ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತ ಕಂಡ ಮಹಾನ್ ನಾಯಕ. ಪ್ರಧಾನಿ ಮೋದಿಯವರ ನೇರ ನಡೆ, ದಕ್ಷ ಆಡಳಿತದಿಂದ ಅವರು ಭಾರತ ಮಾತ್ರವಲ್ಲ ವಿಶ್ವದ ನೆಚ್ಚಿನ ನಾಯಕರೆನಿಸಿಕೊಂಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪಕ್ಷ ಬಹುಮತ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ನಾಯಕರು ಸೇರಿ ನರೇಂದ್ರ ಮೋದಿಯವರನ್ನು ಮತ್ತೆ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಜೂನ್ 9ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಪ್ರಮುಖ ವ್ಯಕ್ತಿಗಳು, ಖ್ಯಾತ ಸಿನಿಮಾ ತಾರೆಯರ ದಂಡೇ ಆಗಮಿಸಿತ್ತು.ಈ ಕಾರ್ಯಕ್ರಮಕ್ಕೆ ನಟ ರಜನಿಕಾಂತ್ ಮತ್ತು ನಟ ಅನುಪಮ ಖೇರ್ (Anupam Kher-Rajinikanth)ಅವರು ಆಗಮಿಸಿದ್ದರು.
ರಜನಿಕಾಂತ್ ಅವರನ್ನು ನೋಡಿದಾಕ್ಷಣ ಅನುಪಮ್ ಖೇರ್ ಅವರು ಖುಷಿಯಿಂದ ಹಾಡಿ ಹೊಗಳಿದ್ದಾರೆ. ರಜನಿಕಾಂತ್ ಅವರನ್ನು “ಮನುಕುಲಕ್ಕೆ ದೇವರು ನೀಡಿದ ಕೊಡುಗೆ” ಎಂದು ಅನುಪಮ್ ಖೇರ್ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ಈ ವಿಡಿಯೋವನ್ನು ಅನುಪಮ್ ಖೇರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅನುಪಮ್ ಖೇರ್ ಮತ್ತು ರಜನಿಕಾಂತ್ ಅವರು ಭದ್ರತೆಯೊಂದಿಗೆ ನಡೆದುಕೊಂಡು ಹೋಗುವುದು ಕಾಣುತ್ತಿದೆ. ಆ ವೇಳೆ ಕ್ಯಾಮೆರಾವನ್ನು ನೋಡುತ್ತಿದ್ದ ಅನುಪಮ್, “ಒಬ್ಬನೇ, ಮಿಸ್ಟರ್ ರಜನಿ-ದಿ-ಕಾಂತ್! ! ಮನುಕುಲಕ್ಕೆ ದೇವರ ಕೊಡುಗೆ! ವಾಹ್!” ಎಂದು ಹೇಳುತ್ತಾ ರಜನಿಕಾಂತ್ ಅವರನ್ನು ಹೊಗಳಿದ್ದಾರೆ. ಆಗ ರಜನಿಕಾಂತ್ ಅನುಪಮ್ ಖೇರ್ ತೋಳನ್ನು ಹಿಡಿದು ಮುಗುಳ್ನಕ್ಕಿದ್ದಾರೆ. ಈ ಇಬ್ಬರ ನಟರ ಖುಷಿಯನ್ನು ಜನರು ಕೂಡ ಕಣ್ತುಂಬಿಕೊಂಡಿದ್ದಾರೆ.
ಈ ವಿಡಿಯೋಗೆ ನಿರ್ಮಾಪಕ ಆನಂದ್ ಪಂಡಿತ್ ಅವರು, “ರಜನಿಕಾಂತ್ ಪ್ರತಿಭೆಯ ಜೊತೆಗೆ, ನಮ್ರತೆ, ದಯೆ ಮತ್ತು ಪ್ರೀತಿಯ ಮಹಾಪೂರವನ್ನು ತುಂಬಿರುವ ವ್ಯಕ್ತಿ ಎಂದು ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟ ರಾಕೇಶ್ ಬೇಡಿ ಅವರು,”ಅದರಲ್ಲಿ ಯಾವುದೇ ಸಂದೇಹವಿಲ್ಲ ಹಾಗೇ ತುಂಬಾ ಸರಳ ವ್ಯಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ.
ಭಾನುವಾರ ನಡೆದ ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವ ಮುನ್ನ ರಜನಿಕಾಂತ್ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕ್ರಮದ ಐತಿಹಾಸಿಕ ಮಹತ್ವವನ್ನು ಶ್ಲಾಘಿಸಿದರು ಮತ್ತು ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುತ್ತಿರುವುದಕ್ಕೆ ಅಭಿನಂದಿಸಿದರು. ಪ್ರಬಲ ಪ್ರತಿಪಕ್ಷಗಳ ಉಪಸ್ಥಿತಿಯು ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನ; ನಟಿ ಸಂಜನಾಗೆ ಶಾಕ್, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!
ನಟ ರಜನೀಕಾಂತ್ ಅವರು ಕೊನೆಯದಾಗಿ ‘ಲಾಲ್ ಸಲಾಮ್ ‘ ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಹಾಗೇ ರಜನಿಕಾಂತ್ ಅವರ 170ನೇ ಸಿನಿಮಾ ಟಿಜೆ ಜ್ಞಾನವೇಲ್ ನಿರ್ದೇಶನದ ‘ವೆಟ್ಟೈಯನ್’ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.