Site icon Vistara News

Bangalore Rain News: ಬೆಂಗಳೂರಿಗೆ ಮುಂಗಾರು ಶಾಕ್‌, ನೂರಾರು ಮರಗಳು ಧರೆಗೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲೇ ಲಾಕ್!‌

bangalore rain news

ಬೆಂಗಳೂರು: ಮುಂಗಾರು (monsoon) ಸಾಕಷ್ಟು ಅಬ್ಬರದಿಂದಲೇ ರಾಜಧಾನಿಯನ್ನು (Bangalore rain news) ಪ್ರವೇಶಿಸಿದೆ. ನಿನ್ನೆ ಸಂಜೆಯಿಂದ ಸುರಿದ ಭಾರಿ ಮಳೆಗೆ ನಗರದ (Bengaluru rain news) ಹಲವು ಕಡೆ ಮರಗಳು (trees fall) ಮುರಿದುಬಿದ್ದಿವೆ. ತಗ್ಗು ಪ್ರದೇಶಗಳಿಗೆ ನೀರು (water clogging) ನುಗ್ಗಿದೆ. ಬೆಳ್ಳಂದೂರಿನ ಒಂದು ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಗಳಲ್ಲೇ ಲಾಕ್‌ ಆಗಿದ್ದಾರೆ.

“ನಿನ್ನೆ ಸುರಿದ ಭಾರಿ ಮಳೆಗೆ ನಗರದಲ್ಲಿ ಸುಮಾರು 260ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಬಹುತೇಕ ಜಯನಗರ. ಬಸವನಗುಡಿ ಸುತ್ತಮುತ್ತಲಿನಲ್ಲಿ 100ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಸದ್ಯ ಮರಗಳನ್ನು ತೆರವು ಮಾಡೋದಕ್ಕೆ ಬಿಬಿಎಂಪಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆ ಮಾಡುತ್ತಿದ್ದಾರೆ. ಮೊದಲು ಸಂಚಾರಕ್ಕೆ ಅನುಕೂಲ ಕಲ್ಪಿಸಲು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳ ತೆರವು ಮಾಡುತ್ತಿದ್ದೇವೆ. ಸಂಜೆ ವೇಳೆಗೆ ನಗರದ ಬಹುತೇಕ ಕಡೆ ಮರಗಳನ್ನು ತೆರವು ಮಾಡುತ್ತೇವೆ” ಎಂದು ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯಸ್ಥರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಬೃಹತ್ ಗಾತ್ರದ ಮರಗಳು, ಸಣ್ಣ ಮರಗಳು ಹಾಗೂ ಕೊಂಬೆಗಳು ಧರಾಶಾಯಿಯಾದವು. ಬಸವೇಶ್ವರನಗರದಲ್ಲೂ ಮರಗಳು ಧರೆಗುರುಳಿವೆ. 3ನೇ ಮುಖ್ಯರಸ್ತೆಯಲ್ಲಿ ಕಾರ್ ಮೇಲೆ ಮರ ಬಿದ್ದು ಕಾರ್ ಜಖಂ ಆಗಿದೆ. ಜಯನಗರದ ಕೃಷ್ಣರಾವ್ ಪಾರ್ಕ್ ಬಳಿ ಬೃಹತ್ ಗಾತ್ರದ ಮರ ಟ್ರಾನ್ಸ್‌ಫಾರ್ಮರ್‌ ಮೇಲೆ ಬಿದ್ದು ರಾತ್ರಿ ಇಡೀ ವಿದ್ಯುತ್ ಕಟ್‌ ಆಗಿದೆ. ಜಯನಗರ ಸುತ್ತಮುತ್ತ ಸುಮಾರು ‌50ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಗಿರಿನಗರದಲ್ಲಿ ಮರ ಬಿದ್ದು ಕಾರು ಹಾಗೂ ದ್ವಿಚಕ್ರ ವಾಹನ ಸಂಪೂರ್ಣ ನಜ್ಜು ಗುಜ್ಜು ಆಗಿದೆ.

ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡವು. ಕೊತ್ತನೂರು ಭಾಗದಲ್ಲಿ ರಸ್ತೆ ಹಾಗೂ ಮನೆಗಳು ಪೂರ್ತಿ ಸಂಪೂರ್ಣ ಜಲಾವೃತವಾಗಿದೆ. ಮನೆಯೊಳಗೆ ನೀರು ತುಂಬಿ ಮನೆ ಮಾಲೀಕರು ಇಡೀ ರಾತ್ರಿ ಜಾಗರಣೆ ಮಾಡಿದರು. ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ತುಂಬಿದೆ. ನಗರದ 8 ವಲಯಗಳಲ್ಲಿ ಮನೆಗಳಿಗೆ ನೀರು ತುಂಬಿ ಅಕ್ಕಿ, ಬೇಳೆ ಸೇರಿದಂತೆ ಇತರೆ ವಸ್ತುಗಳು ಹಾಳಾಗಿವೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

ರಸ್ತೆಯಲ್ಲಿ ನೀರು ನಿಂತಿದ್ದು ಒಂದು ತರಹದ ಸಮಸ್ಯೆಯಾದರೆ, ವಿದ್ಯುತ್ ಕಂಬಗಳದ್ದು ಮತ್ತೊಂದು ಸಮಸ್ಯೆ. ಕಂಬಗಳು ಮುರಿದು ಬಿದ್ದಿವೆ. ಉಮಾ ಥಿಯೇಟರ್ ಬಳಿ 4 ವಿದ್ಯುತ್ ಕಂಬಗಳು ಗಾಳಿಯಿಂದ ಅರ್ಧಂಬರ್ಧ ಬಿದ್ದಿವೆ. 4 ವಿದ್ಯುತ್ ಕಂಬಗಳ ವಯರ್ ರಸ್ತೆಯಲ್ಲಿ ಬಿದ್ದರೆ ವಾಹನ ಸವಾರರ ಜೀವಕ್ಕೆ ಹಾನಿ ಸಾಧ್ಯತೆ ಇದೆ. ಲಾಲ್‌ಬಾಗ್‌ನಲ್ಲಿ ಮರ ಬಿದ್ದು ಕಾಂಪೌಂಡ್ ಕುಸಿತವಾಗಿದೆ.

ನಿನ್ನೆ ಸುರಿದ ಮಳೆಗೆ ಬೆಳ್ಳಂದೂರಿನ ಗ್ರೀನ್ ಎಲಿಗೆನ್ಸ್ ಅಪಾರ್ಟ್ಮೆಂಟ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ನಾಲ್ಕು ಕಾರು, ಬೈಕ್‌ಗಳು ಮುಳುಗಿವೆ. ರಾಜಕಾಲುವೆ ನೀರು ಅಪಾರ್ಟ್ಮೆಂಟ್‌ನೊಳಗೆ ನುಗ್ಗಿದೆ. ಕಳೆದ ಮೂರು ದಿನದಿಂದ ಅಪಾರ್ಟ್ಮೆಂಟ್‌ಗೆ ವಿದ್ಯುತ್‌ ಸಂಪರ್ಕ ಕಟ್‌ ಆಗಿದೆ. ನಿವಾಸಿಗಳು ಅಪಾರ್ಟ್ಮೆಂಟ್‌ನಲ್ಲೇ ಲಾಕ್ ಆಗಿದ್ದಾರೆ. ಅಪಾರ್ಟ್ಮೆಂಟ್ ಬೇಸ್‌ಮೆಂಟ್‌ನಿಂದಲೇ ಓಡಾಡಲು ದಾರಿ ಆಗಿರುವ ಕಾರಣ, ಕತ್ತಿನವರೆಗೆ ನಿಂತಿರುವ ನೀರಿನಲ್ಲಿ ಓಡಾಡಲಾಗದೆ 40 ಫ್ಲಾಟ್ ಮಾಲೀಕರು ಅಲ್ಲೇ ಬಾಕಿ ಆಗಿದ್ದಾರೆ. ಪಕ್ಕದ ಕಾಂಪೌಂಡ್‌ಗೆ ಏಣಿ ಹಾಕಿ ಓಡಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Exit mobile version