ಬೆಳಗಾವಿ : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲೇ ನಟೋರಿಯಸ್ ಕ್ರಿಮಿನಲ್ ಒಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಆತನ ಕುಕೃತ್ಯದಿಂದ ಕೋಪಗೊಂಡ ಸ್ಥಳದಲ್ಲಿದ್ದವರು ಧರ್ಮದೇಟು ಕೊಟ್ಟಿದ್ದಾರೆ. ಪೊಲೀಸರ ಆತನನ್ನು ರಕ್ಷಿಸಿ ಮತ್ತೆ ಜೈಲಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಆರೋಪಿಯನ್ನು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆತ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮೂಲಕ ಸ್ಥಳದಲ್ಲಿದ್ದವರನ್ನು ಕೆರಳಿಸಿದ್ದ.
ನಟೋರಿಯಸ್ ಪಾತಕಿ ಜಯೇಶ್ ಪೂಜಾರಿಯಿಂದ ಪಾಕಿಸ್ತಾನ ಪರ ಘೋಷಣೆ ಕೂಗಿ ಧರ್ಮದೇಟು ತಿಂದವು. ಆತ ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರಿಂದ ಪೆಟ್ಟು ಬಿದ್ದಿದೆ. ಕೋರ್ಟ್ ಒಳ ಭಾಗದಲ್ಲೇ ಆತನಿಗೆ ಪೆಟ್ಟಿ ಬಿದ್ದಿದೆ. ಏಟು ಬೀಳುತ್ತಿದ್ದಂತೆ ಆರೋಪಿಯನ್ನು ರಕ್ಷಣೆ ಮಾಡಿ ಹೊರ ಕರೆದುಕೊಂಡು ಬಂದ ಪೊಲೀಸರು. ಅಲ್ಲಿಂದ ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಜಯೇಶ್ ಪೂಜಾರ್ ಈ ಹಿಂದೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಜೈಲಿನಿಂದ ಜೀವ ಬೆದರಿಕೆ ಹಾಕಿದ್ದ. ಹಿಂಡಲಗಾ ಜೈಲಿನಲ್ಲಿದ್ದುಕೊಂಡು ಜೀವ ಬೆದರಿಕೆ ಹಾಕಿದ್ದ. ಈ ಕೇಸ್ ಹಿನ್ನೆಲೆಯಲ್ಲಿ ಕೋರ್ಟ್ ಗೆ ಕರೆ ತರಲಾಗಿತ್ತು. ಆರೋಪಿ ಜಯೇಶ್ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಕೋರ್ಟ್ ನಲ್ಲಿ ತನ್ನ ಅಹವಾಲು ಸ್ವೀಕರಿಸುತ್ತಿಲ್ಲ ಅಂತಾ ಪಾಕ್ ಪರ ಘೋಷಣೆ ಕೂಗಿರುವುದಾಗಿ ಆತ ಹೇಳಿದ್ದಾನೆ.
ವಾಟರ್ ಮ್ಯಾನ್ ಮೇಲೆ ಠಾಣೆಯಲ್ಲಿ ಹಲ್ಲೆ ; ಡಿವೈಎಸ್ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಎಫ್ಐಆರ್
ತುಮಕೂರು: ಗ್ರಾಮ ಪಂಚಾಯತ್ ವಾಟರ್ ಮ್ಯಾನ್ ಒಬ್ಬರನ್ನು ಎಳೆದೊಯ್ದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಡಿವೈಎಸ್ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ (Tumkur News) ದೂರು ದಾಖಲಾಗಿದೆ. ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶದ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ:Chikkaballapur News : ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ
ಕುಣಿಗಲ್ ಡಿವೈಎಸ್ಪಿ, ಓಂ ಪ್ರಕಾಶ್, ಸರ್ಕಲ್ ಇನ್ ಸ್ಪೆಕ್ಟರ್ ಮಾಧವ ನಾಯಕ್, ಅಮೃತ್ತೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಶಮಂತ್ ಗೌಡ, ಎಸ್ಎಚ್ಒ ದಯಾನಂದ್ ವಿರುದ್ಧ ಎಫ್ ಐಆರ್ ದಾಖಲು ಮಾಡಲು ಕೋರ್ಟ್ ಆದೇಶಿದೆ.
ಮಾರ್ಚ್ 23ರಂದು ವಾಟರ್ ಮ್ಯಾನ್ ಗಂಗಾಧರ್ ಅವರನ್ನು ವಿಚಾರಣೆ ನೆಪದಲ್ಲಿ ಕುಣಿಗಲ್ ಠಾಣೆಗೆ ಕರೆದೊಯ್ಯಲಾಗಿತ್ತು. ಅಮೃತ್ತೂರು ಹೋಬಳಿಯ ಕೆ.ಹೆಚ್ ಹಳ್ಳಿ ಗ್ರಾ.ಪಂನ ವಾಟರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರೋ ಗಂಗಾಧರ್ ಅವರನ್ನು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೇ ಕರೆದುಕೊರಮಡು ಹೋಗಲಾಗಿತ್ತು. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.