Site icon Vistara News

Ayodhya Ram Mandir : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ‘ಟೆಂಪಲ್ ಮ್ಯೂಸಿಯಮ್​’; ಯೋಗಿ ಸಂಪುಟದ ಸಮ್ಮತಿ

Ayodhya Ram Mandir

ಲಕ್ನೋ: ವಿಶ್ವ ಪ್ರಸಿದ್ಧ ರಾಮ ಮಂದಿರುವ ಇರುವ ಅಯೋಧ್ಯೆಯಲ್ಲಿ 650 ಕೋಟಿ ರೂ.ಗಳ ವೆಚ್ಚದಲ್ಲಿ ‘ದೇವಾಲಯಗಳ ವಸ್ತುಸಂಗ್ರಹಾಲಯ’ ನಿರ್ಮಿಸುವ ಟಾಟಾ ಸನ್ಸ್​ ಸಂಸ್ಥೆಯ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಈ ನಿರ್ಧಾರದ ಬಗ್ಗೆ ವಿವರಗಳನ್ನು ಹಂಚಿಕೊಂಡ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್, ಪ್ರವಾಸೋದ್ಯಮ ಇಲಾಖೆಯು ಅಂತರರಾಷ್ಟ್ರೀಯ ಮಟ್ಟದ ವಸ್ತುಸಂಗ್ರಹಾಲಯ ನಿರ್ಮಾಣಕ್ಕಾಗಿ ಬಳಸುವ ಭೂಮಿಯನ್ನು 90 ವರ್ಷಗಳ ಗುತ್ತಿಗೆಗೆ 1 ರೂಪಾಯಿ ಮೊತ್ತಕ್ಕೆ ನೀಡಲಿದೆ ಎಂದು ಹೇಳಿದರು.

ಟಾಟಾ ಸನ್ಸ್ ಕೇಂದ್ರ ಸರ್ಕಾರದ ಮೂಲಕ ಈ ಯೋಜನೆಗೆ ಪ್ರಸ್ತಾಪ ಇಟ್ಟಿತ್ತು. ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಡಿ 650 ಕೋಟಿ ರೂ.ಗಳ ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಮುಂದಾಗಿತ್ತು” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಿಂಗ್ ಹೇಳಿದ್ದಾರೆ. ದೇವಾಲಯದ ಪಟ್ಟಣದಲ್ಲಿ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚುವರಿ 100 ಕೋಟಿ ರೂ.ಗಳ ಕಂಪನಿಯ ಪ್ರಸ್ತಾಪವನ್ನು ಕ್ಯಾಬಿನೆಟ್ ಅನುಮೋದಿಸಿದೆ ಎಂದು ಅವರು ಹೇಳಿದರು.

ಟಾಟಾ ಸನ್ಸ್ ಪ್ರಮುಖ ಹೂಡಿಕೆ ಹೋಲ್ಡಿಂಗ್ ಕಂಪನಿ

ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಹೆಲಿಪ್ಯಾಡ್​ಗಳನ್ನು ನಿರ್ಮಿಸುವ ಮೂಲಕ ಲಕ್ನೋ, ಪ್ರಯಾಗ್ರಾಜ್ ಮತ್ತು ಕಪಿಲವಾಸ್ತುಗಳಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ಪ್ರಾರಂಭಿಸುವುದು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಪಡೆದ ಇತರ ಪ್ರಸ್ತಾಪಗಳಾಗಿವೆ.

ಇದನ್ನೂ ಓದಿ:Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

ಸುಪ್ತ ಪಾರಂಪರಿಕ ಕಟ್ಟಡಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪಕ್ಕೂ ಸಂಪುಟ ಅನುಮೋದನೆ ಪಡೆದಿದೆ ಎಂದು ಸಚಿವರು ಹೇಳಿದರು.

ಲಕ್ನೋದ ಕೋಥಿ ರೋಶನ್ ದುಲ್ಹಾ, ಮಥುರಾದ ಬರ್ಸಾನಾ ಜಲ್ ಮಹಲ್ ಮತ್ತು ಕಾನ್ಪುರದ ಶುಕ್ಲಾ ತಲಾಬ್ (ಕೊಳ) ಈ ಮೂರು ಪಾರಂಪರಿಕ ಕಟ್ಟಡಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ ಎಂದು ಸಿಂಗ್​ ಹೇಳಿದ್ದಾರೆ. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಪ್ರವಾಸೋದ್ಯಮ ಫೆಲೋಶಿಪ್ ಕಾರ್ಯಕ್ರಮದಡಿ ಸಂಶೋಧಕರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

Exit mobile version