Site icon Vistara News

Babar Azam : ​ ಅಭಿಮಾನಿಗೆ ಬೆದರಿಕೆ ಒಡ್ಡಿದ ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಂ, ವಿಡಿಯೊ ಇಲ್ಲಿದೆ

Babar Azam

ಕರಾಚಿ: ಬಾಬರ್ ಅಜಂ (Babar Azam) ಸಣ್ಣ ಪುಟ್ಟ ತಂಡಗಳ ವಿರುದ್ಧ ಮಾತ್ರ ಉತ್ತಮವಾಗಿ ಬ್ಯಾಟ್​ ಮಾಡುತ್ತಾರೆ ಎಂಬ ಆರೋಪ ಕ್ರಿಕೆಟ್​ ಕ್ಷೇತ್ರದಲ್ಲಿದೆ. ಅದಕ್ಕಾಗಿ ಅವರನ್ನು “ಜಿಂಬಾಬರ್” (zimbabar) ಎಂದು ಅಭಿಮಾನಿಗಳು ಕುಹಕ ಮಾಡುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಬಾಬರ್​ ಪದೇಪದೆ ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಾರೆ. ಅಂತೆಯೇ ಅವರು ಪಿಎಸ್​ಎಲ್​ ಪಂದ್ಯವನ್ನು ಆಡುವ ವೇಳೆಯೂ ಅಭಿಮಾನಿಯೊಬ್ಬರಿಂದ ಇದೇ ಮಾದರಿಯ ಟೀಕೆಯನ್ನು ಎದುರಿಸಿದರು. ಸಿಟ್ಟಿಗೆದ್ದ ಬಾಬರ್​ ಹಲ್ಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಜಿಂಬಾಬರ್​ ವಿರುದ್ಧ ಕರೆದ ತಕ್ಷಣ ಬಾಬರ್ ಪಾಕಿಸ್ತಾನ ಕ್ರಿಕೆಟ್​​ ಅಭಿಮಾನಿಗಳ ಮೇಲೆ ತಾಳ್ಮೆ ಕಳೆದುಕೊಂಡರು. ತಕ್ಷಣ ಆತನನ್ನು ಹತ್ತಿರ ಕರೆದು ಹೊಡೆಯುವ ಬೆದರಿಕೆ ಹಾಕಿದರು. ಪೇಶಾವರ್ ಝಲ್ಮಿ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಿಎಸ್ಎಲ್ 2024 ಪಂದ್ಯದಲ್ಲಿ ಬಾಬರ್ ಟೀಕೆಗೆ ಗುರಿಯಾಗಿದ್ದರು. ಅವರು ಜಿಂಬಾಬ್ವೆಯಂತಹ ತಂಡಗಳ ವಿರುದ್ಧ ಮಾತ್ರ ಪ್ರದರ್ಶನ ನೀಡುತ್ತಾರೆ ಎಂದು ಆಗಾಗ್ಗೆ ಆರೋಪಿಸಲಾಗುತ್ತದೆ.

ಪಂದ್ಯಾವಳಿಯಲ್ಲಿ ಪೇಶಾವರವನ್ನು ಮುನ್ನಡೆಸುತ್ತಿರುವ ಬಾಬರ್ ಅವರನ್ನು ಅಭಿಮಾನಿಗಳು ಪದೇ ಪದೇ ಕೆಣಕಿದರು. ಇದರಿಂದ ಕೆರಳಿದ ಅವರು ಹೊಡೆಯುವ ಬೆದರಿಕೆ ಹಾಕಿದರು.

ಗೆದ್ದ ಪೇಶಾವರ ತಂಡ

ಪಿಎಸ್ಎಲ್ 2024 ರಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ನಂತರ, ಝಲ್ಮಿ ಮುಲ್ತಾನ್ ವಿರುದ್ಧ ಪುಟಿದೆದ್ದರು. ಋತುವಿನ ಮೊದಲ ಗೆಲುವನ್ನು ದಾಖಲಿಸಿದರು. ಬಾಬರ್ 26 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 31 ರನ್ ಗಳಿಸುವುದರೊಂದಿಗೆ ಅವರು ಪಂದ್ಯವನ್ನು 5 ರನ್​ಗಳಿಂದ ಗೆದ್ದರು. ಮೂರು ಪಂದ್ಯಗಳಿಂದ 57ರ ಸರಾಸರಿಯಲ್ಲಿ 171 ರನ್ ಗಳಿಸಿರುವ ಬಾಬರ್, 143.69ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು 2 ಅರ್ಧಶತಕಗಳು, 16 ಬೌಂಡರಿಗಳು ಮತ್ತು 5 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ : Rishabh Pant : ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ ರಿಷಭ್ ಪಂತ್​

ಬಲಗೈ ಬ್ಯಾಟ್ಸ್ಮನ್ ಅಂತಾರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದಾಗ್ಯೂ . ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರಲ್ಲಿ ವಿಫಲವಾಗಿದ್ದರು. ಬಳಿಕ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ವಿಫಲರಾದರು.

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಅವರು ಫಾರ್ಮ್​ಗೆ ಮರಳಿದರು. ಸತತ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಅವರ ಸ್ಟ್ರೈಕ್ ರೇಟ್ ತಂಡವನ್ನು ನಿರಾಸೆಗೊಳಿಸಿದೆ. ವಿಶ್ವ ಕಪ್​ ಪಂದ್ಯಾವಳಿಯ ನಂತರ ಬಾಬರ್ ಎಲ್ಲಾ ಸ್ವರೂಪಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Exit mobile version