ಬೆಂಗಳೂರು: ಟೀಮ್ ಇಂಡಿಯಾದ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿ ಟಿ20 ವಿಶ್ವ ಕಪ್ (T20 World Cup 2024) ಬಳಿಕ ಮುಕ್ತಾಯಗೊಳ್ಳಲಿದೆ. ಆ ಬಳಿಕ ನೂತನ ಕೋಚ್ ಆಯ್ಕೆಯಾಗಲಿದ್ದು ಗೌತಮ್ ಗಂಭೀರ್ (Gautam Gambhir) ಸಂಭಾವ್ಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಅವರು ಕೋಚ್ ಆಗಲು ಬಿಸಿಸಿಐ ಆಹ್ವಾನವನ್ನು ಒಪ್ಪುವ ಮೊದಲು ಹಲವಾರು ಷರತ್ತುಗಳನ್ನು ಒಡ್ಡಿದ್ದರು. ಅದರಲ್ಲೊಂದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದಲ್ಲಿ ಇರಬಾರದು ಎಂಬುದು. ಇದೂ ಸೇರಿದಂತೆ ಹಲವಾರು ಷರತ್ತುಗಳ ಬೇಡಿಕೆ ಇಟ್ಟಿದ್ದರು. ಅವೆಲ್ಲದಕ್ಕೂ ಇದೀಗ ಬಿಸಿಸಿಐ ಒಪ್ಪಿಗೆ ನೀಡಿದೆ.
ವಾರದ ಆರಂಭದಲ್ಲಿ ಗೌತಮ್ ಗಂಭೀರ್ ಈ ಹುದ್ದೆಗೆ ಕರೆಯಲಾಗಿದ್ದ ಸಂದರ್ಶನದಲ್ಲಿ ಭಾಗವಹಿಸಿದ್ದರು. ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಯೊಂದಿಗೆ ಸಂವಹನ ನಡೆಸಿದ್ದರು. ಈ ವೇಳೆ ಅವರು ಒಂದಿಷ್ಟು ಡಿಮ್ಯಾಂಡ್ಗಳನ್ನು ಮುಂದಿಟ್ಟಿದ್ದರು. ಸಿಎಸಿಯಿಂದ ಸಂದರ್ಶನಕ್ಕೆ ಒಳಗಾದ ಏಕೈಕ ಅಭ್ಯರ್ಥಿ ಗಂಭೀರ್ ಅಲ್ಲ. ಭಾರತದ ಮಾಜಿ ಕ್ರಿಕೆಟಿಗ ಡಬ್ಲ್ಯುವಿ ರಾಮನ್ ಕೂಡ ಸಂದರ್ಶನದಲ್ಲಿ ಭಾಗವಹಿಸಿದ್ದರು.
ವರದಿಗಳ ಪ್ರಕಾರ, ಇಬ್ಬರೂ ಅಭ್ಯರ್ಥಿಗಳು ತಮ್ಮ ಸಂದರ್ಶನದಲ್ಲಿ ಸಿಎಸಿಯನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗೌತಮ್ ಗಂಭೀರ್ ಗೆ ಅವಕಾಶ ಕೊಡುವ ಮೊದಲು ಬಿಸಿಸಿಐಗೂ ಸಾಕಷ್ಟು ಕೆಲಸಗಳಿವೆ. ಯಾಕೆಂದರೆ ಅವರ ಷರತ್ತುಗಳು ದೊಡ್ಡ ಮಟ್ಟಿನವು. ಟೀಕೆಗಳನ್ನು ಎದುರಿಸಬೇಕಾಗಬಹುದು.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಷರತ್ತು
ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಹುದ್ದೆಗೆ ಸಮ್ಮತಿ ನೀಡುವ ಮೊದಲು ಹಲವಾರು ಷರತ್ತುಗಳನ್ನು ವಿಧಿಸಿದ್ದಾರೆ. ಬಿಸಿಸಿಐ ಇದೀಗ ಅವೆಲ್ಲವನ್ನೂ ಒಪ್ಪಿಕೊಂಡಿದೆ. ಭಾರತದ ಮಾಜಿ ಆರಂಭಿಕ ಆಟಗಾರ ಹೊಸ ಮುಖ್ಯ ಕೋಚ್ ಆಗಲು ಐದು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.
