Site icon Vistara News

Ram Mandir : ಅಯೋಧ್ಯೆಯಿಂದ 8 ನಗರಗಳಿಗೆ ನೇರ ವಿಮಾನ; ಇಲ್ಲಿದೆ ಪೂರ್ಣ ವೇಳಾಪಟ್ಟಿ

Ram mandir

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರಕ್ಕೆ (Ram Mandir) ವಾಯು ಸಂಪರ್ಕವನ್ನು ಹೆಚ್ಚಿಸುವ ಮತ್ತು ಯಾತ್ರಾರ್ಥಿಗಳ ಆಗಮನ ಸುಗಮಗೊಳಿಸುವ ಪ್ರಯತ್ನದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಅಯೋಧ್ಯೆಗೆ 8 ಹೊಸ ವಿಮಾನ ಮಾರ್ಗಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಹೊಸ ವಿಮಾನಗಳು ದೆಹಲಿ, ಚೆನ್ನೈ, ಅಹಮದಾಬಾದ್, ಜೈಪುರ, ಪಾಟ್ನಾ, ದರ್ಭಂಗಾ, ಮುಂಬೈ ಮತ್ತು ಬೆಂಗಳೂರಿನೊಂದಿಗೆ ಅಯೋಧ್ಯೆಗೆ ಸಂಚರಿಸಲಿವೆ.

ಪವಿತ್ರ ನಗರವಾದ ಅಯೋಧ್ಯೆಗೆ ವಾಯು ಸಂಪರ್ಕವನ್ನು ಹೆಚ್ಚಿಸಲು ಮತ್ತು ಯಾತ್ರಾರ್ಥಿಗಳ ಆಗಮನಕ್ಕೆ ಅನುಕೂಲವಾಗುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ಫೆಬ್ರವರಿ 1, 2024 ರಂದು ಉತ್ತರ ಪ್ರದೇಶದ ಅಯೋಧ್ಯೆಗೆ 8 ಹೊಸ ವಿಮಾನ ಮಾರ್ಗಗಳನ್ನು ಪ್ರಾರಂಭಿಸಲು ಸಜ್ಜಾಗಿದೆ ಎಂದು ಸಚಿವಾಲಯ ತಿಳಿಸಿದೆ. ಹೊಸ ವಿಮಾನ ಮಾರ್ಗಗಳು ಅಯೋಧ್ಯೆಯನ್ನು ದೆಹಲಿ, ಚೆನ್ನೈ, ಅಹಮದಾಬಾದ್, ಜೈಪುರ, ಪಾಟ್ನಾ, ದರ್ಭಾಂಗ, ಮುಂಬೈ ಮತ್ತು ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಇತ್ತೀಚೆಗೆ ನಡೆದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆದಿತ್ತು. ಅಲ್ಲಿಂದ ಪವಿತ್ರ ಸ್ಥಳದ ಪ್ರವಾಸೋದ್ಯಮ ಸಾಮರ್ಥ್ಯ ಹೆಚ್ಚಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೊಸ ಮಾರ್ಗ ಸೃಷ್ಟಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಹೊಸ ವಿಮಾನ ಮಾರ್ಗಗಳು ದೆಹಲಿ, ಚೆನ್ನೈ, ಅಹಮದಾಬಾದ್, ಜೈಪುರ, ಪಾಟ್ನಾ, ದರ್ಭಂಗಾ, ಮುಂಬೈ ಮತ್ತು ಬೆಂಗಳೂರಿನೊಂದಿಗೆ ಅಯೋಧ್ಯೆಯನ್ನು ಸಂಪರ್ಕಿಸುತ್ತವೆ. ವಿಮಾನ ಸೇವೆಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉದ್ಘಾಟಿಸಲಿದ್ದು. ಸ್ಪೈಸ್ ಜೆಟ್ ವಿಮಾನಗಳನ್ನು ನಿರ್ವಹಿಸಲಿದೆ.

ರಾಮ ಮಂದಿರ ಉದ್ಘಾಟನೆ

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ಅಯೋಧ್ಯೆ ರಾಮ ದೇವಾಲಯದ ಪ್ರತಿಷ್ಠಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ :Hindu Temple : ಎಲ್ಲ ಧರ್ಮದವರಿಗೆ ಒಳಗೆ ಬಿಡಲು ದೇಗುಲಗಳು ಪಿಕ್ನಿಕ್​ ಸ್ಪಾಟ್​ಗಳಲ್ಲ; ಹೈಕೋರ್ಟ್​

51 ಇಂಚಿನ ದೇವರ ವಿಗ್ರಹವನ್ನು ಚಿನ್ನದ ಕಿರೀಟ ಮತ್ತು ಚಿನ್ನದ ಆಭರಣಗಳಿಂದ ಅಲಂಕರಿಸಲಾಗಿತ್ತು. ಮೂರ್ತಿ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹೊಂದಿತ್ತು. ಕಾರ್ಯಕ್ರಮದಲ್ಲಿ ಪ್ರಮುಖ ಮಠಾಧೀಶರು, ಧಾರ್ಮಿಕ ಮುಖಂಡರು, ಬಿಜೆಪಿ ಮುಖಂಡರು, ಚಲನಚಿತ್ರ ತಾರೆಯರು, ಕ್ರಿಕೆಟಿಗರು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು. ರಾಮ ಮಂದಿರವು ಪ್ರಾರಂಭವಾದಾಗಿನಿಂದ ಭಾರತ ಮತ್ತು ವಿಶ್ವದ ವಿವಿಧ ಭಾಗಗಳಿಂದ ದೇವಾಲಯ ಪಟ್ಟಣಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.

Exit mobile version