಆಟಗಾರ ಎಂದು ಹೆಸರಿಸಲಾಯಿತು. ಭಾರತವು ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ ಬುಮ್ರಾ ತಮ್ಮ ಪತ್ನಿ ಸಂಜನಾ ಗಣೇಶನ್ ಅವರೊಂದಿಗೆ ಮಾತನಾಡಿದರು. ಈ ಪಂದ್ಯಾವಳಿಯಲ್ಲಿ ಐಸಿಸಿ ಪರವಾಗಿ ಕೆಲಸ ಮಾಡುತ್ತಿರುವ ಗಣೇಶನ್ ಅವರು ವಿಶ್ವಕಪ್ ಗೆದ್ದ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬುಮ್ರಾ ಅವರನ್ನು ಕೇಳಿದರು.
“ಇದು ನಿಜವಾಗಿಯೂ ಖುಷಿಯ ವಿಚಾರ. ಇನ್ನಿಂಗ್ಸ್ ನ ಮಧ್ಯದಲ್ಲಿ ನಮಗೆ ಆತ್ಮವಿಶ್ವಾಸವಿತ್ತು. ಆದರೆ ಅದು ಹೇಗೆ ಸಾಗುತ್ತೇವೆ ಎಂದು ನಾವು ಹೆದರಿದ್ದೆವು. ಆದರೆ ಈ ರೀತಿಯ ಗೆಲುವನ್ನು ಪಡೆಯಲು ನಿಜವಾಗಿಯೂ ಸಂತೋಷವಾಗಿದೆ.. ಇದು ಉತ್ತಮ ಟೂರ್ನಿ ಎಂದು ಬುಮ್ರಾ ಹೇಳಿದ್ದಾರೆ. ಪುತ್ರ ಅಂಗದ್ ಕೂಡ ಜತೆಯಲ್ಲಿರುವ ಕಾರಣ ಆತನೊಂದಿಗೆ ವಿಶ್ವ ಕಪ್ ಗೆಲುವು ಸಂಭ್ರಮಿಸುವುದು ಖುಷಿಯ ವಿಚಾರ ಎಂದು ಅವರು ಹೇಳಿದ್ದಾರೆ.
“ನಮ್ಮ ಪುತ್ರ ಅಂಗದ್ ಕೂಡ ಇಲ್ಲಿದ್ದಾನೆ. ಆತ ನಾವು ವಿಶ್ವಕಪ್ ಗೆದ್ದಿರುವುದನ್ನು ನೋಡಿದ್ದಾನೆ ಇದಕ್ಕಿಂತ ಉತ್ತಮ ಭಾವನೆ ಇಲ್ಲ. ಈ ರೀತಿಯ ಪಂದ್ಯಾವಳಿಯಲ್ಲಿ ಭಾರತಕ್ಕೆ ಕೊಡುಗೆ ನೀಡಿದ್ದಕ್ಕೆ ಸಂತೋಷವಿದೆ” ಎಂದು ವೇಗಿ ಹೇಳಿದ್ದಾರೆ.
ಈ ಟಿ 20 ವಿಶ್ವಕಪ್ನಲ್ಲಿ ಭಾರತದ ಅಜೇಯ ಓಟದ ಬಗ್ಗೆ ಪ್ರತಿಕ್ರಿಯಿಸಿದ ಬುಮ್ರಾ, “ಎಲ್ಲಾ ಪ್ರಶಂಸೆಗಳು ಕಡಿಮೆ. ನಾವು ನಿರೀಕ್ಷೆಗಳೊಂದಿಗೆ ಬಂದಿದ್ದೆವು. ನಾವು ನಮ್ಮ ಆಟಕ್ಕೆ ಅಂಟಿಕೊಂಡಿದ್ದೆವು. ಕೊನೆಯ ಹಂತಗಳಲ್ಲಿಯೂ, ನಾವು ಭಯಭೀತರಾಗಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ವಿದಾಯ
ಭಾರತೀಯ ವೇಗಿ ಇಡೀ ಭಾರತೀಯ ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ನಿಜವಾಗಿಯೂ ಖುಷಿಯ ವಿಚಾರ. ಎಲ್ಲ ಬೌಲರ್ಗಳು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ, ನಾನು ನನ್ನ ಭಾವನೆಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತೇನೆ. ಆದರೆ ಈ ಬಾರಿ, ಇದು ಅವಾಸ್ತವಿಕ ಭಾವನೆಯಾಗಿದೆ” ಎಂದು ಬುಮ್ರಾ ಸಂತೋಷ ವ್ಯಕ್ತಪಡಿಸಿದ್ದಾರೆ. ನಾನು ಚಂದ್ರನ ಮೇಲೆ ಇದ್ದೇನೆ, ವಿಶೇಷವಾಗಿ ನನ್ನ ಕುಟುಂಬದೊಂದಿಗೆ ಇಲ್ಲಿದ್ದೇನೆ ಎಂದು ಭಾವಿಸುವೆ ಎಂದು ಭಾರತೀಯ ವೇಗಿ ಹೇಳಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಲು ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ತಂತ್ರಗಾರಿಕೆಯ ನಿರ್ಧಾರವು ಫಲ ನೀಡಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ಚೇಸಿಂಗ್ನಲ್ಲಿ ಒತ್ತಡಕ್ಕೆ ಸಿಲುಕಿತು. ಅಂತಿಮ ಐದು ಓವರ್ಗಳಲ್ಲಿ 30 ರನ್ಗಳ ಅಗತ್ಯವಿದ್ದ ದಕ್ಷಿಣ ಆಫ್ರಿಕಾ ವಿಫಲಗೊಂಡಿತು.