ಮೊದಲನೆಯ ಷರತ್ತೆಂದರೆ ಅವರು ಹೊರಗಿನಿಂದ ಯಾವುದೇ ಹಸ್ತಕ್ಷೇಪವಿಲ್ಲದೆ ತಂಡದ ಸಂಪೂರ್ಣ ನಿಯಂತ್ರಣ ಬಯಸಿರುವುದು. ತಮ್ಮದೇ ಆದ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಕೋರಿದ್ದಾರೆ. ಮೂರನೇ ಷರತ್ತು ಚಾಂಪಿಯನ್ಸ್ ಟ್ರೋಫಿ 2025 ಹಿರಿಯ ಆಟಗಾರರಿಗೆ ಕೊನೆಯ ಅವಕಾಶವಾಗಿರಬೇಕು.
ಇದನ್ನೂ ಓದಿ: T20 World Cup 2024 : ಆಸೀಸ್ ವಿರುದ್ಧ ಐತಿಹಾಸಿಕ ಗೆಲುವಿನ ಬಳಿಕ ‘ಚಾಂಪಿಯನ್’ ಹಾಡಿಗೆ ನೃತ್ಯ ಮಾಡಿದ ಅಫಘಾನಿಸ್ತಾನದ ಆಟಗಾರರು
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಗಂಭೀರ್ ನಿರ್ದಿಷ್ಟವಾಗಿ ಹಿರಿಯ ಆಟಗಾರರು ಎಂದು ಉಲ್ಲೇಖಿಸಿದ್ದಾರೆ. ಮುಂದಿನ ವರ್ಷ ಪಂದ್ಯಾವಳಿಯಲ್ಲಿ ತಂಡವು ವಿಫಲವಾದರೆ ಅವರು ದಾರಿ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಗಂಭೀರ್ ಸಂಪೂರ್ಣವಾಗಿ ಪ್ರತ್ಯೇಕ ಟೆಸ್ಟ್ ತಂಡ ಬಯಸಿದ್ದಾರೆ. ಅವರ ಕೊನೆಯ ಷರತ್ತು 2027 ರ ಏಕದಿನ ವಿಶ್ವಕಪ್ಗೆ ಮಾರ್ಗಸೂಚಿ ಸಿದ್ಧಪಡಿಸುವುದು..
ಗೌತಮ್ ಗಂಭೀರ್ ವಿಧಿಸಿರುವ ಐದು ಷರತ್ತುಗಳು ಇಲ್ಲಿವೆ
- ತಂಡದ ಸಂಪೂರ್ಣ ನಿಯಂತ್ರಣ, ಬಾಹ್ಯ ಹಸ್ತಕ್ಷೇಪ ಇರಬಾರದು
ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯನೀಡಬೇಕು - ಚಾಂಪಿಯನ್ಸ್ ಟ್ರೋಫಿ ಹಿರಿಯ ಆಟಗಾರರಿಗೆ ಕೊನೆಯ ಅವಕಾಶ
ಪ್ರತ್ಯೇಕ ಟೆಸ್ಟ್ ತಂಡ ರಚಿಸುವುದು
2027ರ ವಿಶ್ವಕಪ್ ಗೆ ಮಾರ್ಗಸೂಚಿ ಸಿದ್ಧಪಡಿಸುವುದು - ಕೊಹ್ಲಿ ಮತ್ತು ರೋಹಿತ್ ಮಾತ್ರ ಹಿರಿಯ ಆಟಗಾರರೆಲ್ಲರೂ ಜಾಗ ಖಾಲಿ ಮಾಡುವುದು