Site icon Vistara News

Billboard Collapse : 14 ಸಾವಿಗೆ ಕಾರಣವಾದ ಹೋರ್ಡಿಂಗ್ ಕಂಪನಿ ಮಾಲೀಕನ ಮೇಲಿದೆ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್​ಗಳು

Billboard Collapse

ನವದೆಹಲಿ: ಮುಂಬೈನ ಘಾಟ್​ಕೋಪರ್​ನಲ್ಲಿ ಸೋಮವಾರ ಧೂಳು ಬಿರುಗಾಳಿ ಹಾಗೂ ಮಳೆ ಸುರಿದಾಗ ಹೋರ್ಡಿಂಗ್ ಕುಸಿತು ಬಿದ್ದು (Billboard Collapse) 14 ಮಂದಿ ಮೃತಪಟ್ಟು 74ಕ್ಕೂ ಹೆಚ್ಚು ಮಂದಿ ಗಾಯೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋರ್ಡಿಂಗ್ ಸ್ಥಾಪಿಸಿದ್ದ ಇಗೊ ಮೀಡಿಯಾ ಕಂಪನಿಯ ಮಾಲೀಕ ಭವೇಶ್ ಭಿಂಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಚ್ಚರಿಯೆಂರೆ ಭವೇಶ್​ಗೆ ಇದು ಮಾಮೂಲಿ. ಯಾಕೆಂಧರೆ ಅವರ ವಿರುದ್ಧ ಅತ್ಯಾಚಾರ ಸೇರಿದಂತೆ 20 ಕ್ಕೂ ಹೆಚ್ಚು ಪ್ರಕರಣಗಳಿವೆ. ಘಟನ ಬಳಿಕ ಭಿಂಡೆ ಪರಾರಿಯಾಗಿದ್ದು, ಆತನ ಸೆಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು ಏಜೆನ್ಸಿ ಮಾಲೀಕ ಭಿಂಡೆ 2009ರಲ್ಲಿ ಮುಲುಂಡ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ತಮ್ಮ ಅಫಿಡವಿಟ್​ನಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಮತ್ತು ನೆಗೋಷಿಯಬಲ್ ಇನ್​ಸ್ಟ್ರುಮೆಂಟ್​ ಆ್ಯಕ್ಟ್​ (ಚೆಕ್ ಬೌನ್ಸ್ ​ ಪ್ರಕರಣ ) ಅಡಿಯಲ್ಲಿ ತಮ್ಮ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದ.

ಈ ವರ್ಷದ ಜನವರಿಯಲ್ಲಿ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಭಿಡೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಚಾರ್ಜ್​ ಶೀಟ್​ ಕೂಡ ಸಲ್ಲಿಸಲಾಗಿದೆ. ಹೋರ್ಡಿಂಗ್​ಗಳು ಮತ್ತು ಬ್ಯಾನರ್​​ ಸ್ಥಾಪಿಸಲು ಭಿಂಡೆ ಭಾರತೀಯ ರೈಲ್ವೆ ಮತ್ತು ಮುಂಬೈ ನಾಗರಿಕ ಸಂಸ್ಥೆ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಯಿಂದ ಹಲವಾರು ಗುತ್ತಿಗೆಗಳನ್ನು ಪಡೆದಿದ್ದಾನೆ. ಎರಡೂ ಸಂಸ್ಥೆಗಳ ನಿಯಮಗಳನ್ನು ಹಲವಾರು ಬಾರಿ ಉಲ್ಲಂಘಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತನ ಕಂಪನಿ ವಿರುದ್ಧ ಮರ ವಿಷ ಹಾಕಿದ ಮತ್ತು ಮರ ಕಡಿಯುವ ಪ್ರಕರಣಗಳಲ್ಲಿ ದೂರು ದಾಖಲಾಗಿದೆ.

ಅತ್ಯಂತ ದೊಡ್ಡ ಹೋರ್ಡಿಂಗ್​

ಸೋಮವಾರ ಪೆಟ್ರೋಲ್​ ಸ್ಟೇಷನ್​ ಮೇಲೆ ಮೇಲೆ ಬಿದ್ದ ಹೋರ್ಡಿಂಗ್ 120X120 ಅಡಿ ರಚನೆಯಾಗಿದ್ದು, ಅದು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆಯುವಷ್ಟು ದೊಡ್ಡದಾಗಿದೆ. ಅಂದ ಹಾಗೆ ಬಿಎಂಸಿ 40X40 ಅಡಿಗಿಂತ ಹೆಚ್ಚಿನ ಗಾತ್ರದ ಜಾಹೀರಾತು ಫಲಕಗಳನ್ನು ಅನುಮತಿಸುವುದಿಲ್ಲ. ಹೀಗಾಗಿ ನಿಯಮ ಮೀರಿ ಅಳವಡಿಸಿರುವುದು ಸ್ಪಷ್ಟ.

ಇದನ್ನೂ ಓದಿ: Dog Attack : ಮನೆಯಲ್ಲಿ ಮಲಗಿಸಿದ್ದ ಐದು ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿ!

ನಗರದಲ್ಲಿನ ಎಲ್ಲಾ ಅಕ್ರಮ ಹೋರ್ಡಿಂಗ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಆದೇಶಿಸಿದ್ದೇವೆ. ನಾವು ಇಂದು ಅಭಿಯಾನ ಪ್ರಾರಂಭಿಸುತ್ತಿದ್ದೇವೆ. ಅನುಮತಿ ಪಡೆಯದ ಕಾರಣ ಈ ಪ್ರಕರಣದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹೋರ್ಡಿಂಗ್ ಗೋಚರಿಸುವಂತೆ ಕೆಲವು ಮರಗಳನ್ನು ಕತ್ತರಿಸಲಾಗಿದೆ ಎಂಬ ದೂರು ಸಹ ಬಂದಿದೆ. ಈ ಸಂಬಂಧ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಬಿಎಂಸಿ ಆಯುಕ್ತ ಭೂಷಣ್ ಗಗ್ರಾನಿ ಸುದ್ದಿಗಾರರಿಗೆ ತಿಳಿಸಿದರು.

ಬಿಎಂಸಿ ಹೆಚ್ಚುವರಿ ಆಯುಕ್ತ ಸುಧಾಕರ್ ಶಿಂಧೆ ಮಾತನಾಡಿ, ನಿಯಮ ಉಲ್ಲಂಘನೆ ವಿವಾದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಲೋಪಗಳು ಎಲ್ಲಿ ಸಂಭವಿಸಿವೆ ಎಂಬುದು ತನಿಖೆಯಿಂದ ಬಹಿರಂಗವಾಗಲಿದೆ. ಗಾಯಗೊಂಡ ಜನರನ್ನು ನೋಡಿಕೊಳ್ಳುವುದು ಬಿಎಂಸಿಯ ಪ್ರಸ್ತುತ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.

Exit mobile version