Site icon Vistara News

Aishwarya Arjun : ಚೆನ್ನೈನಲ್ಲಿ ವಿವಾಹವಾದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್​; ಇಲ್ಲಿವೆ ಚಿತ್ರಗಳು

Aishwarya Arjun

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಸರ್ಜಾ (Aishwarya Sarja) ಅವರ ವಿವಾಹ ನಟ ಉಮಾಪತಿ ರಾಮಯ್ಯ ಅವರೊಂದಿಗೆ ಚೆನ್ನೈನಲ್ಲಿ ಸೋಮವಾರ (ಜೂನ್​ 10ರಂದು) ನಡೆದಿದೆ. ಸರಳ ಕಾರ್ಯಕ್ರಮದಲ್ಲಿ ನಡೆದ ಮದುವೆ ಫೋಟೋಗಳನ್ನು ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಕುಟುಂಬವೇ ಕಳೆದ ವರ್ಷ ಚೆನ್ನೈನಲ್ಲಿ ನಿರ್ಮಿಸಿದ್ದ ಆಂಜನೇಯ ದೇವಸ್ಥಾನದಲ್ಲಿ ಅವರಿಬ್ಬರ ಮದುವೆ ನಡೆದಿದೆ. 2023ರ ಅಕ್ಟೋಬರ್ 27 ರಂದು ಈ ಇವರಿಬ್ಬರ ಎಂಗೇಜ್​ಮೆಂಟ್​ ಇದೇ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ದಂಪತಿಯ ಫೊಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಮದುವೆಯಲ್ಲಿ ಯಾರು ಹಾಜರಿದ್ದರು ಎಂಬ ಮಾಹಿತಿ ಇಲ್ಲ. ಉಮಾಪತಿ ಅವರು ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಪುತ್ರ ಹಾಗೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮದುವೆಯಾಗಲು ನಿರ್ಧರಿಸಿದ ಅವರು ಕಳೆದ ವರ್ಷ ಎಂಗೇಜ್​ಮೆಂಟ್ ಮಾಡಿಕೊಂಡು ಇದೀಗ ಮದುವೆಯಾಗಿದ್ದಾರೆ. ಮದುವೆ ಚಿತ್ರಗಳ ಮೇಲೆ ನ 10-06-2024 ಎಂದಷ್ಟೇ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pawan Kalyan: ಪವನ್‌ ಕಲ್ಯಾಣ್‌ ಮಾಜಿ ಪತ್ನಿ ಮರು ಮದುವೆಗೆ ರೆಡಿ!

ಐಶ್ವರ್ಯಾ ಮತ್ತು ಉಮಾಪತಿ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯಿತ್ತು. ಬಳಿಕ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು. ಐಶ್ವಯಾ ಅರ್ಜುನ್​ 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ನಟಿಸಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಸಿನಿಮಾ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು. ಅದೇ ರೀತಿ ‘ಪಟ್ಟತು ಯಾನೈ’, ‘ಪ್ರೇಮ ಬರಹ’, ‘ಸೊಲ್ಲಿವಿಡವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ನಾಯಕಿಯಾಗಿ ಕೆಲ ಚಿತ್ರಗಳಲ್ಲಿ ಮಾಡಿದ್ದರೂ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಅವರ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿಲ್ಲ

Exit mobile version