Site icon Vistara News

IPL 2024 : ಎರಡು ಹಂತಗಳಲ್ಲಿ ಐಪಿಎಲ್ 2024ರ ವೇಳಾಪಟ್ಟಿ ಬಿಡುಗಡೆ?

IPL 2024

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2024ರ (IPL 2024) ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾಕೆಂದರೆ ಬಿಸಿಸಿಐ ಐಪಿಎಲ್​ಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕಾಗಿದೆ. ಐಪಿಎಲ್​ ಮಾರ್ಚ್ 22 ರಂದು ಪ್ರಾರಂಭವಾಗುವ ಸಾಧ್ಯತೆಯಿದೆಯಾದರೂ ಬಿಸಿಸಿಐ ವೇಳಾಪಟ್ಟಿಯ ಬಗ್ಗೆ ಇನ್ನೂ ಮಾತನಾಡುತ್ತಿಲ್ಲ. ಆದರೆ ಪಂದ್ಯಗಳ ಮೊದಲಾರ್ಧದ ವೇಳಾಪಟ್ಟಿ ಬಿಡುಗಡೆ ಮಾಡಲು ಭಾರತೀಯ ಮಂಡಳಿ ಯೋಜಿಸುತ್ತಿದೆ ಎಂದು ಕ್ರೀಡಾವೆಬ್​ಸೈಟ್​ ಒಂದು ವರದಿ ಮಾಡಿದೆ. ಅಂತೆಯೇ ಎಲ್ಲಾ ಪಂದ್ಯಗಳು ಭಾರತದಲ್ಲಿಯೇ ನಡೆಯಲಿವೆ ಎಂದು ಹೇಳಲಾಗಿದೆ.

ಐಪಿಎಲ್ 2024 ಅನ್ನು ಭಾಗಶಃ ಭಾರತದ ಹೊರಗೆ ನಡೆಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪಂದ್ಯಾವಳಿಯನ್ನು ಭಾಗಶಃ ಸ್ಥಳಾಂತರಿಸಲು ಬಿಸಿಸಿಐಗೆ ಮನಸ್ಸಿನಲ್ಲ. “ಚರ್ಚೆಗಳು ಮತ್ತು ಯೋಜನೆಗಳು ನಡೆಯುತ್ತಿವೆ. ನಾವು ಚುನಾವಣಾ ದಿನಾಂಕಗಳ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿದ್ದೇವೆ. ಇದರಿಂದ ನಾವು ವೇಳಾಪಟ್ಟಿ ತಯಾರಿಸಬಹುದು. ಆದರೆ ಚುನಾವಣಾ ದಿನಾಂಕಗಳು ಬಿಡುಗಡೆಯಾಗಲು ಹೆಚ್ಚು ಸಮಯ ತೆಗೆದುಕೊಂಡರೆ, ನಾವು ಭಾಗಶಃ ವೇಳಾಪಟ್ಟಿ ಘೋಷಿಸಬಹುದು. ಐಪಿಎಲ್ ಭಾರತದಿಂದ ಹೊರಹೋಗುವುದನ್ನು ನೋಡಲು ಯಾರೂ ಬಯಸುವುದಿಲ್ಲ. ನಮಗೂ ಬೇಕಾಗಿಲ್ಲ. ನಾವು ಶೀಘ್ರದಲ್ಲೇ ಎಲ್ಲವನ್ನೂ ಅಂತಿಮಗೊಳಿಸುತ್ತೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವೇಳಾಪಟ್ಟಿಯನ್ನು ಯಾವಾಗ ಪ್ರಕಟಿಸಲಿದೆ?

