Site icon Vistara News

ಶ್ರೀಶೈಲದಲ್ಲಿ 3 ತಿಂಗಳಲ್ಲಿ ಮತ್ತೊಂದು ಅಟ್ಯಾಕ್‌; ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆತ, ಸಿಬ್ಬಂದಿಗೆ ಥಳಿತ

ಶ್ರೀಶೈಲ

ವಿಜಯಪುರ : ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕದ ಸರಕಾರಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ನಡೆದಿದೆ. ಶ್ರೀಶೈಲದಲ್ಲಿ ಮತ್ತೆ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ಮುಂದುವರಿದಿದ್ದು, ವಿಜಯಪುರ ಡಿಪೋ ಘಟಕದ ಬಸ್ ಚಾಲಕ  ಬಸವರಾಜ್ ಬಿರಾದಾರ್ ಹಲ್ಲೆಗೆ ಒಳಗಾದ ವ್ಯಕ್ತಿ.

ಜೂನ್‌ 2 ರಂದು ಮಧ್ಯರಾತ್ರಿ ಶ್ರೀಶೈಲದಲ್ಲಿ ಬಸ್ ನಿಲ್ದಾಣದ‌ ಬಳಿ ಬಸ್ ನಿಲ್ಲಿಸಿ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಪುಂಡರ ಗುಂಪಿನಿಂದ ಹಲ್ಲೆ ನಡೆದಿದೆ. 10-12 ಜನರ ಗುಂಪು ಚಾಲಕನ ಮೇಲೆ ಅಟ್ಯಾಕ್‌ ಮಾಡಿದ್ದು, ಕನ್ನಡಿಗರ ಬಗ್ಗೆ ಅಶ್ಲೀಲ ಪದ ಬಳಸಿ ಬೈದಿದ್ದಾರೆ. ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಹಲ್ಲೆಗೈದು ತೀವ್ರ ರಕ್ತ ಸ್ರಾವ ಉಂಟಾಗಿದೆ.

ಇದನ್ನೂ ಓದಿ | ಕಾಲೇಜಿಗೆ ಟೋಪಿ ಹಾಕಿಕೊಂಡು ಬಂದ ವಿದ್ಯಾರ್ಥಿ ಮೇಲೆ ಹಲ್ಲೆ, ಪ್ರಿನ್ಸಿಪಾಲ್‌ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್

ಇತರೆ ಚಾಲಕರು ಹಾಗೂ ನಿರ್ವಾಹಕರು ಚಾಲಕ ಬಸವರಾಜ್‌ ಕಿರುಚಾಟ ಕೇಳುತ್ತಿದ್ದಂತೆ ಓಡಿ ಬಂದಿದ್ದಾರೆ. ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಇದೀಗ ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಯುಗಾದಿ ಸಂದರ್ಭದಲ್ಲಿಯೂ ಕೂಡ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಮಾರ್ಚ್‌ 31 ರಂದು ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿ ಕರ್ನಾಟಕದ ವಾಹನಗಳ ಗಾಜು ಒಡೆದು ಹಾಕಲಾಗಿತ್ತು. ನೀರಿನ ವಿಚಾರವಾಗಿ ಬಾಗಲಕೋಟೆ ಮೂಲದ ಶ್ರೀಶೈಲ್ ವಾರಿಮಠ ಎಂಬ ಯುವಕನ ಮೇಲೆ ಹಲ್ಲೆ ನಡೆದಿತ್ತು. ಮಾರ್ಚ್ 31ರ ಘಟನೆ‌ ಮಾಸುವ ಮುಂಚೆಯೇ ಮತ್ತೊಂದು ಇದೇ ರೀತಿಯ ಪ್ರಕರಣ ನಡೆದಿರುವುದರಿಂದ ಶ್ರೀಶೈಲದಲ್ಲಿ ಕನ್ನಡಿಗರಿಗೆ ಸುರಕ್ಷತೆ ಬಗ್ಗೆ ಸಂಶಯ ಮೂಡಿಬಂದಿದ್ದು, ಉದ್ದೇಶಪೂರ್ವವಾಗಿಯೇ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ | ಬಂಜಾರ ಗುರುಪೀಠದ ಜಗದ್ಗುರು ಮೇಲೆ ಹಲ್ಲೆ

Exit mobile version