ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ (Ind vs Eng) ಭಾರತ ತಂಡ ಗೆಲುವಿನ ಹೊಸ್ತಿಲಲ್ಲಿದೆ. 192 ರನ್ಗಳ ಅಲ್ಪ ಗುರಿ ಪಡೆದ ಟೀಮ್ ಇಂಡಿಯಾ, ಮೂರನೇ ದಿನದಂತ್ಯಕ್ಕೆ 8 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಹೀಗಾಗಿ ಗೆಲುವಿನ ಅವಕಾಶ ಹೆಚ್ಚಿದೆ. ಆದಾಗ್ಯೂ ನಾಲ್ಕನೇ ದಿನದಾಟದಲ್ಲಿ ಪಿಚ್ ಯಾವ ರೀತಿ ವರ್ತಿಸುತ್ತದೆ ಎಂಬುದರ ಮೇಲೆ ಪಂದ್ಯದ ಭವಿಷ್ಯ ಅಡಗಿದೆ.ಅದಕ್ಕಿಂತ ಮೊದಲು ಮೂರನೇ ದಿನದಲ್ಲಿ ಇಂಗ್ಲೆಂಡ್ ತಂಡ ಭಾರತದ ಸ್ಪಿನ್ನರ್ಗಳಾದ ಆರ್. ಅಶ್ವಿನ್ (51 ರನ್ಗೆ 5 ವಿಕೆಟ್) ಹಾಗೂ ಕುಲ್ದೀಪ್ ಯಾದವ್ (22 ರನ್ಗೆ 4 ವಿಕೆಟ್) ಅವರ ಸ್ಪಿನ್ ದಾಳಿಗೆ ಬೆಚ್ಚಿ 2ನೇ ಇನ್ನಿಂಗ್ಸ್ನಲ್ಲಿ 145 ರನ್ಗಳಿಗೆ ಕುಸಿತ ಕಂಡಿತು.
ICYMI!
— BCCI (@BCCI) February 25, 2024
How good was that grab from Dhruv Jurel 🙌
An excellent day for the #TeamIndia wicketkeeper in Ranchi 👏👏#INDvENG | @IDFCFIRSTBank pic.twitter.com/UpwFx8juKt
ಅದಕ್ಕಿಂತ ಮೊದಲು ಮೂರನೇ ದಿನ ಆರಂಭದಲ್ಲಿ ಭಾರತ ತಂಡದ 307 ರನ್ಗಳಿಗೆ ಆಲ್ಔಟ್ ಆಯಿತು. ಈ ಮೂಲಕ 46 ರನ್ಗಳ ಹಿನ್ನಡೆಗೆ ಒಳಗಾಯಿತು. ಆದರೆ, ಎಡನೇ ಇನಿಂಗ್ಸ್ ಬೌಲಿಂಗ್ನಲ್ಲಿ ಭಾರತ ತಂಡ ಚಮತ್ಕಾರ ಮಾಡಿತು. ಎರಡನೇ ದಿನ ಏಳು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ್ದ ಭಾರತಕ್ಕೆ ಮೂರನೇ ದಿನ ವಿಕೆಟ್ಕೀಪರ್ ಬ್ಯಾಟರ್ ಧ್ರುವ್ ಜುರೆಲ್ (90) ಆಸರೆಯಾದರು. ಎರಡನೇ ದ್ವಿತೀಯ ದಿನದಂದು 30 ರನ್ ಗಳಿಸಿದ್ದ ಜುರೆಲ್ ಅದಕ್ಕೆ 60 ರನ್ ಸೇರಿಸಿದರು. ಆದರೆ ಚೊಚ್ಚಲ ಶತಕದ ಅವಕಾಶದಿಂದ ವಂಚಿತರಾದು. ಆದಾಗ್ಯೂ ಅವರು ಬೃಹತ್ ಅಂತರದ ಹಿನ್ನಡೆ ತಗ್ಗಿಸಿ ರೋಹಿತ್ ಪಡೆಯನ್ನು ಕಾಪಾಡಿದರು. 149 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 90 ರನ್ ಗಳಿಸಿ ಔಟಾದರು. ಜತೆಗೆ ತಂಡವನ್ನು 300ರ ಗಡಿ ದಾಟಿಸಿದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 353 ರನ್ ಗಳಿಸಿತ್ತು. ಅಂತೆಯೇ 46 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ದೊಡ್ಡ ಮೊತ್ತ ಗಳಿಸುವ ನೀಡುವ ವಿಶ್ವಾಸ ಹೊಂದಿತ್ತು. ಆದರೆ ಅಶ್ವಿನ್, ಕುಲ್ದೀಪ್ ಯಾದವ್ ದಾಳಿಗೆ 145 ರನ್ಗಳಿಗೆ ಆಲೌಟ್ ಆಯಿತು