ಈ ವಾರದ ಆರಂಭದಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು 2024 ರ ಲೋಕಸಭಾ ಚುನಾವಣೆಯ ದಿನಾಂಕಗಳ ಬಗ್ಗೆ ಬಿಸಿಸಿಐ ಭಾರತ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ಹೇಳಲಾಗಿದೆ. ಭಾರತದ ಚುನಾವಣಾ ಆಯೋಗದ (ಇಸಿಐ) ಇತ್ತೀಚಿನ ಮಾಹಿತಿ ಪ್ರಕಾರ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ ಮಧ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಏಪ್ರಿಲ್16 ರ ತಾತ್ಕಾಲಿಕ ದಿನಾಂಕದೊಂದಿಗೆ ಅಧಿಸೂಚನೆಯನ್ನು ಕಳುಹಿಸಿದ್ದಾರೆ. ಆ ವೇಳೆಗೆ ಅವರು ಎಲ್ಲವನ್ನೂ ಸಿದ್ಧಪಡಿಸಲು ಯೋಜಿಸಿದ್ದಾರೆ.

ಇದು ಕೇವಲ ತಾತ್ಕಾಲಿಕ ದಿನಾಂಕವಾಗಿದ್ದರೂ, ಬಿಸಿಸಿಐ ಅವುಗಳ ಮೇಲೆ ನಿಗಾ ಇಟ್ಟಿದೆ. ಇದಕ್ಕೆ ಕಾರಣ 2024ರ ಟಿ20 ವಿಶ್ವಕಪ್​​ ಹಾಗ ಟಿ20 ವಿಶ್ವಕಪ್. ಇವೆರಡರ ನಡುವೆ ಬಿಸಿಸಿಐಗೆ ಈ ಬಾರಿ ಯಾವುದೇ ಬಫರ್ ಅವಧಿ ಇಲ್ಲ. ಆದ್ದರಿಂದ ಫೆಬ್ರವರಿ ಮಧ್ಯದ ವೇಳೆಗೆ ಬಿಸಿಸಿಐ ಐಪಿಎಲ್ 2024 ವೇಳಾಪಟ್ಟಿಯ ಕನಿಷ್ಠ ಮೊದಲ ಭಾಗವನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಐಪಿಎಲ್ 2024 ಟೂರ್ನಿ ಹೊರಬೀಳಲಿದೆಯೇ?

ಇದು 2024 ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಅವಲಂಬಿಸಿರುತ್ತದೆ. ಚುನಾವಣಾ ದಿನಾಂಕಗಳೊಂದಿಗೆ ಘರ್ಷಣೆಯನ್ನು ತಪ್ಪಿಸಲು ಬಿಸಿಸಿಐ ಪ್ರಯತ್ನಿಸುತ್ತದೆ. ಅದಕ್ಕೆ ಅನುಗುಣವಾಗಿ ಪಂದ್ಯಾವಳಿಯನ್ನು ನಿಗದಿಪಡಿಸುತ್ತದೆ. ಚುನಾವಣಾ ಕರ್ತವ್ಯದ ಕಾರಣ ರಾಜ್ಯ ಪೊಲೀಸರು ಪೊಲೀಸ್ ರಕ್ಷಣೆಯನ್ನು ನಿರಾಕರಿಸಬಹುದು. ಇದು ಪಂದ್ಯಗಳನ್ನು ಮರು ನಿಗದಿಪಡಿಸಲು ಕಾರಣವಾಗಬಹುದು. ಅದನ್ನು ತಪ್ಪಿಸಲು ಬಿಸಿಸಿಐ ಕಾಯುತ್ತಿದೆ.

ಇದನ್ನೂ ಓದಿ : IPL 2024: ಮೇ 26 ರಂದು ನಡೆಯಲಿದೆ ಐಪಿಎಲ್ ಫೈನಲ್​ ಪಂದ್ಯ!

ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸುವವರೆಗೆ ಐಪಿಎಲ್ 2024 ರ ಎರಡನೇ ಭಾಗವು ವಿದೇಶಕ್ಕೆ ಹೋಗುವ ದೂರದ ಅವಕಾಶವಿದೆ. ಯುಎಇಗೆ ಮೊದಲ ಆದ್ಯತೆಯಾಗಿದೆ. ಪಂದ್ಯಗಳಿಗೆ ಸ್ಥಳೀಯ ಪೊಲೀಸ್ ರಕ್ಷಣೆಯೇ ಇದಕ್ಕೆ ಕಾರಣ.

Exit mobile version