Site icon Vistara News

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Babar Azam

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡ ಹಾಲಿ ನಡೆಯುತ್ತಿರುವ ಟಿ20 ವಿಶ್ವ ಕಪ್​ನಲ್ಲಿ (T20 World Cup 2024) ಹೀನಾಯ ಪ್ರದರ್ಶನ ನೀಡಿ ಲೀಗ್ ಹಂತದಿಂದಲೇ ಹೊರಕ್ಕೆ ಬಿದ್ದಿದೆ. ಇದು ಅಲ್ಲಿ ಅಭಿಮಾನಿಗಳನ್ನು ಕೆರಳಿಸಿದ್ದು ತಂಡದ ನಾಯಕ ಬಾಬರ್ ಅಜಮ್ (Babar Azam) ಹಾಗೂ ಇತರರ ಮೇಲೆ ಬಗೆಬಗೆಯ ಆರೋಪಗಳನ್ನು ಮಾಡುತ್ತಿದ್ದಾರೆ. ಪಾಕ್​ನ ಕ್ರಿಕೆಟ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇದು ಆ ತಂಡದ ಆಟಗಾರರರ ಜಂಭವನ್ನು ಇಳಿಸಿದೆ. ಏತನ್ಮಧ್ಯೆ ನಾಯಕ ಬಾಬರ್ ಅಜಮ್ ತಮ್ಮ ವಿರುದ್ಧ ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದ ಪತ್ರಕರ್ತ ಮುಬಾಶರ್ ಲುಕ್ಮನ್ ವಿರುದ್ಧ 1 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಜಮ್ ವಿರುದ್ಧ ಮಾಡಲಾದ ಗಂಭೀರ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಲುಕ್ಮನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದಕ್ಕೆ ಅವರು ಕೆರಳಿದ್ದಾರೆ.

ಅಜಮ್ ಮತ್ತು ಅವರ ತಂಡದ ಆಟಗಾರರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಸೇರಿದಂತೆ ಸರಣಿ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಬಲಗೈ ಬ್ಯಾಟರ್​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಆಡಿ ಇ-ಟ್ರಾನ್ ಮತ್ತು ಆಸ್ಟ್ರೇಲಿಯಾ ಮತ್ತು ದುಬೈನಲ್ಲಿ ಐಷಾರಾಮಿ ಅಪಾರ್ಟ್​​ಮೆಂಟ್​ಗಳಂತಹ ದುಬಾರಿ ಉಡುಗೊರೆಗಳನ್ನು ಅಜಮ್ ಪಡೆದಿದ್ದಾರೆ ಎಂದು ಲುಕ್ಮನ್ ಆರೋಪಿಸಿದ್ದಾರೆ, ಇದು ಪಂದ್ಯಗಳ ಸಮಯದಲ್ಲಿ ಉದ್ದೇಶಪೂರ್ವಕ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ. ವಿಶೇಷವಾಗಿ ಟಿ 20 ವಿಶ್ವಕಪ್ 2024 ರ ಚೊಚ್ಚಲ ಟೂರ್ನಿ ಆಡುತ್ತಿರುವ ಯುಎಸ್ಎ ವಿರುದ್ಧ ಸೋಲಿಗೆ ಕಾರಣವಾಗಿತ್ತು.

ತಮ್ಮ ಕಾನೂನು ತಂಡದ ಮೂಲಕ ಅಜಂ ಅವರು ಪಾಕಿಸ್ತಾನದ ಪತ್ರಕರ್ತನಿಂದ ಸಾರ್ವಜನಿಕ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ, ಕ್ಷಮೆಯಾಚಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

2024 ರ ಟಿ 20 ವಿಶ್ವಕಪ್ನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಅದರ ಆಡಳಿತವು ಎದುರಿಸುತ್ತಿರುವ ಹೆಚ್ಚಿನ ಟೀಕೆಗಳನ್ನು ಎದುರಿಸಿತ್ತಿದೆ. ಹೀಗಾಗಿ ಕಾನೂನು ಹೋರಾಟಕ್ಕೆ ಅವರು ಮುಂದಾಗಿದ್ದಾರೆ. ಸಹಾಯಕ ಕೋಚ್ ಅಜರ್ ಮಹಮೂದ್ ಕೂಡ ಆರೋಪಗಳ ಅಲೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಧಾರರಹಿತ ಆರೋಪಗಳಿಂದಾಗಿ ಅವರು ಮತ್ತು ಅವರ ಕುಟುಂಬ ಎದುರಿಸುತ್ತಿರುವ ಕಿರುಕುಳವನ್ನು ಹೇಳಿದ್ದಾರೆ. ಮಹಮೂದ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್​ನಲ್ಲಿ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಗುಂಪು ಹಂತದ ನಿರ್ಗಮನದ ನಂತರ ಪಾಕಿಸ್ತಾನದ ತೀವ್ರ ಹಿನ್ನಡೆಯು ಆಟಗಾರರು ಮತ್ತು ತರಬೇತುದಾರರನ್ನು ಗುರಿಯಾಗಿಸಿಕೊಂಡು ಹಲವಾರು ಹೇಳಿಕೆಗಳಿಗೆ ಕಾರಣವಾಗಿದೆ.

Exit mobile version