ಲಂಡನ್: ಬೆಂಗಳೂರು ಮೂಲದ ವಿಜ್ಞಾನಿ ಡಾ. ಮಹಿಮಾ ಸ್ವಾಮಿ ಅವರಿಗೆ ಯುರೋಪಿಯನ್ ಮಾಲಿಕ್ಯುಲರ್ ಬಯೋಲಜಿ ಆರ್ಗನೈಸೇಶನ್ (EMBO) ಉನ್ನತ ಮಟ್ಟದ ಪ್ರಶಸ್ತಿ ನೀಡಿ ( Mahima Swamy) ಗೌರವಿಸಿದೆ.
ಯುರೋಪ್‌ನಲ್ಲಿ ಜೀವಶಾಸ್ತ್ರದಲ್ಲಿ ಸಂಶೋಧನೆ ಮತ್ತು ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಇಎಂಬಿಒದ ವಿಜ್ಞಾನಿಗಳ ನೆಟ್ ವರ್ಕ್‌ಗೆ ಡಾ. ಮಹಿಮಾ ಸ್ವಾಮಿ ಅವರನ್ನು ಸೇರಿಸಲಾಗಿದೆ. ಈ ಗೌರವ ಲಭಿಸಿರುವುದಕ್ಕೆ ಸಂತಸವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಎಂಬಿಒ ಯುವ ವಿಜ್ಞಾನಿ ಪ್ರಶಸ್ತಿಯ ಭಾಗವಾಗಿ 15,000 ಯೂರೊ ಸಿಗಲಿದೆ. ಹೆಚ್ಚುವರಿ ಅನುದಾನವಾಗಿ 10,000 ಯೂರೊ ದೊರೆಯಲಿದೆ. ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಬಗ್ಗೆ ಮಹಿಮಾ ಸ್ವಾಮಿ ಸಂಶೋಧನೆ ನಡೆಸಿದ್ದಾರೆ.