ಅಗರ್ತಲಾ (ತ್ರಿಪುರ): ಅನಾರೋಗ್ಯಕ್ಕೆ ಒಳಗಾಗಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ (Mayank Agarwal) ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಹಾಕಿರುವ ಅವರು ತಾವು ಆರೋಗ್ಯವಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ತ್ರಿಪುರಾದ ಐಎಲ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರ. ರಾತ್ರಿ ಐಸಿಯುನಲ್ಲಿ ಕಳೆದಿದ್ದರು. ಅವರು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
ನಾನು ಈಗ ಉತ್ತಮವಾಗಿದ್ದೇನೆ. ಪುನರಾಗಮನಕ್ಕೆ ಸಜ್ಜಾಗುತ್ತಿದ್ದೇನೆ. ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಅಗರ್ವಾಲ್ ಅವರು ತಮ್ಮ ಆಸ್ಪತ್ರೆಯ ಹಾಸಿಗೆಯಿಂದ ಅವರ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ಆಸ್ಪತ್ರೆಯು ಅಗರ್ವಾಲ್ ಅವರ ಆರೋಗ್ಯದ ಸ್ಥಿರತೆಯನ್ನು ದೃಢಪಡಿಸಿದೆ. ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಆದರೂ ಅವರಿಗೆ ಆಗಿರುವ ತೊಂದರೆಗೆ ಕಾರಣ ಗೊತ್ತಾಗಿಲ್ಲ.
ಸಂಚು ನಡೆದಿದೆ ಎಂದು ದೂರು ದಾಖಲಿಸಿದ ಮಯಾಂಕ್
ಬೆಂಗಳೂರು: ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರು ತಮ್ಮ ವಿರುದ್ದ ಸಂಚು ನಡೆದಿದೆ ಪೊಲೀಸರಿಗೆ ದೂರು (Mayank Agarwal ) ನೀಡಿದ್ದಾರೆ. ಭಾರತದ ಬ್ಯಾಟರ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ತ್ರಿಪುರಾದ ಆಸ್ಪತ್ರೆಗೆ ಸಾಗಿಸಿ ಐಸಿಯುಗೆ ದಾಖಲಿಸಲಾಗಿದೆ. ಮಯಾಂಕ್ ಆರೋಗ್ಯ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ ಘಟನೆ ಬಗ್ಗೆ ಹಲವಾರು ಊಹಾಪೂಹಗಳು ಉಂಟಾಗಿವೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಮಯಾಂಕ್ ಅಗರ್ವಾಲ್ ಅವರ ನೇತೃತ್ವದ ಕರ್ನಾಟಕ ತಂಡವು ತ್ರಿಪುರಾದಿಂದ ನವದೆಹಲಿಗೆ ತೆರಳಬೇಕಿತ್ತು, ಅಲ್ಲಿಂದ ಅವರು ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲು ರಾಜ್ಕೊಟ್ಗೆ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ಟೇಕ್ ಆಫ್ ಆದ ನಂತರ ಮಯಾಂಕ್ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣ ವಿಮಾನವನ್ನು ಲ್ಯಾಂಡ್ ಮಾಡಲಾಗಿತ್ತು.
ಇದನ್ನೂ ಓದಿ : Jay Shah : ಮೂರನೇ ಬಾರಿಗೆ ಎಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಜಯ್ ಶಾ
ಅಂತಾರಾಷ್ಟ್ರೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಳಿತಿದ್ದಾಗ ತನ್ನ ಮುಂದೆ ಒಂದು ಪೊಟ್ಟಣ ನೋಡಿದ್ದರು. ಅದನ್ನು ನೀರು ಎಂದು ಭಾವಿಸಿ ಅದನ್ನು ಕುಡಿದಿದ್ದರು. ತಕ್ಷಣ ಅವರ ಬಾಯಿಯಲ್ಲಿ ಊತ ಮತ್ತು ಹುಣ್ಣು ಆಯಿತು. ಅವರ ಆರೋಗ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಬಗ್ಗೆ ಅವರ ಮ್ಯಾನೇಜರ್ ದೂರು ನೀಡಿದ್ದಾರೆ. ನಾವು ದೂರನ್ನು ದಾಖಲಿಸುತ್ತಿದ್ದೇವೆ ಮತ್ತು ತನಿಖೆ ನಡೆಸುತ್ತೇವೆ ” ಎಂದು ಪಶ್ಚಿಮ ತ್ರಿಪುರಾ ಎಸ್ಪಿ ಕಿರಣ್ ಕುಮಾರ್ ಕೆ ಹೇಳಿದ್ದಾರೆ.
ವರದಿಗಳ ಪ್ರಕಾರ, ಮಯಾಂಕ್ ಆಕಸ್ಮಿಕವಾಗಿ ನೀರು ಎಂದು ಭಾವಿಸಿ ತನ್ನ ಎದುರಿನ ಚೀಲದಿಂದ ದ್ರವವನ್ನು ಕುಡಿದಿದ್ದರು. ಅದು ನೀರಿನಂತೆ ರುಚಿಸದಿದ್ದಾಗ ಕುಡಿಯುವುದನ್ನು ನಿಲ್ಲಿಸಿದ್ದರು. ಬಾಯಿ ಮತ್ತು ಗಂಟಲಿನಲ್ಲಿ ಸುಡುವ ಭಾವನೆ ಬಂದ ತಕ್ಷಣ ವಿಷಯ ಮಾಹಿತಿ ನೀಡಿದ್ದರು. ರೈಲ್ವೇಸ್ ವಿರುದ್ಧದ ಮುಂದಿನ ರಣಜಿ ಟ್ರೋಫಿ ಪಂದ್ಯದಲ್ಲಿ ಅಗರ್ವಾಲ್ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ಅವರ ತಂಡದ ಸದಸ್ಯರು ರಾಜ್ಕೋಟ್ ತಲುಪಿ ಮುಂಬರುವ ಮುಖಾಮುಖಿಗೆ ತಯಾರಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಹೆಲ್ತ್ ಬುಲೆಟಿನ್ ಏನು ಹೇಳುತ್ತದೆ?
ಎಎಲ್ಎಸ್ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿರುವಂತೆ ‘ಮಂಗಳವಾರ ಸಂಜೆ ಕರ್ನಾಟಕದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್, ಗಂಟಲಿನಲ್ಲಿ ಕಿರಿಕಿರಿ ಅನುಭವ ಹಾಗೂ ತುಟಿಯ ಮೇಲೆ ಗುಳ್ಳೆಗಳು ಎದ್ದಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ’ ಎಂದು ತಿಳಿಸಿದೆ.