Site icon Vistara News

Anurag Thakur : ನಮೋ ಹ್ಯಾಟ್ರಿಕ್​ ; ಕೇಸರಿ ದಿರಸಿನಲ್ಲಿ ಪಾರ್ಲಿಮೆಂಟ್​ಗೆ ಬಂದ ಕ್ರೀಡಾ ಸಚಿವ ಅನುರಾಗ್​ ಠಾಕೂರ್​

Anurag Thakur

ಬೆಂಗಳೂರು: ಅನುರಾಗ್ ಠಾಕೂರ್ (Anurag Thakur) ಶನಿವಾರ ‘ನಮೋ ಹ್ಯಾಟ್ರಿಕ್’ ಎಂದು ಬರೆದಿರುವ ಕೇಸರಿ ಹೂಡಿ (ಟಿ ಶರ್ಟ್​​) ಧರಿಸಿ ಪಾರ್ಲಿಮೆಂಟ್​ಗೆ ಆಗಮಿಸಿದ್ದರು. ಲೋಕಸಭೆಯಲ್ಲಿ ರಾಮ ಮಂದಿರದ ಮೇಲಿನ ಚರ್ಚೆಗೆ ಮುಂಚಿತವಾಗಿ ಕೇಂದ್ರ ಸಚಿವರು ಸಂಸತ್ ಭವನಕ್ಕೆ ಬಂದಿದ್ದರು. ಈ ವೇಳೆ ನಮೊ ಹ್ಯಾಟ್ರಿಕ್​ ಟಿ ಶರ್ಟ್​ ಹಾಕಿಕೊಂಡಿದ್ದ ಕಾರಣ ಗಮನ ಸೆಳೆದರು.

ಪಾರ್ಲಿಮೆಂಟ್​ ಕಟ್ಟಡದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪ್ರಧಾನಿ ದೇಶದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಬಡವರ ಕಲ್ಯಾಣ ಮತ್ತು ದೇಶದ ಅಭಿವೃದ್ಧಿಯನ್ನು ಮಾಡಿದ ರೀತಿ, ದೇಶದ ಜನರು ಮೋದಿ ಸರ್ಕಾರವನ್ನು ಮೂರನೇ ಬಾರಿಗೆ ತರಲು ಮನಸ್ಸು ಮಾಡಿದ್ದಾರೆ ಎಂದು ಅವರು ಹೇಳಿದರು.

ಏಪ್ರಿಲ್​, ಮೇನಲ್ಲಿ ಚುನಾವಣೆ ಸಾಧ್ಯತೆ

ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ದಿನಾಂಕಗಳ ಬಗ್ಗೆ ಚುನಾವಣಾ ಆಯೋಗವು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಭಾರತದ 18 ನೇ ಲೋಕಸಭೆಯ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿದೆ.

ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ) ಮತ್ತೊಂದು ಬಾರಿ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಎನ್​​ಡಿಎ ನೇತೃತ್ವದ 17 ನೇ ಲೋಕಸಭಾ ಅಧಿವೇಶನದ ಅಧಿಕೃತ ಅಧಿಕಾರಾವಧಿ ಜೂನ್ 16 ರಂದು ಕೊನೆಗೊಳ್ಳಲಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿವೆ.

2019 ರಲ್ಲಿ 17ನೇ ಲೋಕಸಭೆಗೆ ಚುನಾವಣೆ ನಡೆದಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಒಟ್ಟು 543 ಸ್ಥಾನಗಳಲ್ಲಿ 353 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಸ್ವಂತವಾಗಿ ಒಟ್ಟು 303 ಸ್ಥಾನಗಳನ್ನು ಗೆದ್ದಿತು, ಇದು ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳ ಸಂಖ್ಯೆಗಿಂತ 31 ಹೆಚ್ಚು, ಅಂದರೆ 272.

Exit mobile version