ನವದೆಹಲಿ: ಆಸ್ಟ್ರೇಲಿಯಾದಲ್ಲಿ ಬ್ಯುಸಿನೆಸ್, ಸಿವಿಲ್ ಸೇರಿದಂತೆ ನಾನಾ ಕೋರ್ಸ್ಗಳನ್ನು ಕಲಿಯುವುದಕ್ಕೆ ಮನಸ್ಸಿದೆಯೇ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಆಸ್ಟ್ರೇಲಿಯಾದ ಮ್ಯಾಕ್ವಾರಿ ವಿಶ್ವವಿದ್ಯಾಲಯವು ಭಾರತ ಮತ್ತು ಶ್ರೀಲಂಕಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10,000 ಡಾಲರ್ ಮೌಲ್ಯದ (6 ಲಕ್ಷ ರೂಪಾಯಿ) ವಿದ್ಯಾರ್ಥಿವೇತನವನ್ನು (Scholarship) ಘೋಷಿಸಿದೆ. ಈ ವಿದ್ಯಾರ್ಥಿವೇತನವು ಎರಡೂ ದೇಶಗಳ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಗುರಿಯನ್ನು ಹೊಂದಿದೆ.
Want to study Cyber? Now, study cyber security program in Australia's Macquarie University.
— Paras Education (@paraseducation) April 23, 2018
Check out the funding options with us- https://t.co/WgCmJ732LP#Cybersecurity #studyinaustralia #studyabroad #educationloan #EducationForAll #EducationCannotWait #liveyourdreams pic.twitter.com/B9BfakLXa8
ಈ ಅನುದಾನವು ಮ್ಯಾಕ್ವಾರಿಯ ಸಿಡ್ನಿ ಕ್ಯಾಂಪಸ್ನಲ್ಲಿ ಕಲಿಸುವ ಎಲ್ಲಾ ಕೋರ್ಸ್ ವರ್ಕ್ ಪದವಿ ಕಾರ್ಯಕ್ರಮಗಳ ಬೋಧನಾ ಶುಲ್ಕ ಒಳಗೊಂಡಿರುತ್ತದೆ. 4 ವರ್ಷಗಳ ಪದವಿಪೂರ್ವ ಕೋರ್ಸ್ಗೆ ದಾಖಲಾಗುವ ವಿದ್ಯಾರ್ಥಿಗಳು 4 ವರ್ಷಗಳಲ್ಲಿ 40,000 ಯುಎಸ್ ಡಾಲರ್ ವರೆಗೆ (24 ಲಕ್ಷ ರೂಪಾಯಿ) ಪಡೆಯಲಿದ್ದಾರೆ.
ಇದನ್ನೂ ಓದಿ : Insurance Claim : ಕಾರಿಗೆ ಆಫ್ಟರ್ ಮಾರ್ಕೆಟ್ ಆಕ್ಸೆಸರಿ ಹಾಕಿಸುತ್ತೀರಾ? ಗಾಡಿಗೇನಾದರೂ ಆದರೆ ಇನ್ಶುರೆನ್ಸ್ ಸಿಗುವುದಿಲ್ಲ!
ಅರ್ಹತೆ
2024-25ರಿಂದ ಮ್ಯಾಕ್ವಾರಿ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಪ್ರಾರಂಭಿಸುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಲು ಕ್ಯಾಂಪಸ್ನಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ಪೂರ್ಣ ಸಮಯದವರೆಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಯಾಗಿರಬೇಕು. ಅವರು ಈ ಕೆಳಗಿನ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು.
- ಅಭ್ಯರ್ಥಿಯು ಭಾರತ ಮತ್ತು ಶ್ರೀಲಂಕಾದ ಪ್ರಜೆಯಾಗಿರಬೇಕು.
- ಅವನು /ಅವಳು ಮ್ಯಾಕ್ವಾರಿ ವಿಶ್ವವಿದ್ಯಾಲಯದಿಂದ ಪೂರ್ಣ ಪ್ರಸ್ತಾಪ ಹೊಂದಿರಬೇಕು.
- ಅಭ್ಯರ್ಥಿಯು ಆಫರ್ ಲೆಟರ್ ಅನ್ನು ಸ್ವೀಕರಿಸಬೇಕು ಮತ್ತು ಆಫರ್ ಲೆಟರ್ ನಲ್ಲಿ ನಮೂದಿಸಿರುವ ಸ್ವೀಕಾರ ನಿಗದಿತ ದಿನಾಂಕದೊಳಗೆ ಆರಂಭಿಕ ಶುಲ್ಕ ಪಾವತಿಸಬೇಕು.
ಮ್ಯಾಕ್ವಾರಿಯಲ್ಲಿ ಅಧ್ಯಯನದ ಪ್ರಮುಖ ಕ್ಷೇತ್ರಗಳು ಸೇರಿವೆ
- ಬ್ಯಾಂಕಿಂಗ್ ಮತ್ತು ಹಣಕಾಸು (ಫಿನ್ಟೆಕ್, ಎನ್ವಿರಾನ್ಮೆಂಟಲ್ ಫೈನಾನ್ಸ್, ಫೈನಾನ್ಷಿಯಲ್ ಮ್ಯಾನೇಜ್ಮೆಂಟ್)
- ಡೇಟಾ ಸೈನ್ಸ್
- ಐಟಿ (ಐಒಟಿ, ಎಐ, ಮಾಹಿತಿ ವ್ಯವಸ್ಥೆಗಳು, ನೆಟ್ವರ್ಕಿಂಗ್, ಸೈಬರ್ ಭದ್ರತೆ)
- ಎಂಜಿನಿಯರಿಂಗ್ (ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್, ರಿನಿವೇಬಲ್ ಎನರ್ಜಿ, ಸಿವಿಲ್, ಕನ್ಸ್ಟ್ರಕ್ಷನ್ , ಸಾಫ್ಟ್ವೇರ್)
- ಬಿಸಿನೆಸ್ ಅನಾಲಿಟಿಕ್ಸ್
- ಮ್ಯಾನೇಜ್ಮೆಂಟ್
- ಮೆಡಿಸಿನ್
- ಆರ್ಟ್ಸ್
- ಮೀಡಿಯಾ ಆ್ಯಂಡ್ ಕಮ್ಯುನಿಕೇಷನ್