Site icon Vistara News

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Asia Cup cricket

ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಆಹ್ವಾನದಲ್ಲಿ ಘೋಷಿಸಿದಂತೆ 2025ರ ಆವೃತ್ತಿಯ ಏಷ್ಯಾ ಕಪ್ ಭಾರತದಲ್ಲಿ (Asia Cup Cricket) ನಡೆಯಲಿದೆ. ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಮುಂಬರುವ ಆವೃತ್ತಿಯಲ್ಲಿ ಟಿ 20 ಸ್ವರೂಪದಲ್ಲಿ ನಡೆಯಲಿದ್ದು ಭಾರತದ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.

ಈ ಟೂರ್ನಿಯ 2026 ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ನಡೆಯಲಿದೆ. ಸಾಂಪ್ರದಾಯಿಕವಾಗಿ ಏಷ್ಯಾ ಕಪ್ ಐಸಿಸಿ ಪಂದ್ಯಾವಳಿಯ ಪೂರ್ವಸಿದ್ಧತಾ ಟೂರ್ನಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮುಂಬರುವ ವಿಶ್ವಕಪ್​ಗೆ ಮೊದಲು ಆಡಲಾಗುತ್ತದೆ. 2023 ರಲ್ಲಿ, ಏಷ್ಯಾ ಕಪ್ ಅನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿತು. ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ ಕಾರಣ ‘ಹೈಬ್ರಿಡ್ ಮಾದರಿಯಲ್ಲಿ’ ನಡೆಸಲಾಯಿತು. ಇದರ ಪರಿಣಾಮವಾಗಿ, ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು.

2027ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಬಾಂಗ್ಲಾದೇಶದಲ್ಲಿ ಆತಿಥ್ಯ ವಹಿಸಲಿದೆ. ಅದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಯೋಜಿಸಲಾದ 50 ಓವರ್ ಗಳ ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಡೆಯಲಿದೆ.

2025ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ಏಷ್ಯಾಕಪ್ ಹಾಗೂ 2027ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ 50 ಓವರ್ಗಳ ಏಷ್ಯಾಕಪ್​ನಲ್ಲಿ ತಲಾ 13 ಪಂದ್ಯಗಳು ನಡೆಯಲಿವೆ.

‘ಪುರುಷರ ಏಷ್ಯಾ ಕಪ್ ಪಂದ್ಯಾವಳಿ’ ಎಂದರೆ ನಿಯೋಜಿತ ಸದಸ್ಯರನ್ನು ಒಳಗೊಂಡ ಎಸಿಸಿ ಆಯೋಜಿಸುವ ಮತ್ತು ನಿರ್ವಹಿಸುವ ದ್ವೈವಾರ್ಷಿಕ ಹಿರಿಯ ಪುರುಷರ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದ ತಂಡಗಳು ಮತ್ತು ಅರ್ಹತಾ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಎಸಿಸಿಯ ಟೆಸ್ಟ್ ಅಲ್ಲದ ಸದಸ್ಯ ತಂಡವೊಂದು ಭಾಗವಹಿಸುತ್ತದೆ ಎಂದು ಎಸಿಸಿ ತನ್ನ ಐಇಒಐ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಏಷ್ಯಾಕಪ್ ಟಿ20 ಟ್ರೋಫಿ ಗೆದ್ದ ಬಳಿಕ ಭಾರತ ಹಾಲಿ ಚಾಂಪಿಯನ್ ಎನಿಸಿಕೊಂಡಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು ವಿರುದ್ಧ 10 ವಿಕೆಟ್​ಗಳ ಗೆಲವು ದಾಖಲಿಸಲಾಗಿತ್ತು. 7-1-21-6 ಅಂಕಗಳ ನಂತರ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದ್ದು, ಎಂಟು ಬಾರಿ ಪ್ರಶಸ್ತಿ ಗೆದ್ದಿದೆ.

Exit mobile version