ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಉದ್ಘಾಟನಾ ಸಮಾರಂಭವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 22) ನಡೆಯಿತು. ಭವ್ಯ ಸಂಜೆ ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ರೋಮಾಂಚಕ ಪ್ರದರ್ಶನಗಳು ನಡೆಯಿತು. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಸೋನು ನಿಗಮ್, ಮೋಹಿತ್ ಚೌಹಾಣ್, ನೀತಿ ಮೋಹನ್ ಮತ್ತು ಇನ್ನೂ ಅನೇಕ ಕಲಾವಿದರ ಹಲವಾರು ಹಿಟ್ ಹಾಡುಗಳ ಕೆಲವು ಭಾವಪೂರ್ಣ ಗಾಯನಗಳಿಗೆ ಪ್ರೇಕ್ಷಕರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ, ಕಲಾವಿದರು ಆಗಸ್ಟ್ 23, 2023 ರಂದು ಯಶಸ್ವಿಯಾಗಿ ಪೂರ್ಣಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ಮಿಷನ್ಗೆ ಗೌರವ ಸಲ್ಲಿಸಿದರು. ವಿಶೇಷವೆಂದರೆ, ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ (ಎಲ್ಎಂ) ಯಶಸ್ವಿಯಾಗಿ ಇಳಿಯುವುದರೊಂದಿಗೆ, ಭಾರತವು ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಮಾಜಿ ಸೋವಿಯತ್ ಒಕ್ಕೂಟದ (ಈಗ ರಷ್ಯಾ) ನಂತರ ಚಂದ್ರನ ಮೇಲೆ ಇಳಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರ ಹೊಮ್ಮಿತ್ತು.
ಇದನ್ನೂ ಓದಿ : IPL 2024 : ಈ ಬಾರಿ ಕೊಹ್ಲಿಗೇ ಆರೆಂಜ್ ಕ್ಯಾಪ್ ಎಂದ ಆರ್ಸಿಬಿ ಮಾಜಿ ಸ್ಫೋಟಕ ಬ್ಯಾಟರ್
ದೇಶವು ಐತಿಹಾಸಿಕ ಸಾಧನೆಯನ್ನು ಬಹಳ ಉತ್ಸಾಹದಿಂದ ಆಚರಿಸಿದ್ದರಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇಸ್ರೋ ವಿಜ್ಞಾನಿಗಳ ಪ್ರಯತ್ನಗಳನ್ನು ಗುರುತಿಸಲು, ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಐಪಿಎಲ್ 2024 ಉದ್ಘಾಟನಾ ಸಮಾರಂಭದಲ್ಲಿ ಲ್ಯಾಂಡಿಂಗ್ನ ವಿಶೇಷ ಗ್ರಾಫಿಕ್ ಅನ್ನು ತೋರಿಸುವ ಮೂಲಕ ಚಂದ್ರಯಾನ 3 ಮಿಷನ್ಗೆ ಗೌರವ ಸಲ್ಲಿಸಿದೆ.
ಆರ್ಸಿಬಿ ತಂಡಕ್ಕೆ ಸೋಲು
ಐಪಿಎಲ್ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ಸಿಕ್ಕಿದ್ದು ಮತ್ತೊಂದು ಉತ್ತಮ ಅಭಿಯಾನ ಆರಂಭಿಸಿದೆ. ಇಲ್ಲಿನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 173 ರನ್ ಬಾರಿಸಿತು. ಪ್ರತಿಯಾಗಿ ವಿಶ್ವಾಸದಿಂದ ಆಡಿದ ಚೆನ್ನೈ ತಂಡ 18.4 ಓವರ್ಗಳಲ್ಲಿ176 ರನ್ ಬಾರಿಸಿ 6 ವಿಕೆಟ್ ಗೆಲುವು ಸಾಧಿಸಿತು. ಇದರೊಂದಿಗೆ ಕಾರ್ತಿಕ್ ಹಾಗೂ ಅನುಜ್ ರಾವತ್ ಪ್ರಯತ್ನ ವಿಫಲಗೊಂಡಿತು.
ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 15, ರನ್, ರಚಿನ್ ರವೀಂದ್ರ 37 ರನ್, ಅಜಿಂಕ್ಯ ರಹಾನೆ 27 ರನ್, ಡ್ಯಾರಿಲ್ ಮಿಚೆಲ್ 22 ರನ್, ಶಿವಂ ದುಬೆ ಹಾಗೂ ಜಡೇಜಾ ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆರ್ಸಿಬಿ ಬೌಲರ್ಗಳು ಚೆನ್ನೈ ಸಂಘಟಿತ ಹೋರಾಟಕ್ಕೆ ಮಂಕಾದರು.
ಇನ್ನೇನು 100 ರನ್ ಒಳಗಡೆ ಗಂಟುಮೂಟೆ ಕಟ್ಟುವ ಸ್ಥಿತಿಯಲ್ಲಿದ್ದ ಆರ್ಸಿಬಿಗೆ ಆಸರೆಯಾದದ್ದು ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್. ಉಭಯ ಆಟಗಾರರು ಸೇರಿಕೊಂಡು ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿ ತಂಡದ ವೈಯಕ್ತಿಕ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 6ನೇ ವಿಕೆಟ್ಗೆ ಈ ಜೋಡಿ ಅತ್ಯಮೂಲ್ಯ 95 ರನ್ ಬಾರಿಸಿತು. ಉಭಯ ಆಟಗಾರರು ನಿಂತು ಆಡಿದ ಪರಿಣಾಮ ತಂಡ 150 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ತುಷಾರ್ ದೇಶ್ಪಾಂಡೆ ಎಸೆತ 18ನೇ ಓವರ್ನಲ್ಲಿ 25 ರನ್ ಹರಿದು ಬಂತು. ಇದರಲ್ಲಿ ರಾವುತ್ 2 ಸಿಕ್ಸರ್ ಮತ್ತು 1 ಫೋರ್ ಬಾರಿಸಿದರೆ, ಕಾರ್ತಿಕ್ ಒಂದು ಸಿಕ್ಸರ್ ಸಿಡಿಸಿದರು. 4 ಬೌಂಡರಿ ಮತ್ತು 3 ಸೊಗಸಾದ ಸಿಕ್ಸರ್ ಬಾರಿಸಿದ ಅನುಜ್ ರಾವತ್ 48 ರನ್ ಗಳಿಸಿ ಅಂತಿಮ ಎಸೆತದಲ್ಲಿ ಧೋನಿ ಅವರಿಂದ ರನೌಟ್ ಆದರು. ದಿನೇಶ್ ಕಾರ್ತಿಕ್ 26 ಎಸೆತಗಳಿಂದ 38 ರನ್ ಬಾರಿಸಿ ಅಜೇಯರಾಗಿ ಉಳಿದರು. ಸ್ಪಿನ್ ಟ್ರ್ಯಾಕ್ ಆಗಿದ್ದರೂ ಕೂಡ ಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಾಡೇಜ ತಲಾ 4 ಓವರ್ ಎಸೆದರೂ ವಿಕೆಟ್ ಕೀಳುವಲ್ಲಿ ವಿಫಲರಾದರು.
ಅದ್ಧೂರಿ ಉದ್ಘಾಟನಾ ಸಮಾರಂಭ
ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ(IPL 2024 Opening Ceremony Live) ದೊರಕಿತು. ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್(Akshay Kumar), ಟೈಗರ್ ಶ್ರಾಫ್(Tiger Shroff) ನೃತ್ಯದ ಮೂಲಕ ರಂಚಿಸಿದರೆ, ಆಸ್ಕರ್ ವಿಜೇತ ಎ.ಆರ್ ರೆಹಮಾನ್(AR Rahman), ಖ್ಯಾತ ಗಾಯಕ ಸೋನು ನಿಗಮ್(Sonu Nigam) ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುಂತೆ ಮಾಡಿದರು. ಇದರ ಜತೆಗೆ ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್ ಪಾಪ್ ಗಾಯನ ಕಣ್ಮನಸೆಳೆಯಿತು.