ಲಖನೌ: ಐಪಿಎಲ್ 2024ರ (IPL 2024) ಶುಕ್ರವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024 ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಡಿಆರ್ಎಸ್ ಕರೆ ಕುರಿತು ಆನ್ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದ ಪ್ರಸಂಗ ನಡೆದಿದೆ. ಡಿಆರ್ಎಸ್ ಪಡೆಯುವ ವೇಳೆ ಪಂತ್ ಅವರ ನಿರ್ಧಾರದ ಗೊಂದಲದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಎಲ್ಎಸ್ಜಿ ಇನ್ನಿಂಗ್ಸ್ನ 4 ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಇಶಾಂತ್ ಶರ್ಮಾ ದೇವದತ್ ಪಡಿಕ್ಕಲ್ ಗೆ ಲೆಗ್ ಸೈಡ್ನಲ್ಲಿ ಎಸೆತವನ್ನು ಎಸೆದರು. ಅಂಪೈರ್ ವೈಡ್ ಸಂಕೇತವನ್ನು ನೀಡಿದರು. ಆದರೆ ಪಂತ್ ತಕ್ಷಣ ರಿವ್ಯೂ ತೆಗೆದುಕೊಂಡರು. ರಿಪ್ಲೇ ಕೂಡ ವೈಡ್ ಎಂದು ತೋರಿಸಿತು. ಆದರೆ ಪಂತ್ ಸಂತೋಷಗೊಳ್ಳದೇ ಅಂಪೈರ್ ಜತೆ ಜಗಳಕ್ಕೆ ನಿಂತರು.
Rishabh Pant Took DRS by Mistake 🙃#LSGvDC #RishabhPant #DCvsLSG #IPL2024 pic.twitter.com/9PjUoF1WEC
— Tanay (@tanay_chawda1) April 12, 2024
ರಿಷಭ್ ಪಂತ್ ಕೋಪಗೊಳ್ಳುವುದ ಬೇಗ. ಈ ಹಿಂದೆಯೂ ಒಂದು ಬಾರಿ ಐಪಿಎಲ್ನಲ್ಲಿ ತಮ್ಮ ತಂಡಕ್ಕೆ ಅನ್ಯಾಯವಾಗಿದೆ ಎಂದು ವಾದಿಸಿ ಅವರೆಲ್ಲರನ್ನೂ ಮೈದಾನ ಬಿಟ್ಟು ಬರುವಂತೆ ಕೋರಿದ್ದ ಘಟನೆ ನಡೆದಿತ್ತು. ಇದೀಗ ಗೊಂದಲದಲ್ಲಿ ಮತ್ತೊಂದು ಬಾರಿ ಕೋಪಗೊಂಡರು. ಅಂಪೈರ್ ಮತ್ತು ಪಂತ್ ನಡುವೆ ಸುದೀರ್ಘ ಸಂಭಾಷಣೆ ನಡೆಯಿತು. ಆದರೆ ಅಧಿಕೃತ ಪ್ರಸಾರಕರು ತೋರಿಸಿದ ವಿವಿಧ ರಿಪ್ಲೇಗಳು ಪಂತ್ ನಿಜವಾಗಿಯೂ ವಿಮರ್ಶೆಗೆ ಸಂಕೇತ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್ ವಾರ್ನರ್ ಆ್ಯಕ್ಟಿಂಗ್; ಇಲ್ಲಿದೆ ವಿಡಿಯೊ
ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ತಂಡದ ಸಹ ಆಟಗಾರನ ಸಲಹೆ ಪಡೆಯಲು ಪಂತ್ ಆ ಸನ್ನೆ ಮಾಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು. ಆದರೆ ಅಂಪೈರ್ ಇದು ಅಧಿಕೃತ ವಿಮರ್ಶೆ ಎಂದು ಭಾವಿಸಿದರು. ಇದರಿಂದಾಗಿ ಡೆಲ್ಲಿ ತಂಡ ಒಂದು ವಿಮರ್ಶೆ ಕಳೆದುಕೊಂಡರು.
ಪರಿಶೀಲನೆಯ ಸಮಯದಲ್ಲಿ ಅಂಪೈರ್ ಸ್ನಿಕೋಮೀಟರ್ ಅನ್ನು ಪರಿಶೀಲಿಸದಿರುವ ಬಗ್ಗೆ ಪಂತ್ ಕೋಪಗೊಂಡಿದ್ದಾರೆ ಎಂದು ಪೊಮ್ಮಿ ಎಂಬಾಂಗ್ವಾ ಮತ್ತು ದೀಪ್ ದಾಸ್ಗುಪ್ತಾ ಹೇಳಿದರು. ಏಕೆಂದರೆ ಅದು ವೈಡ್ ಎಂದು ನಿರ್ಧರಿಸಲು ಅಂಪೈರ್ ಎಜ್ ಪರಿಶೀಲಿಸಬೇಕಾಗಿತ್ತು ಎಂದು ಡಿಸಿ ನಾಯಕ ನಂಬಿದ್ದರು.