Site icon Vistara News

Anshuman Gaekwad : ಕ್ಯಾನ್ಸರ್ ಚಿಕಿತ್ಸೆಗಾಗಿ ಅಂಶುಮಾನ್ ಗಾಯಕ್ವಾಡ್​ಗೆ 1 ಕೋಟಿ ರೂ. ನೆರವು ನೀಡಿದ ಬಿಸಿಸಿಐ

Anshuman Gaekwad

ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್​ ತಂಡ ಪರ ಆಡಿದ ಆಟಗಾರರೊಬ್ಬರ ಆರೋಗ್ಯಕ್ಕೆ ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ. ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹಿರಿಯ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರಿಗೆ ಆರ್ಥಿಕ ನೆರವು ಕೊಡಲು ತಕ್ಷಣ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ತಮ್ಮ ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವ 71 ವರ್ಷದ ಅವರಿಗೆ ಇದು ಭರವಸೆಯಾಗಿದೆ.

ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರು ಮಿಡ್-ಡೇ ಪತ್ರಿಕೆಗೆ ಬರೆದ ತಮ್ಮ ಅಂಕಣದಲ್ಲಿ ಗಾಯಕ್ವಾಡ್ ಅವರನ್ನು ಲಂಡನ್​​ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾಗಿ ಬಹಿರಂಗಪಡಿಸಿದ್ದರು. ಈ ವೇಳೆ ಗಾಯಕ್ವಾಡ್ ಅವರ ಸ್ಥಿತಿ ಬೆಳಕಿಗೆ ಬಂದಿದೆ. ಈ ವಿಷಯ ದೊಡ್ಡ ಚರ್ಚೆಗೆ ಕಾರಣವಾಯಿತು. ದೇಶಕ್ಕಾಗಿ ಆಡಿ ಆಟಗಾರರ ಬಗ್ಗೆ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಕ್ರಿಕೆಟ್ ಮಂಡಳಿಯ ಜವಾಬ್ದಾರಿ ತೆಗೆದುಕೊಂಡಿಲ್ಲ ಎಂಬ ವಿಷಯ ಚರ್ಚೆಗಳನ್ನು ಹುಟ್ಟುಹಾಕಿತು. ಯಾಕೆಂದರೆ ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಕೂಡ ಗಾಯಕ್ವಾಡ್ ಅವರ ವೈದ್ಯಕೀಯ ನೆರವಿಗೆ ಧನಸಹಾಯ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಆದರೆ ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ.

1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ ಗಾಯಕ್ವಾಡ್ ಅವರ ಚಿಕಿತ್ಸೆಗೆ ಸಹಾಯ ಮಾಡಲು ತಮ್ಮ ಪಿಂಚಣಿ ದಾನ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದರು. ಮಾಜಿ ಆಟಗಾರರಿಗೆ ಸಹಾಯ ಮಾಡಬೇಕು ಎಂದು ಅವರು ಒತ್ತಾಯಿಸಿದ್ದರು.

ಪರಿಸ್ಥಿತಿಯನ್ನು ಅವಲೋಕಿಸಿದ ಜಯ್​ ಶಾ ವೈಯಕ್ತಿಕವಾಗಿ ಗಾಯಕ್ವಾಡ್ ಅವರ ಕುಟುಂಬದ ಜತೆ ಮಾತನಾಡಿದ್ದಾರೆ. ನೆರವಿನ ಭರವಸೆ ನೀಡಿದ್ದಾರೆ. ಗಾಯಕ್ವಾಡ್ ಅವರ ಕ್ರಿಕೆಟ್ ಪ್ರಯಾಣವು ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್​ಸರ್ಕಾರ್​​ ಈ ಹಿಂದೆ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಅವರೊಂದಿಗೆ ಮಾತನಾಡಿದ್ದರು.

ಇದನ್ನೂ ಓದಿ: Legends World Cup 2024 : ಪಾಕಿಸ್ತಾನ ತಂಡವನ್ನು ಸೋಲಿಸಿ ಲೆಜೆಂಡ್ಸ್​ ವಿಶ್ವ ಕಪ್-2024 ಟ್ರೋಫಿ ಗೆದ್ದ ಭಾರತ

40 ಟೆಸ್ಟ್ ಪಂದ್ಯಗಳು ಮತ್ತು ವಿಶ್ವಕಪ್​​ನಲ್ಲಿ ಕಾಣಿಸಿಕೊಂಡಿರುವ ಗಾಯಕ್ವಾಡ್ 32.08 ಸರಾಸರಿಯಲ್ಲಿ 1,959 ರನ್ ಗಳಿಸಿದ್ದಾರೆ. 2000 ರಿಂದ 2001 ರವರೆಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದರು ಮತ್ತು 1999 ರ ವಿಶ್ವಕಪ್ ಸಮಯದಲ್ಲಿ ಕೀನ್ಯಾ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದರು.

Exit mobile version