ಅಶ್ವಿನ್ ಮತ್ತು ಕುಲ್ದೀಪ್ ಸ್ಪಿನ್ ಮ್ಯಾಜಿಕ್
ಎರಡನೇ ಇನ್ನಿಂಗ್ಸ್ನಲ್ಲಿ ಬೃಹತ್ ರನ್ ಪೇರಿಸುವ ನಿರೀಕ್ಷೆ ಮತ್ತು ಕನಸಿನಲ್ಲಿದ್ದ ಇಂಗ್ಲೆಂಡ್ಗೆ ಆರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಮಾರಕವಾಗಿ ಪರಿಣಮಿಸಿದರು. ಅಶ್ವಿನ್ 5 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ 28 ರನ್ಗಳ ಕಾಣಿಕೆ ನೀಡಿದ್ದ ಕುಲ್ದೀಪ್ ಬೌಲಿಂಗ್ನಲ್ಲಿ 4 ವಿಕೆಟ್ ಕಿತ್ತು ಗಮನ ಸೆಳೆದರು. ಇದರ ನಡುವೆಯೂ ಜಾಕ್ ಕ್ರಾವ್ಲಿ 60 ರನ್ ಸಿಡಿಸಿದರು.
ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್; ಏನದು ದಾಖಲೆ?
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ (R Ashwin) ಅವರು ಅನಿಲ್ ಕುಂಬ್ಳೆ (Anil Kumble) ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ 500 ಟೆಸ್ಟ್ ವಿಕೆಟ್ಗಳ ಮೈಲಿಗಲ್ಲನ್ನು ದಾಟಿದ ಅಶ್ವಿನ್ ಮತ್ತೊಮ್ಮೆ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 307 ರನ್ಗಳಿಗೆ ಆಲೌಟ್ ಆದ ನಂತರ ಈ ಮಹತ್ವದ ದಾಖಲೆ ಬರೆದರು. ಇಂಗ್ಲೆಂಡ್ನ ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಅಶ್ವಿನ್ ತ್ವರಿತವಾಗಿ ತಮ್ಮ ಛಾಪು ಮೂಡಿಸಿದರು. ಇದರಿಂದಾಗಿ ಕುಂಬ್ಳೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮೀರಿಸಿದರು.
ಇದನ್ನೂ ಓದಿ : Rohit Sharma : ನಾಯಕ ರೋಹಿತ್ ಸಲಹೆ ತಿರಸ್ಕರಿಸಿದ ಕುಲ್ದೀಪ್ ಯಾದವ್
ಒಲಿ ಪೋಪ್ ಅವರನ್ನು ಔಟ್ ಮಾಡಿದ ರವಿಚಂದ್ರನ್ ಅಶ್ವಿನ್ ಅವರ ಭಾರತದಲ್ಲಿ ಟೆಸ್ಟ್ ವಿಕೆಟ್ಗಳ ಸಂಖ್ಯೆ 351 ಕ್ಕೆ ತಲುಪಿದೆ. ಕುಂಬ್ಳೆ ಅವರ 350 ವಿಕೆಟ್ಗಳ ಸಾಧನೆಯನ್ನು ಈ ವೇಳೆ ಹಿಂದಿಕ್ಕಿದ್ದಾರೆ.
ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 28 ರನ್ಗಳಿಂದ ಗೆಲುವು ಸಾಧಿಸಿದ್ದ ಇಂಗ್ಲೆಂಡ್, ತದ ನಂತರ ವಿಶಾಖಪಟ್ಟಣಂ ಮತ್ತು ರಾಜ್ಕೋಟ್ನಲ್ಲಿ ಭಾರತದ ಎದುರಿಗೆ ಶರಣಾದವು. ಕ್ರಮವಾಗಿ 106 ಮತ್ತು 434 ರನ್ಗಳ ಅಂತರದಿಂದ ಸೋಲು ಅನುಭವಿಸಿತು. ಇದೀಗ 4ನೇ ಪಂದ್ಯದಲ್ಲೂ ಸೋಲಿನ ಅಂಚಿನಲ್ಲಿದೆ. ಈ ಟೆಸ್ಟ್ನಲ್ಲಿ ಪರಾಭವಗೊಂಡರೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಇಂಗ್ಲೆಂಡ್ ಕೈಚೆಲ್ಲಲಿದೆ.